ಮುಂಬಯಿ: ತೀಯಾ ಸಮಾಜದ ಕುಲಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಉತ್ಸವವನ್ನು ಕೇರಳದ ಪ್ರಮುಖ ಹಬ್ಬವಾದ ಓಣಂ ಸಮಯದಲ್ಲೇ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಗುರುಗಳು ಸಮಾಜ ಬಾಂಧವರಿಗೆ ದೇವಸ್ಥಾನವನ್ನು ನಿರ್ಮಿಸಿ ದೇವಸ್ಥಾನ ಪ್ರವೇಶಿಸುವ ಪುಣ್ಯ ಕಾರ್ಯವನ್ನು ಮಾಡಿದ್ದಾರೆ. ಇದೀಗ 75ನೇ ವರ್ಷದಲ್ಲಿರುವ ತೀಯಾ ಸಮಾಜವು ಗುರುಗಳ ಆದೇಶದಂತೆ ಸಂಘಟಿತವಾಗಿ ಬಲಯುತವಾಗಲಿ ಎಂದು ತೀಯಾ ಸಮಾಜ ಮುಂಬಯಿಯ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ನುಡಿದರು.
ತೀಯಾ ಸಮಾಜ ಮುಂಬಯಿ ವತಿಯಿಂದ ಆ. 26ರಂದು ಘಾಟ್‌ಕೋಪರ್ ಪಶ್ಚಿಮದ ತೀಯಾ ಸಮಾಜದ ಕಾರ್ಯಾಲಯದಲ್ಲಿ ಜರಗಿದ 164ನೇ ನಾರಾಯಣ ಗುರು ಜಯಂತಿಯ ಆಚರಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಮಾಜದ ಅಭಿ ವೃದ್ಧಿಗಾಗಿ ನಾವೆಲ್ಲರೂ ನಮ್ಮ ಗುರುಗಳಾದ ನಾರಾಯಣಗುರುಗಳ ತತ್ವವನ್ನು ಅನುಸರಿಸಿ ಮುಂದುವರಿ ಯೋಣ ಎಂದರು.
ಪದ್ಮನಾಭ ಸುವರ್ಣ ಮತ್ತು ಹರೀಶ್ ಕುಂದರ್ ಅವರ ಮಾರ್ಗದರ್ಶನದಲ್ಲಿ ಪೂಜಾ ವಿಧಿ ಹಾಗೂ ಭಜನಾ ಕಾರ್ಯಕ್ರಮಗಳು ನೆರವೇರಿದವು.
ತೀಯಾ ಸಮಾಜದ ಟ್ರಸ್ಟಿ ಟಿ. ಬಾಬು ಬಂಗೇರ, ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ…, ಕೋಶಾಧಿಕಾರಿ ರಮೇಶ್ ಉಳ್ಳಾಲ…, ವಲಯ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಮೋಹನ್ ಬಿ. ಎಂ. ಮತ್ತು ಬಾಬು ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಿನಿ ಕೋಟೆಕಾರ್, ಆರೋಗ್ಯ ನಿಧಿಯ ಕಾರ್ಯಾಧ್ಯಕ್ಷೆ ದಿವ್ಯಾ ಆರ್. ಕೋಟ್ಯಾನ್, ಸಮಾಜದ ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಸದಾಶಿವ ಬಿ. ಕೆ. ಮತ್ತು ನಾರಾಯಣ ಸುವರ್ಣ, ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುರೇಶ್ ಬಂಗೇರ, ಅಶ್ವಿನ್ ಬಂಗೇರ, ಚಂದ್ರಶೇಖರ ಕೆ. ಬಿ. ಪುರುಷೋತ್ತಮ ಕೋಟೆಕಾರ್ ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ವೃಂದಾ ದಿನೇಶ್ ಮತ್ತು ಉಜ್ವಲ್ ಚಂದ್ರಶೇಖರ್, ಹಿರಿಯ ಸದಸ್ಯರಾದ ಆನಂದ ಕರ್ಕೇರ, ವಲಯ ಸಮಿತಿಯ ಪದಾಧಿಕಾರಿಗಳಾದ ದಿವಿಜಾ ಚಂದ್ರಶೇಖರ್, ಸಾಗರ್ ಕಟೀಲ್, ನಿತ್ಯೋದಯ ಉಳ್ಳಾಲ, ಶಶಿಧರ ಬಿ., ಎಂ. ಚಂದ್ರಶೇಖರ ಸಾಲ್ಯಾನ್, ಲಲಿತಾ ಚಂದ್ರಶೇಖರ್ ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಭಜನೆ, ಮಂಗಳಾರತಿ ಬಳಿಕ ಪ್ರಸಾದ ವಿತರಣೆ ಮತ್ತು ಲಘು ಉಪಾಹಾರದೊಂದಿಗೆ ಪೂಜಾ ಕಾರ್ಯ ಕ್ರಮವು ಮುಕ್ತಾಯಗೊಂಡಿತು.