Advertisement

ನಾರಾಯಣನ ಸಾಹಸಗಳು!

07:30 AM Mar 23, 2018 | |

ಒಂದು ವರ್ಷದ ಹಿಂದೆ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಕಥೆಯನ್ನು ಮಾಡಿಟ್ಟುಕೊಂಡಿದ್ದರಂತೆ ರಕ್ಷಿತ್‌ ಶೆಟ್ಟಿ. ಕ್ರಮೇಣ ಬದಲಾಗಿ ಆಗಿ, ಈಗ ಉಳಿದಿರುವುದು ಒಂದು ಪಾತ್ರ ಮತ್ತು ದೃಶ್ಯ ಮಾತ್ರ. ಮಿಕ್ಕೆಲ್ಲವೂ ಬದಲಾಗಿದೆ. ಹೀಗೆ ಬದಲಾದ ಕಥೆಯನ್ನು
ಚಿತ್ರ ಮಾಡುವುದಕ್ಕೆ  ಹೊರಟಿದ್ದಾರೆ ರಕ್ಷಿತ್‌ ಮತ್ತು ತಂಡದವರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ  ಬಾಗಲಕೋಟೆಯಲ್ಲಿ ಪ್ರಾರಂಭವಾಗಿದೆ.

Advertisement

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ “ಕಿರಿಕ್‌ ಪಾರ್ಟಿ’ಗೂ ಮುನ್ನವೇ ಪ್ರಾರಂಭವಾಗಬೇಕಿತ್ತಂತೆ. ಆದರೆ, ಬಜೆಟ್‌ ಜಾಸ್ತಿಯಾದ ಕಾರಣ ಆಗ ಚಿತ್ರವನ್ನು ಕೈಬಿಡಲಾಗಿದೆ. ಈಗ ಬಜೆಟ್‌ ಇನ್ನಷ್ಟು ಹೆಚ್ಚಿದೆಯಂತೆ. ಹೇಗೆ ಎಂದರೆ, ಇದುವರೆಗೂ ರಕ್ಷಿತ್‌ ಅವರ ಯಾವ ಚಿತ್ರಕ್ಕೂ ಸೆಟ್‌ ಹಾಕಿರಲಿಲ್ಲ. ಈಗ ಈ ಚಿತ್ರಕ್ಕೆ ಆರು ವಿಭಿನ್ನ ಸೆಟ್‌ಗಳನ್ನು ಹಾಕಲಾಗುತ್ತಿದೆಯಂತೆ. ಕಂಠೀರವ ಸ್ಟುಡಿಯೋದಲ್ಲಿ ಸೆಟ್‌ ಹಾಕಲಾಗುತ್ತಿದ್ದು, ಸುಮಾರು ಐದು ತಿಂಗಳ ಕಾಲ ಒಂದು ಫ್ಲೋರ್‌ ಬ್ಲಾಕ್‌ ಮಾಡಲಾಗುತ್ತದೆ. ಒಂದು ಸೆಟ್‌ನಲ್ಲಿ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಅದನ್ನು ತೆಗೆದು ಇನ್ನೊಂದನ್ನು ಹಾಕಲಾಗುವುದಂತೆ. ಜೊತೆಗೆ ಗ್ರಾಫಿಕ್ಸ್‌ ಸಹ ಈ  ಚಿತ್ರದಲ್ಲಿ ಹೆಚ್ಚಿರಲಿದೆಯಂತೆ.

“ಇಲ್ಲಿ ನಾಯಕ ವಿಪರೀತ ಬುದಿಟಛಿವಂತ. ಹಾಗಾಗಿ ಅವನ ಪಾತ್ರ ಮತ್ತು ಚಿತ್ರದ ಕಥೆಯನ್ನು ಬರೆಯುವುದಕ್ಕೆ ಸಾಕಷ್ಟು ಸಮಯ ಹಿಡಿಯಿತು. ಇದು 80ರ ದಶಕದಲ್ಲಿ ನಡೆಯುವ ಕಥೆ. ಬಹಳಷ್ಟು ಪಾತ್ರಗಳಿವೆ. ಎಲ್ಲಾ ಪಾತ್ರಗಳನ್ನು ಬರೆಯೋದೇ ಒಂದು ಸವಾಲಾಗಿತ್ತು. ಚಿತ್ರ ಮುಗಿಯುವಾಗ ಕನಿಷ್ಠ 30 ಪಾತ್ರಗಳಾದರೂ ಜನರ ಮನಸ್ಸಿನಲ್ಲುಳಿಯುತ್ತದೆ’ ಎನ್ನುತ್ತಾರೆ ರಕ್ಷಿತ್‌.

ಇಲ್ಲಿ ರಕ್ಷಿತ್‌ಗೆ ನಾಯಕಿಯಾಗಿ ಸಾನ್ವಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಬಾಲಾಜಿ ಮನೋಹರ್‌ ಮತ್ತು ಪ್ರಮೋದ್‌ ಶೆಟ್ಟಿ ನೆಗೆಟಿವ್‌ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೆ ರಘು ಪಾಂಡೇಶ್ವರ್‌, ಚಂದನ್‌, ಸಲ್ಮಾನ್‌, ಮಧುಸೂಧನ್‌ ಸೇರಿದಂತೆ
ಹಲವರು ನಟಿಸುತ್ತಿದ್ದಾರೆ. ಉಲ್ಲಾಸ್‌ ಎನ್ನುವವರು ಕಲಾ ನಿರ್ದೇಶನ ಮಾಡಿದರೆ, ಅರುಂಧತಿ ವಸಉ ವಿನ್ಯಾಸ
ಮಾಡುತ್ತಿದ್ದಾರೆ. ಇನ್ನು ಚರಣ್‌ ರಾಜ್‌ ಅವರ ಸಂಗೀತ ಮತ್ತು ಕರಮ್‌ ಚಾವ್ಲಾ ಅವರ ಛಾಯಾಗ್ರಹಣವಿದೆ. ಈ ಚಿತ್ರವನ್ನು ಸಚಿನ್‌ ನಿರ್ದೇಶಿಸಿದರೆ, ರಕ್ಷಿತ್‌, ಪುಷ್ಕರ್‌ ಮತ್ತು ಪ್ರಕಾಶ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next