ಕೋಲ್ಕತಾ: ನಾರದ ಸ್ಟಿಂಗ್ ಟೇಪ್ ಪ್ರಕರಣದ ವಿಚಾರಣೆಯನ್ನು ಕೋಲ್ಕತಾ ಹೈಕೋರ್ಟ್ ಗುರುವಾರ(ಮೇ 20) ಮುಂದೂಡಿದ್ದರಿಂದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದ ಇಬ್ಬರು ಸಚಿವರು ಹಾಗೂ ಟಿಎಂಸಿ ಇಬ್ಬರು ಮುಖಂಡರು ಜೈಲಿನಲ್ಲಿಯೇ ಇರುವಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯನವರೇ ನನ್ನನ್ನು ಟೀಕಿಸಲು ಬಂದು ನೀವು ಹಿಟ್ ವಿಕೆಟ್ ಆಗಿದ್ದೀರಿ: ಎಚ್ ಡಿಕೆ
ನಾರದ ಸ್ಟಿಂಗ್ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಗೂ ಒಂದು ಗಂಟೆ ಮೊದಲು ನೋಟಿಸ್ ಜಾರಿಗೊಳಿಸಿದ ಕೋಲ್ಕತಾ ಹೈಕೋರ್ಟ್, ಅನಿವಾರ್ಯ ಕಾರಣಗಳಿಂದಾಗಿ ಇಂದು ಫಸ್ಟ್ ಡಿವಿಜನ್ ಪೀಠದ ಜಸ್ಟೀಸ್ ಗಳು ಹಾಜರಾಗುತ್ತಿಲ್ಲ ಎಂದು ತಿಳಿಸಿದೆ.
ಕೋಲ್ಕತಾ ಹೈಕೋರ್ಟ್ ವಿಚಾರಣೆ ಮುಂದೂಡಿದ ಪರಿಣಾಮ ತೃಣಮೂಲ ಕಾಂಗ್ರೆಸ್ ನ ಮುಖಂಡರಾದ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್, ಶಾಸಕ ಮದನ್ ಮಿತ್ರಾ ಹಾಗೂ ಮಾಜಿ ಮೇಯರ್ ಸೋವನ್ ಚಟರ್ಜಿ ನ್ಯಾಯಾಂಗ ಬಂಧನ ಮುಂದುವರಿದಂತಾಗಿದೆ.
ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ಹೈಕೋರ್ಟ್ ಆದೇಶದಂತೆ ನಾಲ್ವರು ಟಿಎಂಸಿ ಮುಖಂಡರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.