Advertisement

ಕೂಲಿ ಕಾರ್ಮಿಕರಿಗೆ ನರೇಗಾ ನೆರವು

06:36 PM May 09, 2021 | Team Udayavani |

ಮುಳಬಾಗಿಲು: ಕೊರೊನಾ ಕರ್ಫ್ಯೂ ಸಂದರ್ಭದಲ್ಲಿಕೂಲಿಕಾರ್ಮಿಕರ ಕುಟುಂಬಗಳ ನಿರ್ವಹಣೆಗೆ ಉದ್ಯೋಗಖಾತ್ರಿ ಯೋಜನೆ ಸಾಕಷ್ಟು ನೆರವಾಗಲಿದೆ ಎಂದು ಶಾಸಕಎಚ್‌.ನಾಗೇಶ್‌ ಹೇಳಿದರು.

Advertisement

ನರೇಗಾ ತಾಂತ್ರಿಕ ಸಿಬ್ಬಂದಿಗೆ ಯೋಜನೆಯನ್ನುಸಮರ್ಪಕವಾಗಿ ಜಾರಿಗೊಳಿಸಲು ಅನುಕೂಲವಾಗಲಿ ಎಂದುನಗರದ ತಾಪಂ ಕಚೇರಿಯಲ್ಲಿ ಪ್ರಾರಂಭಿಸಲಾದ ಗಣಕಯಂತ್ರಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಚಟುವಟಿಕೆ,ಜೀವನಾಧಾರಿತ ಕಾರ್ಯಕ್ರಮಗಳಿಗೆ ನರೇಗಾದಲ್ಲಿ ಅವಕಾಶಕಲ್ಪಿಸಲಾಗಿದೆ ಎಂದು ವಿವರಿಸಿದರು.

ತಾಲೂಕಿನ ಪ್ರತಿ ಪಂಚಾಯ್ತಿಗೆ 5 ಕೋಟಿ ರೂ.ನಂತೆಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಸಹಪಡೆದುಕೊಳ್ಳಲಾಗಿದೆ. ಅನುಮೋದನೆ ಆಗಿರುವ ಪ್ರತಿಕಾರ್ಯಕ್ರಮವೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ತಾಲೂಕಿನಲ್ಲಿ ನಿರ್ಗತಿಕರಿಗೆ ಸೂರು ಕಲ್ಪಿಸಲು ಫ‌ಲಾನುಭವಿಗಳ ಪಟ್ಟಿಯನ್ನು ಸರ್ಕಾರ ಅನುಮೋದಿಸಿದೆ.ಪ್ರತಿ ತಾಲೂಕಿಗೆ 600 ಮನೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ನಮ್ಮ ತಾಲೂಕು ಹಿಂದುಳಿದಿದ್ದು, ಹೆಚ್ಚುವರಿ ಮನೆಮಂಜೂರು ಮಾಡಲು ವಸತಿ ಸಚಿವ ಸೋಮಣ್ಣ, ಸಿಎಂ ಬಳಿಮನವಿ ಮಾಡಿದ ಪರಿಣಾಮ 1318 ಮನೆ ಮಂಜೂರುಮಾಡಲಾಗಿದೆ ಎಂದು ಹೇಳಿದರು.

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್‌, ಹಾಸಿಗೆ ಕೊರತೆ ಆಗಬಾರದೆಂದು ನಗರದಲ್ಲಿನ ಹಳೇ ನ್ಯಾಯಾಲಯಕಟ್ಟಡವನ್ನು ಕೋವಿಡ್‌ ಕೇಂದ್ರವನ್ನಾಗಿ ಮಾರ್ಪಡಿಸಲಾಗುತ್ತಿದೆ. ಅಲ್ಲಿ 70 ಹಾಸಿಗೆಗಳ ವ್ಯವಸ್ಥೆಯೊಂದಿಗೆ ಆಕ್ಸಿಜನ್‌ ಸಹಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ತಾಪಂ ಇಒ ಸಿ.ಶ್ರೀನಿವಾಸ್‌, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ, ಸಿಪಿಐ ಗೋಪಾಲ್‌ನಾಯಕ್‌,ಗೊಲ್ಲಹಳ್ಳಿ ಜಗದೀಶ್‌, ಕಾಡೇನಹಳ್ಳಿ ರವಿಕುಮಾರ್‌, ನರೇಗಾತಾಂತ್ರಿಕ ಸಂಯೋಜಕ ರಾಜೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next