Advertisement
ಗುರುವಾರ ಅವರ ನೇಮಕದ ಘೋಷಣೆ ಪ್ರಕಟ ವಾಗುತ್ತಿದ್ದಂತೆ ಟ್ವಿಟರ್ ನಲ್ಲಿ ಸಾಕಷ್ಟು ಪೋಸ್ಟ್‌ಗಳು ಹರಿದಾಡಿದವು. ಅವರ ವ್ಯಕ್ತಿ ವಿವರದಿಂದ ಹಿಡಿದು, ಅವರ ಇದು ವರೆಗಿನ ಕಾರ್ಯ ನಿರ್ವಹಣೆ ಕುರಿತೂ ಚರ್ಚೆಗಳು ನಡೆದಿವೆ. ಹಲವಾರು ಭಾರತೀಯ ಸಂಸದರ ಸಹಿತ ಸಾಕಷ್ಟು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ. ನಾರಾಯಣಮೂರ್ತಿಯವರೂ ಇಮೇಲ್ ಮೂಲಕ ಶುಭಾಶಯ ಕೋರಿ, ಜನರ ಸೇವೆ ಮಾಡಲು ಇದೊಂದು ಒಳ್ಳೆಯ ಅವಕಾಶ ಎಂದು ಅಭಿಪ್ರಾಯಪಟ್ಟಿದ್ದಾರೆ. ರಿಷಿ ಅವರು ನಾರಾಯಣಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯನ್ನು 2009ರಲ್ಲಿ ವರಿಸಿದ್ದರು.
40 ವರ್ಷದ ರಿಷಿ ಸುನಾಕ್ 1980ರಲ್ಲಿ ಹ್ಯಾಂಪ್ ಶೈನ್ ಸೌಥಾಂಪ್ಟನ್‌ನಲ್ಲಿ ಜನಿಸಿದವರು. ರಿಷಿ ಕುಟುಂಬಸ್ಥರು ಮೂಲತಃ ಪಂಜಾಬ್‌ನವರು. ರಿಷಿ ಅವರ ಅಜ್ಜ ಅರುವತ್ತರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಹೋಗಿದ್ದರು. ಆ ಬಳಿಕ ಅವರ ಕುಟುಂಬ ಅಲ್ಲೇ ನೆಲೆಸಿದೆ. ರಿಷಿ ತಂದೆ ಯಶ ವೀರ್ ವೃತ್ತಿಯಲ್ಲಿ ವೈದ್ಯರು. ತಾಯಿ ಉಷಾ ಔಷಧ ವ್ಯಾಪಾರ ಮಾಡುತ್ತಿದ್ದಾರೆ. ಆಕÕ…ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ರಾಜಕೀಯ, ಆರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ರಿಷಿ, ಸ್ಟಾನ್‌ಫೋರ್ಡ್ ವಿ.ವಿ.ಯಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದಾರೆ.
Related Articles
2015ರ ಸಾರ್ವತ್ರಿಕ ಚುನಾವಣೆಗೆ ಕನ್ಸರ್ವೇ ಟಿವ್ ಪಕ್ಷದಿಂದ ಉತ್ತರ ಯಾರ್ಕ್‌ಶೈರ್‌ನ ರಿಚ¾ಂಡ್ ಕ್ಷೇತ್ರದಿಂದ ಸ್ಪರ್ಧಿಸಿ ರಿಷಿ ರಾಜಕೀಯ ಕ್ಷೇತ್ರ ಪ್ರವೇಶಿಸಿದರು. ಮೊದಲ ಯತ್ನದಲ್ಲಿಯೇ ಜಯ ಭೇರಿ ಬಾರಿಸಿ ಸಂಸತ್‌ನ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಆಯ್ಕೆ ಸಮಿತಿ ಸದಸ್ಯ ರಾಗಿ 2 ವರ್ಷ ಕೆಲಸ ಮಾಡಿದರು.
Advertisement
ಭಗವದ್ಗೀತೆ ಹೆಸರಲ್ಲಿ ಪ್ರಮಾಣಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ ಬ್ರೆಕ್ಸಿಟ್ ಒಪ್ಪಂದಕ್ಕೆ ರಿಷಿ ಸುನಾಕ್ ಬೆಂಬಲ ನೀಡಿದರು. ಬ್ರೆಕ್ಸಿಟ್ ವಿಚಾರಕ್ಕೆ ಸಂಬಂಧಿಸಿ 2017ರಲ್ಲಿ ಬ್ರಿಟನ್‌ನಲ್ಲಿ ಅವಧಿಗೆ ಮುನ್ನವೇ ಸಾರ್ವತ್ರಿಕ ಚುನಾವಣೆ ನಡೆಯಿತು. ರಿಷಿ ಈ ಚುನಾವಣೆಯಲ್ಲಿ ಮತ್ತಷ್ಟು ಹೆಚ್ಚು ಮತಗಳ ಅಂತರದಿಂದ ಪುನರಾಯ್ಕೆಯಾದರು. ಆಗ ಅವರು ಭಗವದ್ಗೀತೆಯ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದರು. ಬ್ರಿಟನ್ ಪ್ರಧಾನಿ ಜತೆ
ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಪ್ತ ಸಹಾಯಕರಾಗಿದ್ದ ರಿಷಿ ಸುನಾಕ್ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಟ್ರೆಷರಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ, ಬ್ರಿಟನ್ ದೇಶದ ರಾಣಿಯ ಮಹಾ ಮಂಡಳಿಯ (ಪ್ರೈವಿ ಕೌನ್ಸಿಲ…) ಸದಸ್ಯರಾಗಿದ್ದರು. ಪ್ರೈವಿ ಕೌನ್ಸಿಲ್ ಎಂಬುದು ಬ್ರಿಟನ್‌ನ ಅತ್ಯುಚ್ಚ ಮಂಡಳಿ. ಈ ಹಿಂದೆ ಕರ್ನಾಟಕದ ಕಲಬುರಗಿ ಮೂಲದ ನೀರಜ್ ಪಾಟೀಲ್ ಲಂಡನ್‌ನಲ್ಲಿ ವೈದ್ಯರಾಗಿದ್ದು, 2010ರಿಂದ 2011ರ ವರೆಗೆ ಅಲ್ಲಿನ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು. 15 ಭಾರತೀಯ ಸಂಸದರು
ಬ್ರಿಟನ್ ಸಂಸತ್‌ನಲ್ಲಿ ಭಾರತ ಮೂಲದ ವ್ಯಕ್ತಿಗಳು ವಿವಿಧ ರಾಜಕೀಯ ಪಕ್ಷಗಳಲ್ಲಿ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಮೊದಲು?
ಕರ್ನಾಟಕದೊಂದಿಗೆ ಸಂಬಂಧ ಹೊಂದಿರುವವರು ಬ್ರಿಟಿಷ್ ಸರಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆಯೇ ಎಂಬ ಮಾಹಿತಿ ಹುಡುಕಿದರೂ ಬೇರೊಂದು ಉದಾಹರಣೆ ಸಿಕ್ಕಿಲ್ಲ. ಹಾಗಾಗಿ ಇದೇ ಮೊದಲ ಬಾರಿಗೆ ರಾಜ್ಯದ ಅಳಿಯ ಈ ಉನ್ನತ ಸ್ಥಾನಕ್ಕೇರಿದಂತಾಗಿದೆ. ರಿಷಿ ಸಾಧನೆಗೆ ದೇಶದೆಲ್ಲೆಡೆಯಿಂದ ಅಭಿನಂದನೆಯ ಮಹಾಪೂರ ಹರಿದು ಬಂದಿದೆ.