Advertisement

ನೀಲಂಬೂರ್‌-ನಂಜನಗೂಡು ರೈಲ್ವೆ : ಸುರಂಗ ನಿರ್ಮಾಣಕ್ಕೆ ಪ್ರತಿರೋಧ

12:53 PM Mar 19, 2017 | |

ಬೆಂಗಳೂರು: ಕೇರಳದ ನೀಲಂಬೂರ್‌ ಹಾಗೂ ಕರ್ನಾಟಕದ ನಂಜನಗೂಡು ನಡುವಿನ ರೈಲ್ವೆ ಯೋಜನೆಯಡಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಸುರಂಗ ಮಾರ್ಗನಿರ್ಮಾಣಕ್ಕೆ ರಾಜ್ಯ ಅರಣ್ಯ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮಾ.27ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮೆಟ್ರೋ ತಜ್ಞ ಇ.ಶ್ರೀಧರನ್‌ ಮಾತುಕತೆ ನಡೆಸಲಿದ್ದಾರೆ.

Advertisement

ನೀಲಂಬೂರ್‌- ನಂಜನಗೂಡು ನಡುವೆ 174 ಕಿ.ಮೀ. ಉದ್ದದ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗೆ ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೋಜನೆಯಡಿ 62 ಕಿ.ಮೀ. ಉದ್ದದ ಮಾರ್ಗ ರಾಜ್ಯದಲ್ಲಿ ಹಾದು ಹೋಗಲಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾಗದಲ್ಲಿ 19 ಕಿ.ಮೀ. ಉದ್ದದ ಸುರಂಗ ಮಾರ್ಗದ ಪ್ರಸ್ತಾಪವಿದೆ. ಅರಣ್ಯ ಪ್ರದೇಶದಲ್ಲಿ ಯಾವುದೇ ಕಾಮಗಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನಿರಾಕರಿಸಿರುವ ಕಾರಣ ಕೇರಳ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾದಂತಿದೆ.

ಈ ಕುರಿತು ಶನಿವಾರ ಮಾಹಿತಿ ನೀಡಿದ ಇ.ಶ್ರೀಧರನ್‌, ಈ ಯೋಜನೆ ಕಾರ್ಯಗತವಾದರೆ ಕರ್ನಾಟಕಕ್ಕೆ ಸಮೀಪದಲ್ಲೇ ಬಂದರು ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಇಲ್ಲದಿದ್ದರೆ ಚೆನ್ನೈ ಇಲ್ಲವೇ ಮಂಗಳೂರಿನ ಬಂದರನ್ನು ಅವಲಂಬಿಸಬೇಕಾಗುತ್ತದೆ. ರೈಲ್ವೆ ಯೋಜನೆ ಜಾರಿಯಾದರೆ ಸಂಚಾರ ಸುಗಮವಾಗಲಿದೆ. ಇಷ್ಟಾದರೂ ರಾಜ್ಯ ಅರಣ್ಯ ಇಲಾಖೆಯಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಇದೇ 27ರಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು. 

ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಿರುವ ಉದ್ದೇಶಿತ ಯೋಜನೆಯಿಂದ ವನ್ಯಜೀವಿಗಳು, ಅರಣ್ಯವಾಸಿಗಳು, ವನ್ಯಸಂಪತ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಕೇರಳ ಸರ್ಕಾರ ಸಮಗ್ರ ಯೋಜನಾ ವರದಿ
ಸಿದ್ಧಪಡಿಸಿದೆ. ಸಮಗ್ರ ಸಾಧ್ಯತಾ ವರದಿ ಸಿದ್ಧವಾಗಬೇಕಿದ್ದು, ಭೌಗೋಳಿಕ, ಪರಿಸರ, ಸಂಚಾರ ಇತರೆ ಕ್ಷೇತ್ರಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಅಧ್ಯಯನ ನಡೆಸಲಾಗುವುದು. 

“ತಲಚೇರಿ- ಮೈಸೂರು’ ರೈಲ್ವೆ ಯೋಜನೆಗೆ ಸಂಬಂಧಪಟ್ಟಂತೆ ಸಮಗ್ರ ಸಾಧ್ಯತಾ ವರದಿ ಬಹುತೇಕ ಪೂರ್ಣಗೊಂಡಿದ್ದು, ಯೋಜನೆ ಜಾರಿ ಬಗ್ಗೆಯೂ ಆಸಕ್ತಿ ತೋರಿದೆ’ಎಂದು ಹೇಳಿದರು.

Advertisement

ತೋಕೂರು ಮತ್ತು ಮಂಗಳೂರು ಬಂದರಿಗೆ ಸಂಪರ್ಕಿಸುವ ರೈಲ್ವೆ ಮಾರ್ಗವನ್ನು ಕೊಂಕಣ ರೈಲ್ವೆ ವಿಭಾಗದ ವ್ಯಾಪ್ತಿಗೆ ಒಳಪಡಿಸದ ಕಾರಣ ಈ ಮಾರ್ಗದಲ್ಲಿ ಲಾಭದಾಯಕ ವ್ಯವಹಾರ ನಡೆಯುತ್ತಿದ್ದರೂ ಅದರ ಲಾಭ ಕರ್ನಾಟಕಕ್ಕೆ ದೊರೆಯದೆ ಪಾಲಾ^ಟ್‌ ರೈಲ್ವೆ ವಿಭಾಗ ಪಡೆಯುತ್ತಿದೆ. ತೋಕೂರು ಮತ್ತು ಮಂಗಳೂರು ಬಂದರು ಸಂಪರ್ಕ ರೈಲ್ವೆ ಮಾರ್ಗ ಲಾಭದಾಯಕವಾಗಿದೆ. ಈ ಮಾರ್ಗವನ್ನು ಕೊಂಕಣ ರೈಲ್ವೆ ವಿಭಾಗಕ್ಕೆ ಸೇರ್ಪಡೆ ಮಾಡುವಂತೆ ರೈಲ್ವೆ ಇಲಾಖೆಗೆ ಪತ್ರ ಕೂಡ ಬರೆಯಲಾಗಿತ್ತು .
– ಡಾ.ಇ.ಶ್ರೀಧರನ್‌, ಮೆಟ್ರೋ ತಜ್ಞ 

Advertisement

Udayavani is now on Telegram. Click here to join our channel and stay updated with the latest news.

Next