Advertisement

ದಿನ್ನಹಳ್ಳಿ: ಕೂಲಿ ಕಾರ್ಮಿಕರಿಗೆ ನರೇಗಾ ವರದಾನ

08:44 PM Jun 23, 2021 | Team Udayavani |

ಮಾಸ್ತಿ: ಲಾಕ್‌ಡೌನ್‌ನಿಂದ ಕೈಗೆ ಕೆಲಸವಿಲ್ಲದೆ ಜೀವನನಿರ್ವಹಣೆ ಮಾಡಲು ಪರದಾಡುತ್ತಿದ್ದವರಿಗೆ ನರೇಗಾದಡಿ ಉದ್ಯೋಗ ನೀಡಿ ಹೋಬಳಿಯ ದಿನ್ನಹಳ್ಳಿ ಗ್ರಾಪಂ ನೆರವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಆಸಕ್ತಿಯುಳ್ಳ ರೈತರಿಗೆ ಬದು ನಿರ್ಮಾಣ,ಕೃಷಿ ಹೊಂಡ, ರಾಜಕಾಲುವೆ ಅಭಿವೃದ್ಧಿ, ಕೆರೆ ಹೂಳು ತೆಗೆಯುವುದು, ರಸ್ತೆ ಸೇರಿ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗುತ್ತಿದೆ.

Advertisement

ದಿನಕ್ಕೆ 289 ರೂ.ಕೂಲಿಯಂತೆ ಕೆಲಸ ನೀಡಿದ್ದು, ಜನರು ಕೂಡಖುಷಿಯಿಂದ ತೊಡಗಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ದಿನ ನೂರಾರು ಮಂದಿ ಕೆಲಸಕ್ಕೆ ಬರುತ್ತಿದ್ದು, ಅವರ ಗ್ರಾಮದ ಸುತ್ತಮುತ್ತಲಿನಲ್ಲೇ ಕೆಲಸ ಕೊಡಲಾಗುತ್ತಿದೆ. ಅಲ್ಲದೆ, ಕೊರೊನಾ ನಿಯಮಪಾಲಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಿಸಲಾಗುತ್ತಿದೆ.

ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಂಡು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ ಎಂದು ದಿನ್ನಹಳ್ಳಿ ಪ್ರಭಾರ ಪಿಡಿಒ ರವೀಂದ್ರ. ಹೇಳಿದರು. ಕೊರೊನಾದಿಂದ ಸಂಕಷ್ಟ ಸಿಲುಕಿದ್ದ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದ್ದು, ಈ ಭಾಗದ ಬಡ ಕುಟುಂಬಗಳಿಗೆ ಬದುಕುವ ಆಸೆಹುಟ್ಟಿಸಿದಂತಾಗಿದೆ.

ಎಂ.ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next