Advertisement
ಶುಕ್ರವಾರ ಬೆಂಗಳೂರಿನ ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ನಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ಎಂ.ಟಿ. ಕುಲಕರ್ಣಿ ಅವರು ನಂದಿನಿ ಸಿಹಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು. ಈ ಉತ್ಸವದಲ್ಲಿ ಮೈಸೂರು ಪಾಕ್, ನಂದಿನಿ ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಬಾದಾಮ್ ಬರ್ಫಿ, ಕ್ಯಾಶು ಬರ್ಫಿ, ಡ್ರೈಪ್ರೂರ್ಟ್ಸ್ ಬರ್ಫಿ, ಕೊಕೋನಟ್ ಬರ್ಫಿ, ಚಾಕೋಲೆಟ್ ಬರ್ಫಿ, ಕುಂದಾ, ಜಾಮೂನ್, ರಸಗುಲ್ಲಾ ಇತ್ಯಾದಿ 20ಕ್ಕೂ ಹೆಚ್ಚು ಹಾಲಿನ ಸಿಹಿ ಉತ್ಪನ್ನಗಳುದೊರೆಯಲಿವೆ. ಬಹಳಷ್ಟು ಗ್ರಾಹಕರಲ್ಲಿ ನಂದಿನಿ ಎಂದರೆ ಕೇವಲ ಹಾಲು, ಮೊಸರು ಮಾತ್ರ ಎಂಬ ಭಾವನೆಯಿದೆ. ಅದನ್ನು ಈ ಉತ್ಸವ ಆಯೋಜಿಸುವ ಮೂಲಕ ಹೋಗಲಾಡಿಸುವ ಉದ್ದೇಶ ಹೊಂದಿದ್ದೇವೆ. ಅಲ್ಲದೆ, ಈ ಅವಧಿಯಲ್ಲಿ ಎಲ್ಲ ಸಿಹಿ ಉತ್ಪನ್ನಗಳ ಗರಿಷ್ಠ ಮಾರಾಟದ ಮೇಲೆ ಶೇ.10 ರಷ್ಟು ರಿಯಾಯಿತಿ ನೀಡಲಾಗುವುದು. ಈ ರಿಯಾಯಿತಿ ರಾಜ್ಯದ ಎಲ್ಲ ನಂದಿನಿ ಪಾರ್ಲರ್‌ಗಳು,
ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್ ಗಳಿಗೂ ಅನ್ವಯಿಸುತ್ತದೆ ಎಂದರು.