Advertisement

ಶಿಕ್ಷಕರ ಕಲಿಕಾ ಕೇಂದ್ರ ಆರಂಭಿಸಲು ಗ್ರಾಪಂ ಒಪ್ಪಿಗೆ

12:21 PM Feb 10, 2020 | Team Udayavani |

ನಾರಾಯಣಪುರ: ಕೊಡೇಕಲ್‌ ಪಟ್ಟಣದ ಗ್ರಾ.ಪಂ ಕಚೇರಿ ವ್ಯಾಪ್ತಿಯಲ್ಲಿ ಹೊಸದಾಗಿ ಶಿಕ್ಷಕರ ಕಲಿಕಾ ಕೇಂದ್ರ ಆರಂಭಿಸಲು ಕಟ್ಟಡದ ವ್ಯವಸ್ಥೆ ಮಾಡಿಕೊಡುವಂತೆ ಶಿಕ್ಷಕರ ಸಂಘ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಗ್ರಾ.ಪಂ ಕಚೇರಿ ಹಿಂಭಾಗದ ಕಟ್ಟಡಕ್ಕೆ ಗ್ರಾ.ಪಂ ಮುಖ್ಯಸ್ಥರು ಹಾಗೂ ಶಿಕ್ಷಕರು ಭೇಟಿ ನೀಡಿ ವೀಕ್ಷಿಸಿದರು.

Advertisement

ಈ ವೇಳೆ ಮಾತನಾಡಿದ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಬಿ. ಗಡ್ಡದ್‌, ಕೊಡೇಕಲ್‌ ಕ್ಲಸ್ಟರ್‌ ಮಟ್ಟಕ್ಕೆ ಮಂಜೂರಾಗಿರುವ ಶಿಕ್ಷಕರ ಕಲಿಕಾ ಕೇಂದ್ರಕ್ಕೆ ಸೂಕ್ತ ಕಟ್ಟಡ ಸಮಸ್ಯೆ ಇರುವುದರಿಂದ ಆರಂಭವಾಗಿಲ್ಲ, ಇದಕ್ಕಾಗಿ ಸ್ಥಳೀಯ ಗ್ರಾ.ಪಂ ಕಚೇರಿ ಆವರಣ ಹಿಂಭಾಗದಲ್ಲಿ ಖಾಲಿ ಕಟ್ಟಡ ಇದ್ದು, ಅದರಲ್ಲಿನ ಎರಡು ಕೋಣೆ ಸುಸಜ್ಜಿತವಾಗಿವೆ. ತಾತ್ಕಾಲಿಕವಾಗಿ ಆರಂಭಿಸಲು ಶಿಕ್ಷಕರ ಸಂಘದಿಂದ ಗ್ರಾ.ಪಂಗೆ ಮನವಿ ಮಾಡಿಕೊಳ್ಳಲಾಗಿತ್ತು. ಗ್ರಾಪಂನವರು ಒಪ್ಪಿಕೊಂಡು ಒಪ್ಪಿಗೆ ನೀಡಿದ್ದು ಖುಷಿ ತರಿಸಿದೆ ಎಂದರು.

ಶಿಕ್ಷಕರ ಕಲಿಕಾ ಕೇಂದ್ರಕ್ಕೆ ಅಜೀಂ ಪ್ರೇಮಜೀ ಫೌಂಡೇಶನ್‌ ವಿಶೇಷ ಮುತುವರ್ಜಿ ವಹಿಸಿ ಸಕಲ ಸೌಲಭ್ಯಗಳನ್ನು ಒದಗಿಸಬೇಕು. ಕ್ಲಸ್ಟರ್‌ನ ಶಿಕ್ಷಕರಿಗೆ ಕಾಲ ಕಾಲಕ್ಕೆ ಸಭೆ, ತರಬೇತಿ ನಡೆಸಲು ಅನುಕೂಲವಾಗುವುದರ ಜತೆ ಬಿಡುವಿನ ವೇಳೆ ಕಾಲ ಕಳೆಯುವ ಶಿಕ್ಷಕರು ಒಂದೆಡೆ ಸೇರಿ ಸೈಕ್ಷಣಿಕ ಸಮಗ್ರ ವಿಕಾಸದ ಕುರಿತು ಚಿಂತನ-ಮಂಥನ ನಡೆಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಕೃತಜ್ಞತೆ ಸಲ್ಲಿಸುತ್ತಿದೆ ಎಂದರು. ರಂಗನಾಥ ದೊರೆ, ತಾ.ಪಂ ಸದಸ್ಯ ಮೋಹನ ಪಾಟೀಲ, ಬಸಣ್ಣ ಹಾವೇರಿ, ಸೋಮಲಿಂಗಪ್ಪ ದೊರೆ, ಬಸನಗೌಡ ಮಾಲಿಪಾಟೀಲ, ಗ್ರಾ.ಪಂ ಅಧ್ಯಕ್ಷೆ ಅಯ್ಯಮ್ಮ ಮ್ಯಾಗೇರಿ, ಪಿಡಿಒ ಸಂಗಣ್ಣ ನಾಗಬೇನಾಳ, ಚಂದ್ರಶೇಖರ ಹೊಕ್ರಾಣಿ, ಎಸ್‌.ಬಿ. ಅಡ್ಡಿ, ಹೊಳೆಪ್ಪ ಮ್ಯಾಗೇರಿ, ರಮೇಶ ಪಾಟೀಲ, ಹುಲಗಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next