ನಂಜನಗೂಡು :ರಾಜ್ಯದಾದ್ಯಂತ ಸುದ್ದಿಯಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳ ಕಟು ಟೀಕೆಗೆ ಕಾರಣವಾಗಿದ್ದ ನಂಜನಗೂಡು ತಾಲೂಕಿನ ಉಚ್ಚಗಣಿ ಮಹದೇವಮ್ಮ ದೇವಾಲಯದ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ತಹಶೀಲ್ದಾರ ಮೋಹನ ಕುಮಾರಿ ಅವರ ತಲೆ ದಂಡವಾಗಿದ್ದು, ಅವರನ್ನು ಸೋಮವಾರ ವರ್ಗಾವಣೆ ಮಾಡಲಾಗಿದೆ.
ಸರ್ವೊಚ್ಚ ನ್ಯಾಯಾಲಯದ ಆದೇಶದ ಜಾರಿಗಾಗಿ ಉಚ್ಚಗಣಿ ದೇವಾಲಯವನ್ನು ರಾತ್ರೋರಾತ್ರಿ ಧರೆಗುರುಳಿಸಿದ್ದೇ ದೊಡ್ಡ ಹಗರಣವಾಗಿ ಅದರಿಂದಾಗಿ ಆಡಳಿತ ಪಕ್ಷ ಬಿಜೆಪಿಯ ಬೇರುಗಳೇ ಈ ಪ್ರಕರಣದ ವಿರುದ್ಧ ತಿರುಗಿಬಿದ್ದಿದ್ದು ಅಲ್ಲದೆ ವಿರೋಧ ಪಕ್ಷ ಕಾಂಗ್ರೇಸ್ ನಾಯಕರು ಸಹ ಇದನ್ನು ಬಿಜೆಪಿ ವಿರುದ್ಧದ ಅಸ್ತ್ರವಾಗಿ ಜುಳಿಪಿಸತೊಡಗಿದ್ದವು.
ಆರೋಪ ಪ್ರತ್ಯಾರೋಪಗಳ ನಡುವೆಯೇ ತಹಶೀಲ್ದಾರ ತಲೆ ದಂಡ ಖಚಿತ ಎಂಬ ಸುದ್ದಿ ದೇವಾಲಯ ತೆರವಾದ ಮಾರನೇ ದಿನದಿಂದಲೇ ಹರಿದಾಡತೊಡಗಿತ್ತು.
ತಾಲೂಕಿನ ಕೆಲವು ದೇವಾಲಯಗಳು ತೆರವಿನ ಪಟ್ಟಿಯಲ್ಲಿದ್ದು, ಕಳೆದರೆಡು ತಿಂಗಳಿಂದ ಈ ಕುರಿತು ಅಧಿಕಾರಿಗಳು ಮಾತ್ತು ಸಂಬಂಧಪಟ್ಟ ಜನಪ್ರತಿನಿಧಿಗಳ ನಡುವೆ ಯಾವು ದೇವಾಲಯ ಎಂಬುದರ ಕುರಿತು ಚರ್ಚೆನಡೆದು ಅಂತಿಮವಾಗಿ ಉಚ್ಚಗಣೆ ದೇವಾಲಯವನ್ನೇ ಆಯ್ಕೆ ಮಾಡಿಕೊಂಡು ರಾತ್ರಿಯಲ್ಲಿ ಸೆಪ್ಟಂಬರ್ 8 ಬುಧವಾರ ಬೆಳಗಿನ ಜಾವ 3 ಗಂಟೆಗೆ ಕರ‍್ಯಾಚರಣೆ ನಡೆಸಿ ಜೆ ಸಿ ಬಿ ಸಹಾಯದಿಂದ ದೇವಾಲಯವನ್ನು ಧರೆಗುರಿಳಿಸಲಾಗಿತ್ತು.
ಕೆರೆ ,ಕಟ್ಟೆ ಕೊನೆಗೆ ರಸ್ತೆ ಯಾವದಕ್ಕೂ ತೊಂದರೆಯಾಗದ ಬಾಗಲಕೋಟೆ ಬಿಳಗಿರಿ ರಂಗನ ಬೆಟ್ಟದ ರಸ್ತೆಗೆ ಕೂಗಳತೆಯಲ್ಲಿದ್ದ ಈ ದೇವಾಲಯವನ್ನು ತೆರವುಗೊಳಿಸುವ ಪಟ್ಟಿಗೆ 2007 ರಲ್ಲಿ ಹೇಗೆ ಏಕೆ ಸೇರಿಸಲಾಯಿತು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ಸಹ ನಡೆಸದೇ ಕೊನೆಗೇ ಸುಳಿವೂ ಸಹ ನೀಡದೆ ಪ್ರಾಚೀನ ಶಿಲಾ ಶಾಸನಗಳನ್ನೊಳಗೊಂಡ ದೇವಾಲಯವನ್ನು ರಾತ್ರೋರಾತ್ರಿ ಧರೆ ಗುರುಳಿಸಿದ ವೈಖರಿಗೆ ಆಡಳಿತ ಹಾಗೂ ವಿರೋಧ ಪಕ್ಷಮಾತ್ರವಲ್ಲದೆ ಹಿಂದು ಸಮಾಜದ ಸಂಘಸಂಸ್ಥೆಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು.
ಇದನ್ನೂ ಓದಿ:ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ
ಈ ದೇವಾಲಯದ ತೆರವಿನ ತಿರ್ಮಾನ ಕೇವಲ ತಹಶೀಲ್ದಾರದ್ದು ಮಾತ್ರವೇ? ಇದರಲ್ಲಿ ಬೇರೆಯವರ ಒಪ್ಪಿಗೆ ಇರಲೇ ಇಲ್ಲವೆ ಎಂಬ ಜಿಜ್ಞಾಸೆ ತಹಶೀಲ್ದಾರ ತಲೆದಂಡದೊಂದಿಗೆ ತಾಲೂಕಿನಲ್ಲಿ ಆರಂಭವಾಗಿದ್ದು ಮುಂದೇನು ಎಂಬುದನ್ನು ಕಾದು ನೋಡಬೇಕಿದೆ .
ಸರ್ಕಾರ 27 – 7 -21 ಸೋಮವಾರವೇ ನಂಜನಗೂಡು ತಹಶೀಲ್ದಾರರನ್ನು ಬೆಂಗಳೂರಿನ ಐ. ಎಂ ಏ ವಂಚನೆ ಪ್ರಕರಣ ಸಕ್ಷಮ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಸೋಮವಾರ ಸಂಜೆಯೇ ಇಲ್ಲಿನ ಗ್ರೇಡ್ 2 ತಹಶೀಲ್ದಾರ ಭೈರಯ್ಯ ಅವರು ನಂಜನಗೂಡು ತಹಶೀಲ್ದಾರ ಆಗಿ ಅಧಿಕಾರ ಸ್ವಿಕಾರ ಮಾಡುವದರೊಂದಿಗೆ 227 ದಿನಗಳ ಮೋಹನ ಕುಮಾರಿ ಅವರ ಇಲ್ಲಿನ ಅಧಿಕಾರ ತಲೆ ದಂಡದ ರೂಪದಲ್ಲಿ ಕೊನೆಗೊಂಡಂತಾಗಿದೆ.