Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿರುವುದರಿಂದ ಇಲ್ಲಿ ಸಭೆ ನಡೆಸಿ ಕಾರ್ಯಕರ್ತರ ಭಾವನೆ ತಿಳಿದುಕೊಂಡಿದ್ದೇನೆ. ಜೆಡಿಎಸ್‌ನಲ್ಲಿ ಅಭ್ಯರ್ಥಿಗಳಿಗೇನು ಕೊರತೆ ಇಲ್ಲ. ಎರಡೂ ಕ್ಷೇತ್ರದಲ್ಲಿ ಹಲವು ಮಂದಿ ಸ್ಪರ್ಧಾಕಾಂಕ್ಷಿಗಳಿದ್ದಾರೆ. ಅಲ್ಲದೇ, ಜನರ ಒಲವು ಕೂಡ ಜೆಡಿಎಸ್ ಪರವಾಗಿದೆ. ಹಿಂದೆ ಬಿಜೆಪಿ ಆಪರೇಷನ್ ಕಮಲ ಮಾಡಿದ್ದ ಸಂದರ್ಭದಲ್ಲಿಯೇ 20 ಉಪ ಚುನಾವಣೆ ಎದುರಿಸಿದ ತನಗೆ ಈ ಎರಡು ಉಪ ಚುನಾವಣೆ ಎದುರಿಸುವ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸೇರಿರುವ ಕಳಲೆ ಕೇಶವಮೂರ್ತಿ, ಪಕ್ಷ ಬಿಡುವ ಕುರಿತು ತನ್ನೊಡನೆ ಮಾತುಕತೆ ನಡೆಸಿರಲಿಲ್ಲ. ಅಲ್ಲದೆ, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಎಲ್ಲರೆದರು ಹೇಳಿದ್ದ ಕೇಶವಮೂರ್ತಿ, ಪಕ್ಷ ಬಿಟ್ಟು ಹೋಗಿದ್ದಾರೆ. ಆ ಬಗ್ಗೆ ತಾನು ತಲೆಕೆಡಿಸಿಕೊಂಡಿಲ್ಲ. ಪಕ್ಷದಲ್ಲಿ ಕ್ರಿಯಾಶೀಲರಾಗಿರುವ ಹೊಸ ಮುಖಗಳಿಗೆ ಅವಕಾಶ ನೀಡುತ್ತೇನೆ ಎಂದು ತಿಳಿಸಿದರು. ನಂಜನಗೂಡು ಕ್ಷೇತ್ರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಇನ್ನಿಲ್ಲದ ಪ್ರೀತಿ ಬಂದಿದೆ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್‌ನಲ್ಲಿ ಇರುವವರೆಗೂ ಇಲ್ಲದ ಪ್ರೀತಿ, ಈಗ ಹೆಚ್ಚಾಗಿದೆ. ನಿಯಮ ಗಾಳಿಗೆ ತೂರಿ ನೂರಾರು ಕೋಟಿ ಯೋಜನೆಗೆ ಅನುಮೋದನೆ ನೀಡುತ್ತಿದ್ದಾರೆ.
Related Articles
Advertisement
ಚಾಮರಾಜನಗರ ಜಿಲ್ಲೆಯ ಸ್ಥಿತಿ ಇನ್ನೂ ಶೋಚಿನೀಯವಾಗಿದೆ. ಅಲ್ಲಿನ ಜನ ವೀರಪ್ಪನ್ ಬದುಕಿದ್ದಾಗಲೇ ಚೆನ್ನಾಗಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದರೆ ಈ ಸರ್ಕಾರದಲ್ಲಿ ವೀರಪ್ಪನ್‌ಗಿಂತಲೂ ಕೆಟ್ಟ ದರೋಡೆಕೋರರು ಇದ್ದಾರೆ ಎಂದಾಯಿತು ಎಂದು ಅವರು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಹೋಲಿಕೆ ಮಾಡುವುದು ಸರಿಯಲ್ಲ ಎಂಬುದು ಸತ್ಯ, ಏಕೆಂದರೆ ತಮಗೆ ಬೇರೆ ಪಕ್ಷದಿಂದ ಅಭ್ಯರ್ಥಿಗಳನ್ನು ಕರೆತಂದು ಚುನಾವಣೆಯಲ್ಲಿ ಕಣಕ್ಕಿಳಿಸಬೇಕಾದಷ್ಟು ದಾರಿದ್ರé ಬಂದಿಲ್ಲ. ಇತ್ತೀಚೆಗೆ ನಡೆದ ಅಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯುಲ್ಲಿ ಕೂಡ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ, ಹೀಗಿರುವಾಗ ಕಾಂಗ್ರೆಸ್‌ಗೆ ಜೆಡಿಎಸ್ ಅನ್ನು ಹೇಗೆ ಹೋಲಿಕೆ ಮಾಡಲು ಸಾಧ್ಯ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ದಬ್ಟಾಳಿಕೆ:ನಂಜನಗೂಡಿಗೆ ತೆರಳಿದ ತನ್ನನ್ನು ಬರಮಾಡಿಕೊಳ್ಳಲು ಬಂದ ಪಕ್ಷದ ಕಾರ್ಯಕರ್ತರ ಬೈಕ್, ಕಾರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಚುನಾವಣೆಗೆ ಮುನ್ನವೇ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇನ್ನು ಮುಂದೆ ಹೇಗೋ ಎಂಬ ಆತಂಕ ಕಾಡುತ್ತಿದೆ ಎಂದು ತಿಳಿಸಿದರು.