Advertisement
2006ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಪಾದಯಾತ್ರೆ ಜೊತೆಗೆ ಕನ್ನಡಕ್ಕೆ ಧಕ್ಕೆ ಬಂದಾಗ ಪುಟಿದೇಳುವ ಈ ನೆಲದ ಕನ್ನಡಾಭಿಮಾನ ಅಸಾಧಾರಣ. ಅಸಂಖ್ಯಾತ ಸಾಹಿತಿಗಳ ಸಾಹಿತ್ಯ ಕೃಷಿ ಇತಿಹಾಸಕ್ಕೆ ಮೈಲಿಗಲ್ಲಾಗಿದೆ. ಧಾರ್ಮಿಕವಾಗಿ ಪಂಚಗ್ರಹ ಗುಡ್ಡದ ಹಿರೇಮಠ, ವಿರಕ್ತಮಠ, ಪುಣ್ಯಾರಣ್ಯ ಪತ್ರಿವನಮಠ,ಧಾರ್ಮಿಕ ಹಾಗೂ ಕನ್ನಡ ಕೈಂಕರ್ಯದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ನರಗುಂದ ಕೀರ್ತಿ ಬೆಳಗಿವೆ. ಇತಿಹಾಸದ ಕುರುಹು: 1857ರಲ್ಲಿ ನರಗುಂದ ಸಂಸ್ಥಾನವನ್ನಾಳಿದ ವೀರ ಬಾಬಾಸಾಹೇಬ ಭಾವೆ ಪರಾಕ್ರಮ ಮೆರೆವ ಐತಿಹಾಸಿಕ ಕೆಂಪಗಸಿ ಬಾಗಿಲು, ಅರಮನೆ, ತಿರುಪತಿ ಮಾದರಿ ವೆಂಕಟೇಶ್ವರ ದೇವಸ್ಥಾನ, ಹುತಾತ್ಮ ರೈತನ ವೀರಗಲ್ಲು ನರಗುಂದ ನೆಲದ ಇತಿಹಾಸವನ್ನು ಸಾರಿ ಹೇಳುತ್ತಿವೆ. ಜಾನಪದ ಕಲೆಯಲ್ಲೂ ತಾಲೂಕಿನ ಹಲವಾರು ಜಾನಪದ ಕಲಾ ತಂಡಗಳು ರಾಷ್ಟ್ರ ಮಟ್ಟದವರೆಗೆ ಜಾನಪದ ಕಲೆ ಪ್ರಕಾರ ಪ್ರದರ್ಶಿಸಿವೆ.
Related Articles
Advertisement
ಅಮೆರಿಕ ಶ್ವೇತ ಭವನದಲ್ಲಿ ಮುಕ್ತ ಪ್ರವೇಶ ಹೊಂದಿ, 180 ರಾಷ್ಟ್ರಗಳಲ್ಲಿ ಸಂಗೀತ ಕಚೇರಿ ನಡೆಸಿ ಸಂಗೀತ ಕ್ಷೇತ್ರದಲ್ಲಿ ವಿಶ್ವದುದ್ದಕ್ಕೂ ನರಗುಂದ ಕೀರ್ತಿ ಬೆಳಗಿದ ನಾದ ಬ್ರಹ್ಮಾನಂದ ಸ್ವಾಮಿಗಳು, ಕವಿ ನಾಗಭಟ್ಟರು, ಜನಸಂಘ ಸ್ಥಾಪಕರಲ್ಲಿ ಓರ್ವರಾದ ಕರ್ಣಾಟಕ ಕೇಸರಿ ದಿ| ಜಗನ್ನಾಥರಾವ್ ಜೋಶಿ ಅಂತಹ ಅಪ್ರತಿಮ ವಾಘ್ಮಯಿಗಳಿಗೆ ನರಗುಂದ ನೆಲ ಜನ್ಮ ನೀಡಿದೆ. ಎಲ್ಲ ರಂಗದಲ್ಲಿ ತನ್ನದೇ ಛಾಪು ಮೂಡಿಸಿದೆ.
ಐದನೇ ಸಮ್ಮೇಳನ: 2004ರಲ್ಲಿ ಪಟ್ಟಣದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 2014ರಲ್ಲಿ ಚಿಕ್ಕನರಗುಂದ, 2015ರಲ್ಲಿ ಭೈರನಹಟ್ಟಿ, 2017ರಲ್ಲಿ ಕಣಕಿಕೊಪ್ಪ ಸೇರಿ ನಾಲ್ಕು ಸಮ್ಮೇಳನ ಜರುಗಿದ್ದು, ಸುದೀರ್ಘ 14 ವರ್ಷಗಳ ಬಳಿಕ 2018ರ ಜು. 28ರಂದು ಐದನೇ ಸಮ್ಮೇಳನಕ್ಕೆ ನರಗುಂದ ಸಾಕ್ಷಿಯಾಗಲಿದೆ. ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿ, ಎಂ.ಕೆ. ದಿಬ್ಬದ, ಬಿ.ಎಸ್. ಹಣಜಿ, ಪ್ರೊ| ಎಸ್.ಬಿ. ಕುಷ್ಟಗಿ ಬಳಿಕ ಡಾ| ಬಿ.ಎಂ. ಜಾಬಣ್ಣವರ ಐದನೇ ಸಮ್ಮೇಳನಾಧ್ಯಕ್ಷರಾಗಿ ಕಂಗೊಳಿಸಲಿದ್ದಾರೆ. ಇಂತಹ ಸುದೀರ್ಘ ಇತಿಹಾಸವನ್ನೊಳಗೊಂಡ ನರಗುಂದದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸಿದ್ಧಲಿಂಗಯ್ಯ ಮಣ್ಣೂರಮಠ