ಕೋಲ್ಕತಾ: ನಾರದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಲ್ವರು ಮುಖಂಡರನ್ನು ಗೃಹಬಂಧನದಲ್ಲಿ ಇರಿಸಬೇಕೆಂಬ ಕೋಲ್ಕತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸೋಮವಾರ( ಮೇ 24) ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ:ಕಳೆದ ವರ್ಷದ ವಿಶ್ವಕಪ್ ಸಂಭಾವನೆ ಈ ವಾರ ನೀಡುತ್ತೇವೆ ಎಂದ ಬಿಸಿಸಿಐ
ವರದಿಗಳ ಪ್ರಕಾರ, ಇಂದು ಕೋಲ್ಕತಾ ಹೈಕೋರ್ಟ್ ನ ವಿಸ್ತೃತ ಪೀಠದಲ್ಲಿ ನಡೆಯಲಿರುವ ನಾರದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ತನಿಖಾ ಸಂಸ್ಥೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದೆ.
ನಾರದ ಪ್ರಕರಣದಲ್ಲಿ ಆರೋಪಿಗಳಾದ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರನ್ನು ಗೃಹಬಂಧನದಲ್ಲಿ ಇರಿಸುವ ಕೋಲ್ಕತಾ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ನ ವಿಶೇಷ ರಜಾಕಾಲದ(ಎಸ್ ಎಲ್ ಪಿ) ಅರ್ಜಿ ಸಲ್ಲಿಸಿದೆ.
Related Articles
ನಾರದ ಪ್ರಕರಣದಲ್ಲಿ ಆರೋಪಿಗಳಾದ ಟಿಎಂಸಿಯ ಇಬ್ಬರು ಸಚಿವರು ಸೇರಿದಂತೆ ನಾಲ್ವರು ಮುಖಂಡರಿಗೆ ಜಾಮೀನು ನೀಡಿ ಗೃಹಬಂಧನದಲ್ಲಿ ಇರಿಸುವಂತೆ ಕೋಲ್ಕತಾ ಹೈಕೋರ್ಟ್ ಮೇ 21ರಂದು ಆದೇಶ ನೀಡಿತ್ತು. ಟಿಎಂಸಿ ನಾಯಕರ ನಾರದ ಪ್ರಕರಣದ ವಿಚಾರಣೆಯನ್ನು ಕೋಲ್ಕತಾ ಹೈಕೋರ್ಟ್ ಪಂಚನ್ಯಾಯಾಧೀಶರ ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಆದೇಶ ನೀಡಿತ್ತು.