Advertisement

ಪರಿಣಾಮಕಾರಿಯಾಗಿ “ನನ್ನ ವಿದ್ಯಾರ್ಥಿ-ನನ್ನ ಜವಾಬ್ದಾರಿ’ಅಭಿಯಾನ

01:39 PM May 31, 2021 | Team Udayavani |

ಕೊಲ್ಲಾಪುರ,: ಚಿಕ್ಕ ಮಕ್ಕಳಲ್ಲಿ ಸಂಭವನೀಯ ಮೂರನೇ  ಅಲೆ ಅಪಾಯ ಸಾಧ್ಯತೆ ಹೆಚ್ಚು ಎಂದು ವೈದ್ಯಕೀಯ ತಜ್ಞರು ಅಂದಾಜಿಸಿದ್ದಾರೆ. ಈ ಅಲೆಯ ವಿರುದ್ಧದ ಹೋರಾಟವನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸಾಮೂಹಿಕವಾಗಿ ಎದುರಿಸಲು ಜಿಲ್ಲೆಯಲ್ಲಿ ನನ್ನ ವಿದ್ಯಾರ್ಥಿ-ನನ್ನ ಜವಾಬ್ದಾರಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ಸತೇಜ್‌ ಪಾಟೀಲ್‌ ಜಿಲ್ಲೆಯ ಪ್ರಾಥಮಿಕ ಮತ್ತು ಮಾಧ್ಯಮಗಳ ಶಿಕ್ಷಕರಿಗೆ ನಿರ್ದೇಶಿಸಿದ್ದಾರೆ.

Advertisement

ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಅಗತ್ಯ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯ ರಾಜರ್ಷಿ ಶಾಹುಜಿ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಜಿಲ್ಲೆಯ ಪ್ರಾಥಮಿಕ ಮಟ್ಟದಲ್ಲಿ ಮಕ್ಕಳಿಗಾಗಿ 150 ಒಟ್ಟು ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ ಸಚಿವರು, 18 ವರ್ಷಗಳೊಳಗಿನ ಅಸ್ವಸ್ಥ ವಿದ್ಯಾರ್ಥಿಗಳ ಪಟ್ಟಿಯನ್ನು ಎಂಟು ದಿನಗಳಲ್ಲಿ ಸಿದ್ಧಪಡಿಸುವಂತೆ ಸಂಬಂಧಪಟ್ಟ ಏಜೆನ್ಸಿಗಳಿಗೆ  ಸೂಚಿಸಿದ್ದಾರೆ.

ಶಿಕ್ಷಕರು ಕೊರೊನಾ ಬಗ್ಗೆ ಮಕ್ಕಳ ಮನಸ್ಸಿ ನಲ್ಲಿರುವ ಭಯವನ್ನು ಕಡಿಮೆ ಮಾಡಲು ಆನ್‌ಲೈನ್‌ ಕೌನ್ಸೆಲಿಂಗ್‌ಗಾಗಿ ಕನಿಷ್ಠ ಒಂದು ಗಂಟೆಯಾದರೂ ಕಾಯ್ದಿರಿಸಬೇಕು. ಹೆತ್ತವರು ಆತಂಕಕ್ಕೊಳಗಾಗಬಾರದು. ಈ ಸಂಭಾವ್ಯ ಅಲೆಯನ್ನು ಎದುರಿಸಲು ಶಿಕ್ಷಕರು, ಹೆತ್ತವರು, ಆರೋಗ್ಯ ವ್ಯವಸ್ಥೆ ಮತ್ತು ಗ್ರಾಮಸ್ಥರು ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಹೆತ್ತವರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಕೊರೊನಾ ಅಲೆಯಿಂದ ಮಕ್ಕಳನ್ನು ಮತ್ತು ವಿದ್ಯಾರ್ಥಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು ಮಾರ್ಗಸೂಚಿ ರಚಿಸ ಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

 ತಾಲೂಕು ಮಟ್ಟದಲ್ಲಿ ಸಮಿತಿ

Advertisement

ಮಗುವಿನ ಮನಸ್ಥಿತಿಯನ್ನು ಅರಿತುಕೊಳ್ಳಲು ಕೊರೊನಾದ ಅಲೆಯಿಂದ ಮಕ್ಕಳನ್ನು ಉಳಿಸಲು ಶಿಕ್ಷಕರು ಮತ್ತು ಹೆತ್ತವರು ಒಟ್ಟಾಗಿ ಕೆಲಸ ಮಾಡಬೇಕು. ಮುಂಬರುವ ಅಲೆಯ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿಗಳ ನೇಮಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅವಕಾಶ ನೀಡಬೇಕು ಎಂದು ಶಾಸಕ ಜಯಂತ್‌ ಅಸಾYಂವ್‌ಕರ್‌ ಮನವಿ ಮಾಡಿದರು.

ಕೊರೊನಾ ವ್ಯಕ್ತಿಯಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಉಂಟು ಮಾಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಅಲ್ಲದೆ ರೋಗದ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸಂಬಂಧಪಟ್ಟ ಹೆತ್ತವರು ಮತ್ತು ಶಿಕ್ಷಕರು ತತ್‌ಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಜಿÇÉಾಧಿಕಾರಿ ದೌಲತ್‌ ದೇಸಾಯಿ ತಿಳಿಸಿದರು.

ಸಿಪಿಆರ್‌ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಮತ್ತು ಕಾರ್ಯಪಡೆಯ ಅಧ್ಯಕ್ಷೆ ಡಾ| ಸಂಗೀತಾ ಕುಂಭೋಜRರ್‌ ಅವರು ಕೊರೊನಾ ಕಾಯಿಲೆ, ಚಿಕಿತ್ಸಾ ವಿಧಾನಗಳು, ಸಮಾಲೋಚನೆ ವಿಧಾನಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಜಿಲ್ಲಾ ಆಡಳಿತವು ಮೂರನೇ ಅಲೆಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮನಪಾ ಆಯುಕ್ತೆ ಡಾ| ಕಾದಂಬರಿ ಬಾಲ್ಕಾ$Ìಡೆ, ಹೆಚ್ಚುವರಿ ಕಲೆಕ್ಟರ್‌ ಕಿಶೋರ್‌ ಪವಾರ್‌, ನಿವಾಸ ಉಪ ಕಲೆಕ್ಟರ್‌ ಭಾವು ಸಾಹೇಬ್‌ ಗಲಾಂಡೆ, ವೈದ್ಯಕೀಯ ಅಧೀಕ್ಷಕ ಡಾ| ಎಸ್‌.ಎಸ್‌. ಮೋರೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಯೋಗೇಶ್‌ ಸೇಲ…, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಅನಿಲ್‌ ಮಾಲಿ, ಕಾರ್ಯಪಡೆಯ ಸದಸ್ಯ ಡಾ| ವೆಂಕಟೇಶ್‌ ತಾರಕ್ಸಬಂದೆ, ಪ್ರಾಥಮಿಕ, ಮಾಧ್ಯಮಿಕ, ಶಿಕ್ಷಣ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next