Advertisement

ಗ್ರಾಮೀಣರಿಗೆ ನರೇಗಾ ವರದಾನ

05:43 AM Jun 22, 2020 | Lakshmi GovindaRaj |

ಚಾಮರಾಜನಗರ: ಕೋವಿಡ್‌-19 ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಮರಳಿದ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ ವರದಾನ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ  ಕೆ.ಎಸ್‌.ಈಶ್ವರಪ್ಪ ಅವರು ಹೇಳಿದರು. ನಗರದಲ್ಲಿ ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಮತ್ತು ಆರ್ಟ್‌ ಆಫ್ ಲಿವಿಂಗ್‌ ಸಹಯೋಗದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಡಿ ಅಂತರ್ಜಲ ಚೇತನ ಯೋಜನೆಗೆ  ಚಾಲನೆ ನೀಡಿ ಇಲಾಖೆಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

Advertisement

ಕೋವಿಡ್‌-19 ಹಿನ್ನೆಲೆ‌ಯಲ್ಲಿ ಪಟ್ಟಣಗಳಿಂದ ಗ್ರಾಮೀಣ ಭಾಗಕ್ಕೆ ಹಿಂದಿರುಗಿರುವ ಹಲವರು ತಮ್ಮ ಗ್ರಾಮಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ  ನಿರ್ವಹಿಸುತ್ತಿರುವುದು, ತಾವು ಭೇಟಿ ನೀಡಿದ ಹಲವು ಜಿಲ್ಲೆಗಳ ಪ್ರವಾಸದ ವೇಳೆ ಕಂಡು ಬಂದಿದೆ. ಉದ್ಯೋಗ ಅವಕಾಶ ನೀಡುವುದರೊಂದಿಗೆ ಅವರವರ ಹೊಲ, ಬದುವಿನಲ್ಲಿ ಕೆಲಸ ವಾಗಿದ್ದು ಆಸ್ತಿಗೂ ಅನುಕೂಲವಾಗಿದೆ. ಗ್ರಾಮೀಣರಿಗೆ  ಸ್ಥಳೀಯವಾಗಿ ಹೆಚ್ಚಿನ ಮಟ್ಟದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಲಭಿಸಿದೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ ಅತಿಕ್‌ ಅಹಮದ್‌, ಆಯುಕ್ತ ಅನಿರುದ್‌ ಶ್ರವಣ್‌,  ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ನಿರಂಜನ್‌ ಕುಮಾರ್‌, ಮಹೇಶ್‌, ಜಿಪಂ ಉಪಾಧ್ಯಕ್ಷ ಮಹೇಶ್‌, ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ, ಜಿಪಂ ಸಿಇಒ ಹರ್ಷಲ್‌ ಬೋಯರ್‌, ಆರ್ಟ್‌ ಆಫ್ ಲಿವಿಂಗ್‌ ನ ತಾಂತ್ರಿಕ ಸಹಾಯಕ ರವೀಂದ್ರ  ದೇಸಾಯಿ, ಜಯರಾಂ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next