Advertisement

ನರಗುಂದ ಪುರಸಭೆ: 6.51 ಲಕ್ಷ ರೂ.ಉಳಿತಾಯ ಬಜೆಟ್‌ ಮಂಡನೆ

04:12 PM Apr 01, 2022 | Team Udayavani |

ನರಗುಂದ: ಸ್ಥಳೀಯ ಪುರಸಭೆ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಲಾಗಿದೆ. ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ್‌ ಸುಮಾರು 12 ನಿಮಿಷಗಳ ಕಾಲ ಬಜೆಟ್‌ ಪ್ರತಿ ಓದುವ ಮೂಲಕ ಪ್ರಸಕ್ತ ಸಾಲಿನ 6.51 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು.

Advertisement

ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಅನುದಾನ ಜೊತೆಗೆ ವಿವಿಧ ಮೂಲಗಳಿಂದ ಒಟ್ಟು 2268.72 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದ್ದು, ಅದರಲ್ಲಿ 2262.21 ಲಕ್ಷ ರೂ. ಖರ್ಚು ವೆಚ್ಚಗಳಿಗೆ ಮೀಸಲಿಟ್ಟಿರುವುದಾಗಿ ವಿವರಿಸಿದರು.

ಪ್ರಮುಖ ಖರ್ಚುವೆಚ್ಚ: ಪಟ್ಟಣದಲ್ಲಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಪುರಸಭೆ ನೂತನ ಕಟ್ಟಡಕ್ಕೆ 2 ಕೋಟಿ, ಎಸ್‌ಎಫ್‌ಸಿ ಯೋಜನೆಯಡಿ ಎಸ್‌ ಸಿಪಿ/ ಟಿಎಸ್‌ಪಿಗೆ 1 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನದಡಿ ರಸ್ತೆ ನಿರ್ಮಾಣಕ್ಕೆ 2.5 ಕೋಟಿ, ಅಮೃತ ನಿರ್ಮಲ ನಗರ ಯೋಜನೆಯಡಿ ಸಸಿ ಅಳವಡಿಕೆಗೆ 20 ಲಕ್ಷ, ಕಸ ಬೀಳುವ ಬ್ಲಾಕ್‌ ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ 12 ಲಕ್ಷ ರೂ. ಮುಂತಾದವುಗಳಿಗೆ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ.

ಕರ ಹೆಚ್ಚಳ: ಆಸ್ತಿ ತೆರಿಗೆ ಶೇ.3 ಮತ್ತು ವಾಣಿಜ್ಯ ತೆರಿಗೆ ಶೇ.4 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಾಧಿಕಾರಿ ಅಮಿತ್‌ ತಾರದಾಳೆ ಸ್ಪಷ್ಟಪಡಿಸಿದರು.

24/7 ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಹಿಂದೆಲ್ಲ 5 ದಿನಕ್ಕೊಮ್ಮೆಯಾದರೂ ನೀರು ಬರುವ ಭರವಸೆಯಿತ್ತು. ಈಗ ಯಾವಾಗ ಬರುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇದನ್ನು ಮೊದಲು ಸರಿಪಡಿಸಿ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ಅಪ್ಪಣ್ಣ ನಾಯ್ಕರ ಒತ್ತಾಯಿಸಿದರು.

Advertisement

ಪ್ರಸಕ್ತ ಸಾಲಿನ ಆಯವ್ಯಯ ಅಂದಾಜು ಪತ್ರಿಕೆಗೆ ಮತ್ತು ಆಸ್ತಿ ತೆರಿಗೆ ಪರಿಷ್ಕರಣೆಗೆ ವಿಶೇಷ ಸಾಮಾನ್ಯ ಸಭೆ ಅನುಮೋದನೆ ನೀಡಿತು. ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಉಪಾಧ್ಯಕ್ಷೆ ಅನ್ನಪೂರ್ಣ ಯಲಿಗಾರ ಸದಸ್ಯರಾದ ಎಸ್‌.ಎಸ್‌. ಕುಷ್ಟಗಿ, ಎಂ.ಪಿ. ಪಟ್ಟಣಶೆಟ್ಟಿ, ಡಿ.ಆರ್‌. ಕಿಲ್ಲೇದಾರ, ಡಿ.ಎಫ್‌. ಕಟ್ಟಿಮನಿ, ಸಿ.ಕೆ. ಪಾಟೀಲ, ಆರ್‌. ಎಚ್‌. ತಹಶೀಲ್ದಾರ್‌, ಪಿ.ಎಲ್‌. ಜೋಶಿ, ಬಿ.ಎಸ್‌. ಪಾಟೀಲ, ಆರ್‌.ಎಫ್‌. ಪಾಟೀಲ, ಎಂ.ಎಸ್‌. ಬೋಳಶೆಟ್ಟಿ, ಎನ್‌.ಪಿ. ವಡ್ಡಿಗೇರಿ, ಡಿ.ಬಿ. ಕಲಾಲ, ಎಫ್‌.ಎಸ್‌. ಹಾದಿಮನಿ, ಕೆ.ಎಂ. ಅರ್ಭಾಣದ, ವೈ.ಎಸ್‌. ನಾಯ್ಕರ, ಎಲ್‌.ಬಿ. ಮಳಗಿ, ಎಚ್‌.ಎನ್‌. ಗೋಟೂರ, ಆರ್‌.ಎಸ್‌. ಕಲ್ಲಾರಿ, ಆರ್‌.ಎಸ್‌. ವೀರನಗೌಡ್ರ, ಮುಖ್ಯಾಧಿಕಾರಿ ಅಮಿತ್‌ ತಾರದಾಳೆ, ಪುರಸಭೆ ಸಿಬ್ಬಂದಿ ಇದ್ದರು.

ಮಾದರಿ ತರಕಾರಿ ಮಾರುಕಟ್ಟೆ ಈಗಿರುವ ತರಕಾರಿ ಮಾರುಕಟ್ಟೆ ಜಾಗೆಯಲ್ಲಿ ನಗರೋತ್ಥಾನ 4ನೇ ಹಂತದ ಯೋಜನೆಯಡಿ 2.15 ಕೋಟಿ ರೂ. ವೆಚ್ಚದಲ್ಲಿ ಮಾದರಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವರು ಸೂಚನೆ ನೀಡಿದ್ದು, ಇದನ್ನು ಗುರಿಯಾಗಿ ಇಟ್ಟುಕೊಂಡಿದ್ದೇವೆ ಎಂದು ಮುಖ್ಯಾಧಿಕಾರಿ ಅಮಿತ್‌ ತಾರದಾಳೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next