15ನೇ ಶತಮಾನದಲ್ಲಿ ಪೋರ್ಚುಗೀಸರು ಆಫ್ರಿಕಾಗೆ ಕಾಲಿಡುತ್ತಾರೆ. ಅಲ್ಲಿ ಅವರಿಗೆ ಒಂದು ಮೆಣಿಸನಕಾಯಿ ಕಾಣುತ್ತದೆ. ಅದನ್ನು ಜಜ್ಜಿ, ಅರೆದು ಅದನ್ನು ಈರುಳ್ಳಿ, ಬೆಳ್ಳುಳ್ಳಿ, ನಿಂಬೆಹಣ್ಣು ಮುಂತಾದವುಗಳಿಗೆ ಮಿಕ್ಸ್ ಮಾಡಿ ಒಂದು ಹೊಸ ಸಾಸ್ ಕಂಡುಹಿಡಿದರು. ಅದರ ಹೆಸರು ಪೆರಿಪೆರಿ ಸಾಸ್. ಈ ಪೆರಿಪೆರಿ ಸಾಸ್ ಈಗ ಬರೀ ಆಫ್ರಿಕಾಗಷ್ಟೇ ಸೀಮಿತವಾಗಿಲ್ಲ, ಇಡೀ ಜಗತ್ತಿಗೆ ಹರಡಿದೆ. ಬೆಂಗಳೂರಿನಲ್ಲಿ ಪೆರಿಪೆರಿ ಸಾಸ್ ರುಚಿ ನೋಡಬೇಕೆಂದರೆ ನೀವು ನಂದೋಸ್ ಎಂಬ ರೆಸ್ಟೋರೆಂಟ್‌ಗೆ ಹೋಗಬೇಕು.
ಐದು ವರ್ಷಗಳ ಹಿಂದೆ, ಅಂಥದ್ದೊಂದು ಬ್ರಾಂಡ್ ಇರಬಹುದು ಎಂಬ ಕಲ್ಪನೆ ಬಹಳಷ್ಟು ಜನರಿಗೆ ಇರಲೇ ಇಲ್ಲ. ಚರ್ಚ್ ಸ್ಟ್ರೀಟ್‌ನಲ್ಲಿ ಶುರುವಾಯಿತು ನೋಡಿ, ಅಲ್ಲಿಂದ ಜನರಿಗೆ ನಂದೋಸ್ ಎಂಬ ರೆಸ್ಟೋರೆಂಟ್ ಬಗ್ಗೆ ಗೊತ್ತಾಯಿತು. ನಂದೋಸ್ ಎನ್ನುವುದು ಭಾರತೀಯ ತಿಂಡಿ-ತಿನಿಸುಗಳನ್ನು ಕೊಡುವ ರೆಸ್ಟೋರೆಂಟ್ ಖಂಡಿತಾ ಅಲ್ಲ. ಅದು ಆಫ್ರಿಕಾದ ಆಹಾರ ಪದ್ಧತಿಯನ್ನು ಪರಿಚಯಿಸುವ ಒಂದು ದೊಡ್ಡ ರೆಸ್ಟೋರೆಂಟ್.
ನಂದೋಸ್ ಬಹಳ ಜನಪ್ರಿಯವಾಗಿರುವುದು ಎರಡು ವಿಷಯಗಳಿಗೆ. ಒಂದು ಅಲ್ಲಿನ ಚಿಕನ್, ಇನ್ನೊಂದು ಪೆರಿಪೆರಿ ಸಾಸ್‌ಗೆ. ಇವೆರೆಡೂ ನಂದೋಸ್‌ನ ಆತ್ಮ ಎಂದರೆ ತಪ್ಪಲ್ಲ. ಅಷ್ಟೇ ಅಲ್ಲ, ನಂದೋಸ್ ಎಂಬ ರೆಸ್ಟೋರೆಂಟ್‌ನ ಯಶಸ್ಸಿಗೆ ಕಾರಣವೂ ಈ ಚಿಕನ್ ಮತ್ತು ಪೆರಿಪೆರಿ. ಈ ಪೆರಿಪೆರಿ ಎಂಬ ಸಾಸ್, ಬರೀ ರೆಸ್ಟೋರೆಂಟ್‌ಗೆ ಮಾತ್ರ ಸೀಮಿತವಲ್ಲ. ಈಗ ಅದನ್ನು ಬಾಟಲ್ ಮಾಡಿಯೂ ಮಾರಲಾಗುತ್ತಿದೆ. ಆದರೆ, ಒಂದು ತಿನಿಸನ್ನು ವಿಧವಿಧ ಪೆರಿಪೆರಿ ಸಾಸ್‌ಗಳೊಂದಿಗೆ ತಿನ್ನಬೇಕು ಎಂದರೆ ನಂದೋಸ್‌ಗೆà ಹೋಗಬೇಕು. ಈ ಪೆರಿಎಪರಿ ಸಾಸ್‌ಗಳಲ್ಲಿ ಹಲವು ರೀತಿಯದ್ದಿವೆ. ಅಷ್ಟೇ ಅಲ್ಲ, ಅದರಲ್ಲೂ ಹಾಟ್, ಮೀಡಿಯಂ ಮತ್ತು ಮೈಲ್ಡ್ ಎಂಬ ವೆರೈಟಿಗಳಿವೆ. ನಿಮ್ಮ ರುಚಿಗೆ ತಕ್ಕಂತೆ ಬೇಕಾದ ಸಾಸ್‌ಗಳನ್ನು ಮಿಕ್ಸ್ ಮಾಡಿಕೊಂಡು ತಿನ್ನುವ ಅವಕಾಶ ಈ ರೆಸ್ಟೋರೆಂಟ್‌ನಲ್ಲಿದೆ.
