Advertisement
ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳಿಗ್ಗೆಯಿಂದಲೇ ರಸ್ತೆಗಿಳಿದ ಜನತೆಯ ನೆತ್ತಿ ಸುಡುವ ಕಾಯಕದಲ್ಲಿರುವ ಸೂರ್ಯನ ಪ್ರಖರತೆಗೆ ಜನತೆ ಕಂಗಾಲಾಗಿದ್ದಾರೆ. ಇದರ ಪ್ರತಾಪದಿಂದ ಬಸವಳಿದಿರುವ ಜನರು ನಿಟ್ಟುಸಿರು ಬಿಡುತ್ತ ಒಣಗುತ್ತಿರುವ ಗಂಟಲಿನ ದಾಹ ನೀಗಿಸಿಕೊಳ್ಳಲು ಪ್ರಕೃತಿದತ್ತವಾಗಿ ಸಿಗುವ ಮಜ್ಜಿಗೆ ಸೇರಿದಂತೆ ಕೃತಕ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ.
ಹೆಚ್ಚಳಗೊಂಡಿದೆ. ಬೇಸಿಗೆಯ ಈ ಕಡು ಬಿಸಿಲಿನಲ್ಲಿ ಜನ ತಂಪು ಪಾನೀಯ(ಕೋಲ್ಡ್ ಡ್ರಿಂಕ್ಸ್) ಅಂಗಡಿಗೆ ಮುಗಿ ಬೀಳುತ್ತಿದ್ದು, ಮನೆಯಿಂದ ಹೊರಬರಲು ಹಿಂಜರಿಕೆ ಮಾಡುವಂತಾಗಿದೆ. ಹೀಗಾಗಿ, ಪಟ್ಟಣದ ಮುಖ್ಯ ರಸ್ತೆಗಳು ಸಹ ಮಧ್ಯಾಹ್ನ 12ರಿಂದ ಸಾಯಂಕಾಲ 5 ಗಂಟೆವರೆಗೆ ಜನರಿಲ್ಲದೇ ಬಿಕೋ ಎನ್ನುತ್ತಿವೆ. ಮೂಲೆ ಸೇರಿದ್ದ ಫ್ಯಾನ್‌ಗಳು ತಿರುಗುತ್ತಿವೆ. ಹೊಸ ಫ್ಯಾನ್‌ಗಳ ಖರೀದಿಯಾಗುತ್ತಿವೆ. ಆದರೆ, ವಿದ್ಯುತ್ ಪೂರೈಕೆಯ ಕಣ್ಣಾಮುಚ್ಚಾಲೆಯಿಂದ ಜನ ಬೇಸತ್ತಿದ್ದಾರೆ. ಬಿಸಿಲಿನ ಝಳದಿಂದ ಬಳಲಿದ ಜನತೆಯ ಬಾಯಾರಿಸುವ ಲಿಂಬೆಹಣ್ಣು ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ.
Related Articles
Advertisement
*ಸಿದ್ಧಲಿಂಗಯ್ಯ ಮಣ್ಣೂರಮಠ