ಬೆಂಗಳೂರು: ನಾರಾಯಣ ಪುರ ಎಡದಂಡೆ ಕಾಲುವೆ ಯೋಜನೆ ನಮ್ಮದೆಂದು ಬೀಗುತ್ತಿರುವ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಅವರೇ, ಸುಳ್ಳು ಹೇಳುವ ಚಾಳಿಯನ್ನು ಬಿಡಿ. ದಾಖಲೆಗಳು ಇಲ್ಲಿವೆ, ಕಣ್ತೆರೆದು ನೋಡಿ ಎಂದು ಬಿಜೆಪಿ ಟ್ವೀಟ್‌ನಲ್ಲಿ ಕೆಲ ದಾಖಲೆಗಳನ್ನು ಅಪ್‌ಲೋಡ್ ಮಾಡಿದೆ.
ನಾರಾಯಣ ಎಡದಂಡೆ ಕಾಲುವೆ ಯೋಜನೆಯ ಮೂರನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಡಬಲ್ ಎಂಜಿನ್ ಸರಕಾರದ ಕಡೆಯಿಂದ ಭೂಸ್ವಾಧೀನ, ಪುನರ್ವಸತಿ ಹಾಗೂ ಪುನಃಶ್ಚೇತನ ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.
2011-12ನೇ ಸಾಲಿನಲ್ಲಿ ನ್ಯಾಷನಲ್ ವಾಟರ್ ಮಿಷನ್ ಅಡಿಯಲ್ಲಿ ಅಂದಿನ ಬಿಜೆಪಿ ಸರಕಾರದ ಕನಸಿನ ಕೂಸಾಗಿದ್ದ ಎನ್‌ಎಲ್‌ಬಿಸಿ ಆಧುನಿಕ ಯೋಜನೆಗೆ ಅನುಮೋದನೆ ಪಡೆದಿತ್ತು. ಇದು ಅಂದಿನ ಬಿಜೆಪಿ ಸರಕಾರದ ಕನಸಿನ ಯೋಜನೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದಿನ ಜಲ ಸಂಪನ್ಮೂಲ ಸಚಿವರಾಗಿದ್ದರು.
2014-15ರವರೆಗೆ ಹಿಂದಿನ ರಾಜ್ಯ ಕಾಂಗ್ರೆಸ್ ಸರಕಾರ, ಕೇಂದ್ರದ ಯುಪಿಎ ಸರಕಾರದಿಂದ ಯಾವುದೇ ಧನ ಸಹಾಯ ಪಡೆಯುವಲ್ಲಿ ವಿಫಲವಾಗಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಬಂದ ಬಳಿಕ 2015ರಲ್ಲಿ ಎನ್‌ಎಲ್‌ಬಿಸಿ-ಇಆರ್‌ಎಮ್ ಯೋಜನೆಯನ್ನು ಪಿಎಮ್‌ಕೆಎಸ್‌ವೈ ಯೋಜನೆಯಡಿ ಪರಿಗಣಿಸಿ ಯೋಜನೆಗೆ 1 ಸಾವಿರ ಕೋಟಿ ಕೇಂದ್ರ ಸಹಾಯ ಧನ ನೀಡಿದೆ.
ಎಸ್‌ಸಿಎಡಿಎ ಫೇಸ್2 ಬಹು ತೇಕ ಕಾಮಗಾರಿ ಪ್ರಸಕ್ತ ಬಿಜೆಪಿ ಸರಕಾರದ ಅವಧಿಯಲ್ಲೇ ಅನುಷ್ಠಾನ ಗೊಂಡಿರುತ್ತದೆ. ಬಿಜೆಪಿ ಸರಕಾರದ ಕನಸಿನ ಕೂಸಾಗಿರುವ ಎನ್‌ಎಲ್‌ಬಿಸಿ- ಇಆರ್‌ಎಂ ಯೋಜನೆಗೆ ಕೇಂದ್ರವು ಪಿಎಂಕೆಎಸ್‌ವೈ ಅಡಿ ಧನ ಸಹಾಯ ನೀಡಿ, ಯೋಜನೆ ಸಾಕಾರಗೊಂಡಿದೆ ಎಂದು ಉಲ್ಲೇಖೀಸಿದೆ.