Advertisement

ನರಗುಂದ: ಶ್ರೀರಾಮ ಜನರ ಮನಸ್ಸಿನಲ್ಲಿ ಸದಾ ಜಾಗೃತ

06:14 PM Jan 03, 2024 | Team Udayavani |

ಉದಯವಾಣಿ ಸಮಾಚಾರ
ನರಗುಂದ: ದೇಶದ ಸಮಸ್ತ ಜನರ ಮನಸ್ಸು ಮತ್ತು ಭಾವನೆಯಲ್ಲಿ ಶ್ರೀರಾಮ ಸದಾ ಜಾಗೃತನಾಗಿದ್ದಾನೆ. ಶ್ರೀರಾಮ ವ್ಯಕ್ತಿಯಲ್ಲ ಒಂದು ಶಕ್ತಿಯಿದ್ದಂತೆ ಎಂದು ಸ್ಥಳೀಯ ಪಂಚಗೃಹ ಗುಡ್ಡದ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

Advertisement

ಪಟ್ಟಣದ ದಂಡಾಪೂರ ಓಣಿಯ ವಿಠಲ ಮಂದಿರದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಹಾಗೂ ವಿಶ್ವ ಹಿಂದು ಪರಿಷತ್‌ ಆಶ್ರಯದಲ್ಲಿ ಅಯೋಧ್ಯಾ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಅಯೋಧ್ಯೆ ಯಿಂದ ಬಂದಿರುವ ಅಕ್ಷತಾ ಕಳಶ ವಿತರಣಾ ಕಾರ್ಯಕ್ರಮ ಹಾಗೂ ಸಂಕೀರ್ತನ ಯಾತ್ರೆ ಸಮಾರಂಭದಲ್ಲಿ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು.

ಸಾನ್ನಿಧ್ಯ ವಹಿಸಿ ಸುಕ್ಷೇತ್ರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ವಕ್ತಾರರಾಗಿ ಆಗಮಿಸಿದ ಆರ್‌ಎಸ್‌ಎಸ್‌ ಜಿಲ್ಲಾ ಸಹ ಕಾರ್ಯವಾಹಕ ಶಿವಕುಮಾರ ದೇಶನ್ನವರ ಮಾತನಾಡಿದರು. ಈ ವೇಳೆ ತಾಲೂಕಿನ 32 ಗ್ರಾಮಗಳ ಹಾಗೂ ಪಟ್ಟಣದ 23 ವಾರ್ಡ್‌ಗಳ ಸೇರಿ 55 ಪ್ರಮುಖರಿಗೆ ಅಕ್ಷತಾ ಕಳಶಗಳನ್ನು ಸಾನ್ನಿಧ್ಯ ವಹಿಸಿದ್ದ ಪೂಜ್ಯರು ವಿತರಣೆ ಮಾಡಿದರು.

ಸಂಕೀರ್ತನಾ ಯಾತ್ರೆ: ಕಾರ್ಯಕ್ರಮ ಬಳಿಕ ಅಕ್ಷತಾ ಕಳಶ ಪಡೆದುಕೊಂಡ 55 ಪ್ರಮುಖರಿಂದ ಸಂಕೀರ್ತನಾ ಯಾತ್ರೆಯು ವಿಠಲ ಮಂದಿರದಿಂದ ಜಗನ್ನಾಥ ಮಾರ್ಗ, ಜವಳಿ ಬಜಾರ್‌, ಗಾಂಧಿ ವೃತ್ತ, ಬಸವೇಶ್ವರ ಸಮುದಾಯ ಭವನ, ಸರ್ವಜ್ಞ ಸರ್ಕಲ್‌ ಮಾರ್ಗವಾಗಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಸೋಮಾಪೂರ ಮಾರುತಿ ದೇವಸ್ಥಾನವರೆಗೆ ಜರುಗಿತು.

ಜ.22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿರುವ ಕಾರಣ ಅಂದು ಎಲ್ಲ ಮನೆಗಳಲ್ಲಿ ದೀಪ ಬೆಳಗಿಸುವ ಜೊತೆಗೆ ಜ. 6ರಂದು ಪ್ರತಿ ಮನೆಗೆ ಮಂತ್ರಾಕ್ಷತೆ ಹಾಗೂ ಶ್ರೀರಾಮನ ಭಾವಚಿತ್ರ ವಿತರಿಸಲಾಗುತ್ತದೆ.

Advertisement

ಕಾರ್ಯಕ್ರಮದಲ್ಲಿ ಸಂಜೀವ ನಲವಡೆ, ವಿಠಲ ಕಾಪ್ಸೆ, ವಿಶ್ವನಾಥ ದೇಶಪಾಂಡೆ, ನಾಗೇಶ ಅಪೊಜಿ, ಸುಖನ್ಯಾ ಸಾಲಿ, ಭಾವನಾ ಮೋಟೆ, ಅನನ್ಯ ಆನೇಗುಂದಿ, ಮಂಜುನಾಥ ಮೆಣಸಗಿ, ಅಜ್ಜನಗೌಡ ಪಾಟೀಲ, ಸಂಗನಗೌಡ ಹಲಗೌಡ್ರ, ಸೋಮು ಹೊಂಗಲ, ಪ್ರವೀಣ ಅಪೊಜಿ, ಸಚಿನ್‌ ಸಾಬಳೆ, ಶ್ರೀನಿವಾಸ ಗುಜಮಾಗಡಿ, ಪ್ರವೀಣ ಸವದಿ, ಮಂಜುನಾಥ ಲದ್ದಿ, ವಿಠಲ ಹವಾಲ್ದಾರ್‌, ಬಸವರಾಜ ಬೋವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next