ಗಂಗಾವತಿ: ತಾಲೂಕಿನ ಆಗೋಲಿ ಗ್ರಾಪಂ ವ್ಯಾಪ್ತಿಯ ಹಂಪಸದುರ್ಗಾ ಗ್ರಾಮದಲ್ಲಿ ನರೇಗಾ ದಿವಸ್ ಆಚರಿಸಲಾಯಿತು. ನರೇಗಾ ದಿವಸ್ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಲಾಯಿತು.
ತಾಲೂಕು ನರೇಗಾ ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡಲು ಉದ್ಯೋಗ ಖಾತ್ರಿ ಯೋಜನೆ ಜಾರಿ ತರಲಾಗಿದೆ. ಯೋಜನೆ ಜಾರಿ ಬಂದು ಹದಿನೈದು ವರ್ಷಗಳಾಗಿವೆ. ಈ ಅವಧಿಯಲ್ಲಿ ಹಳ್ಳಿಗಳಲ್ಲಿನ ಸಹಸ್ರಾರು ಕುಟುಂಬಗಳು ಇದ್ದೂರಲ್ಲೇ ಉದ್ಯೋಗ ಪಡೆದಿವೆ. ನರೇಗಾದಡಿ ಹಲವಾರು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯೋಜನೆ ಎಲ್ಲರ ಮನೆ ಮಾತಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಅಳಿಸಲು ನರೇಗಾ ಸಹಕಾರಿಯಾಗಿದೆ. ಜಾಬ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ವರ್ಷದಲ್ಲಿ 100 ದಿನ ಕೆಲಸ ಕೊಡಲಾಗುತ್ತಿದೆ. ವೈಯಕ್ತಿಕ ಹಾಗೂ ಸಮುದಾಯಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.
ನರೇಗಾದಡಿ ಹಳ್ಳ, ನಾಲಾ, ಕೆರೆ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಗೊಂಡು ಬೋರ್‌ವೆಲ್‌ಗಳು ರಿಚಾರ್ಜ್ ಆಗುತ್ತವೆ. ದನಕರಗಳಿಗೆ ಕುಡಿಯಲು ನೀರು ಸಹ ದೊರೆಯುತ್ತದೆ. ಹೀಗೆ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನರೇಗಾ ಅನುಕೂಲವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ :ಉಡುಪಿ: ತಪೋವನಿ ಮಾತಾಜಿ ನಿಧನ; ಪೇಜಾವರ ಶ್ರೀ ಸಂತಾಪ
ಗ್ರಾಪಂ ಕಾರ್ಯದರ್ಶಿ ಉಮೇಶ, ತಾಲೂಕು ನರೇಗಾ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ತಾಂತ್ರಿಕ ಸಹಾಯಕ ಗ್ಯಾನಪ್ಪ, ಮೇಟಿಗಳಾದ ಅಮರೇಶ, ದುರುಗಪ್ಪ ಸಿಬ್ಬಂದಿ ಇದ್ದರು.