ಮಂಗಳೂರು ಎಂಆರ್‌ಪಿಎಲ್‌ನಿಂದ ನಾಫ್ತಾದ ಮೊದಲ ಕಂತನ್ನು ಬರೋಡದಲ್ಲಿರುವ ಒಎನ್‌ಜಿಸಿ ಪೆಟ್ರೋ ಎಡಿಶನ್ಸ್ ಲಿಮಿಟೆಡ್(ಒಪಲ್) ಕಂಪೆನಿಗೆ ಮಂಗಳವಾರ ರವಾನಿಸಲಾಗಿದೆ.
ಒಎನ್‌ಜಿಸಿ ಅಧ್ಯಕ್ಷ ಸುಭಾಷ್ ಕುಮಾರ್ ಅವರು ಆನ್‌ಲೈನ್ ಮೂಲಕ ಚಾಲನೆ ನೀಡಿದರು. ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್, ಒಪಾಲ್ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಕುಮಾರ್ ವರ್ಮ ಮಾತನಾಡಿದರು.
ಒಎನ್‌ಜಿಸಿಯ ಅಂಗ ಸಂಸ್ಥೆಗಳೇ ಆಗಿರುವ ಎಂಆರ್‌ಪಿಎಲ್ ಮತ್ತು ಒಪಾಲ್ ಮಧ್ಯೆ ಹೆಚ್ಚಿನ ಲಾಭದಾಯಕ ಸಹಭಾಗಿತ್ವಕ್ಕಾಗಿ ಈ ಉಪಕ್ರಮ ಜಾರಿಗೆ ತರಲಾಗಿದೆ. ಒಟ್ಟು 35 ಟಿಎಂಟಿ ಎಂಆರ್‌ಪಿಎಲ್ ನಾಫ್ತಾವನ್ನು ಸೂಪರ್ ರೂಬಿ ನೌಕೆಯ ಮೂಲಕ ಕಳುಹಿಸಲಾಗಿದೆ.
ಎಂಆರ್‌ಪಿಎಲ್ ರಿಫೈನರಿ ನಿರ್ದೇಶಕ ಸಂಜಯ್ ವರ್ಮ, ಮುಖ್ಯ ಜಾಗೃತ ಅಧಿಕಾರಿ ರಾಜೀವ್ ಕುಶ್ವ, ರಿಫೈನರಿ ಕಾರ್ಯ ನಿರ್ವಾಹಕ ನಿರ್ದೇಶಕ ಎಂ. ಇಳಂಗೊ, ಜಿಜಿಎಂ ಶ್ಯಾಮ್ ಕಾಮತ್ ಉಪಸ್ಥಿತರಿದ್ದರು.ಸಿಜಿಎಂ ಮಾರ್ಕೆಟಿಂಗ್ ಎಚ್.ಸಿ. ಸತ್ಯನಾರಾಯಣ ಅವರು ಪ್ರಸ್ತಾವನೆಗೈದರು.
ಇದನ್ನೂ ಓದಿ:ಬೂಸ್ಟರ್ ಡೋಸ್ ಪಡೆದುಕೊಂಡ ಅಧ್ಯಕ್ಷ ಬೈಡೆನ್