ಮಿಕ್ಕ ಶೈಲಿಗಳಂತೆ ಇಲ್ಲೂ ಸ್ಟಾರrರ್, ಮೇಯ್ನ ಮೆನು ಮತ್ತು ಡೆಸರ್ಟ್‌ಗಳು ಇಲ್ಲೂ ಇವೆ. ಸಸ್ಯಹಾರಿ ಮತ್ತು ಮಾಂಸಾಹಾರಿ, ಈ ಮೂರು ವಿಭಾಗಗಳಲ್ಲಿ ಏನು ಬೇಕಾದರೂ ತಿನ್ನಬಹುದು. ಮೊದಲು ಸಸ್ಯಹಾರಿ ತಿಂಡಿ-ತಿನಿಸುಗಳ ಬಗ್ಗೆ ಹೇಳುವುದಾದರೆ, ಇಲ್ಲಿಯ ವಿಶೇಷತೆಯೆಂದರೆ ಅದು ವೆಜೆ ಎಸ್ಪೆಟೆಡಾ. ಗ್ರಿಲ್ ಮಾಡಿರುವ ಪನ್ನೀರ್, ಅಣಬೆ, ಬೊÅಕೋಲಿ ಮತ್ತು ಬಾಲ್ ಪೆಪ್ಪರ್ ಈ ಖಾದ್ಯದ ವಿಶೇಷ. ಇದಲ್ಲದೆ ಸಮ್‌ಥಿಂಗ್ ಎಕೊÕàಟಿಕ್ ಎನ್ನುವ ಇನ್ನೊಂದು ಖಾದ್ಯದಲ್ಲಿ ಕಲ್ಲಂಗಡಿ ಹಣ್ಣು, ಪನ್ನೀರ್‌ನ್ನು ಗ್ರಿಲ್ ಮಾಡಿರಲಾಗುತ್ತದೆ. ಈ ಎರಡೂ ಖಾದ್ಯಗಳನ್ನು ವಿವಿಧ ಪೆರಿಪೆರಿ ಸಾಸ್‌ಗಳ ಜೊತೆಗೆ ತಿನ್ನುವುದು ನಿಜಕ್ಕೂ ಮಜ. ಇನ್ನು ಮಾಂಸಾಹಾರದ ತಿನಿಸುಗಳ ವಿಚಾರಕ್ಕೆ ಬಂದರೆ ಫೈವ್ ಚಿಕನ್ ವಿಂಗ್ಸ್, 10 ಚಿಕನ್ ವಿಂಗ್ಸ್, ಚಿಕನ್ ಬಟರ್‌ಫ್ಲೈ, ಎಸ್ಪೆಟೆಡಾ ಮತ್ತು ವಿಂಗ್ ರೌಲೆಟ್ ಇಲ್ಲಿನ ಬಹಳ ಜನಪ್ರಿಯ ತಿನಿಸುಗಳು. ಈ ತಿನಿಸುಗಳನ್ನು ಪೆರಿಪೆರಿ ಸಾಸ್ ಜೊತೆಗೆ ತಿನ್ನಬಹುದು. ಡೆಸರ್ಟ್ ವಿಷಯಕ್ಕೆ ಬಂದರೆ ಫೊÅàಜನ್ ಯೋಗರ್ಟ್ ಇಲ್ಲಿನ ಜನಪ್ರಿಯ ಡೆಸರ್ಟ್ ಎಂದರೆ ತಪ್ಪಿಲ್ಲ.
ಇದು ಈ ರೆಸ್ಟೋರೆಂಟ್‌ನ ತಿಂಡಿಗಳ ವಿಶೇಷತೆಯಾದರೆ, ಈ ರೆಸ್ಟೋರೆಂಟ್‌ನ ಪರಿಸರ ಇನ್ನೊಂದು ವಿಶೇಷ. ಪ್ರಮುಖವಾಗಿ ಇಲ್ಲಿನ ಫರ್ನಿಚರ್, ಲೈಟುಗಳು ಮತ್ತು ಪೇಂಟಿಂಗ್‌ಗಳೆಲ್ಲಾ ಆಫ್ರಿಕಾದಿಂದ ಬಂದಂತವು. ಇನ್ನು ಇಲ್ಲಿನ ಸಂಗೀತ ಸಹ ನೇರವಾಗಿ ಆಫ್ರಿಕಾದಿಂದ ಪ್ರಸಾರ ಮಾಡಲಾಗುತ್ತದೆ.
ಇಷ್ಟೆಲ್ಲಾ ವಿಶೇಷತೆಗಳಿರುವ ಈ ನಂದೋಸ್‌ನ ಹೊಸದೊಂದು ಬ್ರಾಂಚ್ ಇದೀಗ ಇಂದಿರಾನಗರದಲ್ಲಿ ಪ್ರಾರಂಭವಾಗಿದೆ. ನಂದೋಸ್‌ನ ಚಿಕನ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿನ ಪೆರಿಪೆರಿ ಸಾಸ್ ಬಗ್ಗೆ ಕೇಳಿದವರು, ಒಮ್ಮೆ ಆ ರೆಸ್ಟೋರೆಂಟ್‌ಗೆ ಹೋಗಿ ಅಲ್ಲಿನ ರುಚಿ ನೋಡಿ ಬರಬಹುದು.
ಚೇತನ್ ನಾಡಿಗೇರ್