ಕಾರ್ಕಳ ಗ್ರಾಮೀಣ ಪ್ರದೇಶ ವಾಗಿರುವ ಮುಂಡ್ಕೂರು ನಾನಿಲ್ತಾರ್ ಪರಿಸರದ ಮುಂಬಯಿಯಲ್ಲಿ ನೆಲೆಸಿರುವ ಕುಲಾಲ ಸಮಾಜ ಬಾಂಧವರ ಒಗ್ಗಟ್ಟಿಗಾಗಿ ಸ್ಥಾಪಿಸಿರುವ ನಾನಿಲ್ತಾರ್ ಅಭಿಮಾನಿ ಬಳಗವು ವರಮಹಾಲಕ್ಷ್ಮೀ ಪೂಜೆಯನ್ನು ಗೋರೆಗಾಂವ್ ಜೋಗೇಶ್ವರಿ ಪರಿಸರದಲ್ಲಿ ಕಳೆದ 9 ವರ್ಷಗಳಿಂದ ನಡೆಸುತ್ತಾ ಬಂದಿದೆ. ಪ್ರಸ್ತುತ ವರ್ಷದ ಪೂಜೆ ಆ. 15ರಂದು ಜೋಗೇಶ್ವರಿ ಪೂರ್ವದ ಮಾಂಗಲ್ಯ ಸಭಾ ಭವನದಲ್ಲಿ ನಡೆಯಲಿದೆ.
Advertisement
ಬಳಗದ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸುಂದರ್ ಶ್ರೀಯಾನ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸುಕುಮಾರ್ ಸಾಲ್ಯಾನ್, ಉಪಾಧ್ಯಕ್ಷರಾಗಿ ಕೃಷ್ಣ ಮೂಲ್ಯ ನಲಸೋಪರ, ಹರೀಶ್ ಮೂಲ್ಯ ಅಂಧೇರಿ, ದಿನೇಶ್ ಬಂಗೇರ, ಕೋಶಾಧಿಕಾರಿಯಾಗಿ ಕೇಶವ ಬಂಜನ್, ಜತೆ ಕಾರ್ಯದರ್ಶಿಯಾಗಿ ನಾರಾಯಣ್ ಮೂಲ್ಯ ವಿರಾರ್, ಜತೆ ಕೋಶಾಧಿಕಾರಿಯಾಗಿ ರೇವತಿ ಮೂಲ್ಯ ಅವರು ಆಯ್ಕೆಯಾದರು.ಸಲಹೆಗಾರರಾಗಿ ಶಂಕರ ವೈ. ಮೂಲ್ಯ, ವಸಂತಿ ಸುಂದರ್ ಶ್ರೀಯಾನ್, ಸರೋಜಾ ಎಚ್. ಮೂಲ್ಯ, ಉಷಾ ಎಸ್. ಸಾಲ್ಯಾನ್, ನಳಿನಿ ಎನ್. ಮೂಲ್ಯ ವಿರಾರ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶಂಕರ ವೈ. ಮೂಲ್ಯ, ವಸಂತಿ ಎಸ್. ಶ್ರೀಯಾನ್ ಅವರು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮವನ್ನು ಕೃಷ್ಣ ಮೂಲ್ಯ ಅವರು ನಿರೂಪಿಸಿ ವಂದಿಸಿದರು.