Advertisement

ನರಗುಂದ: ಹೇಮರಡ್ಡಿ ಮಲ್ಲಮ್ಮ ಜೀವನ ಆದರ್ಶಪ್ರಾಯ

06:36 PM Jun 02, 2023 | Team Udayavani |

ನರಗುಂದ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ತಾಯಿಯ ಜೀವನ ಆದರ್ಶ, ಸಿದ್ಧಾಂತಗಳು ಕೇವಲ ರೆಡ್ಡಿ ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರ ಜೀವನ ಯಶೋಗಾಥೆ ಇಡೀ ಸ್ತ್ರೀ ಕುಲಕ್ಕೆ ಆದರ್ಶವಾಗಿವೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಹೇಳಿದರು.

Advertisement

ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ರೆಡ್ಡಿ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನವರ 601ನೇ ಜಯಂತಿ ಹಾಗೂ ಮಹಾಯೋಗಿ ವೇಮನರ 611ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹೇಮರಡ್ಡಿ ಮಲ್ಲಮ್ಮ ಲೌಕಿಕ ಜೀವನದ ಸುಖ ದುಃಖಗಳಿಗೆ ಧೃತಿಗೆಡದೇ ಪಾರಮಾರ್ಥಿಕ ಭಕ್ತಿಯಿಂದ ಸಾಕ್ಷಾತ್‌ ಚೆನ್ನಮಲ್ಲಿಕಾರ್ಜುನ ದೇವರಲ್ಲಿ ಮೋಕ್ಷ ಹೊಂದಿದರು ಎಂದರು.

ವಿರಕ್ತಮಠದ ಡಾ|ಶಿವಕುಮಾರ ಸ್ವಾಮಿಗಳು ಮಾತನಾಡಿ,ಹೇಮರೆಡ್ಡಿ ಮಲ್ಲಮ್ಮನವರ ಮೈದುನ ವೇಮನ ಹೇಮರೆಡ್ಡಿ ಮಲ್ಲಮ್ಮ
ತಾಯಿಯ ಪ್ರೇರಣೆ ಹಾಗೂ ಆದರ್ಶ ಸಿದ್ಧಾಂತಗಳಿಗೆ ತಲೆಬಾಗಿ ಸನ್ಯಾಸ ಸ್ವೀಕರಿಸಿ ಮಹಾಯೋಗಿ ವೇಮನ ಆದರು. ಕನ್ನಡದಲ್ಲಿ ಸರ್ವಜ್ಞರಂತೆ ತೆಲುಗು ಭಾಷೆಯಲ್ಲಿ ಮಹಾಯೋಗಿ ವೇಮನರು ಸಾವಿರಾರು ತ್ರಿಪದಿ ರಚನೆ ಮಾಡಿ ನಿಜ ಜೀವನದ ಅರ್ಥ ತಿಳಿಸಿಕೊಟ್ಟಿದ್ದಾರೆ ಎಂದರು.

ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿದರು. ಇದೇ ಸಂದರ್ಭದಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ
ನಿರ್ಮಾಣಕ್ಕಾಗಿ 4 ಗುಂಟೆ ಜಾಗೆ ನೀಡಿದ ಮಳಲಿ ಕುಟುಂಬದವರನ್ನು ಸನ್ಮಾನಿಸಲಾಯಿತು.

ನೂರಾರು ಮಹಿಳೆಯರು ಕುಂಭ ಆರತಿಗಳೊಂದಿಗೆ ಕೊಣ್ಣೂರಿನ ರಾಜ ಬೀದಿಗಳಲ್ಲಿ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಎಸ್‌.ಬಿ.ಯಲ್ಲಪ್ಪಗೌಡ್ರ ನಿರೂಪಿಸಿದರು. ಅಪ್ಪನಗೌಡ ಪಾಟೀಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next