Advertisement
ರೈತರ ಹಿತ ಗಮನದಲ್ಲಿಟ್ಟುಕೊಂಡು ಹಾಲಿನ ದರ ಏರಿಕೆ ಮಾಡಲಾಗಿದೆ. ಇದನ್ನು ವಿರೋಧಿಸುತ್ತಿರುವ ಬಿಜೆಪಿಯ ರೈತ ವಿರೋಧಿ ಮನಃಸ್ಥಿತಿ ಮತ್ತೂಮ್ಮೆ ಅನಾ ವರಣಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
Related Articles
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಹಾಲಿನ ದರ ಏರಿಕೆ ಮಾಡಲಾಗಿದೆ ಎನ್ನುವ ವ್ಯಾಖ್ಯಾನವೇ ತಪ್ಪು. ಹೆಚ್ಚಾಗಿ ಉತ್ಪಾದನೆಯಾಗಿರುವ ಹಾಲನ್ನು ರೈತರಿಂದ ಕೊಳ್ಳಬೇಕೆ ಹೊರತು ಚೆಲ್ಲಲಾಗುವುದಿಲ್ಲ. ಖರೀದಿಸುವ ವರಿಗೆ ಹಾಲು ಹೆಚ್ಚಾಗಿ ದೊರೆಯುತ್ತಿದ್ದು, ಅದಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ಜನ ಹಾಲನ್ನು ಖರೀದಿಸಬೇಕು. ಹೊಟೇಲ್ ಮಾಲೀಕರು ಕಾಫಿ-ಟೀ ದರಗಳನ್ನು ಹೆಚ್ಚಿಸುವುದು ಸಲ್ಲದು. ಹಾಲಿನ ಬೆಲೆ ಏರಿದ್ದರೆ ಮಾತ್ರ ಹೆಚ್ಚಿಸಬೇಕು ಎಂದು ಹೇಳಿದರು.
ಸರ್ಕಾರದಿಂದ ಕಿವಿಗೆ ಹೂವು
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬೆಲೆ ಏರಿಕೆಯ ಪರ್ವ ನಡೆಯುತ್ತಿದೆ. ಜನರಿಗೆ ಬರೆ ಎಳೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುದ್ರಾಂಕ ಶುಲ್ಕ ಏರಿಸಲಾಗಿದೆ. ವಿದ್ಯುತ್ ರೈತರ ಜಮೀನುಗಳಿಗೆ ಹಾಕುವ ಟ್ರಾನ್ಸ್‌ಫಾರ್ಮರ್ ದರ 2,500ದಿಂದ 2.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಪೆಟ್ರೋಲ್-ಡೀಸೆಲ್ ಹೆಚ್ಚಾಗಿದೆ. ಈಗ ಹಾಲೂ ದುಬಾರಿಯಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸಿ¨ªಾರೆ ಎಂದು ತಿರುಗೇಟು ನೀಡಿದರು.
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಟ್ರ್ಯಾಕ್ಟರ್, ಟಿಲ್ಲರ್ ಬಳಸುವ ರೈತರೂ ತೊಂದರೆ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜದ ದರ ಶೇ. 40- 50ರಷ್ಟು ಹೆಚ್ಚಾಗಿದೆ. ಇಂಥ ಸಂಕಷ್ಟದ ಸಂದರ್ಭದಲ್ಲೂ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಜನ ರೊಚ್ಚಿಗೇಳುವ ಮುನ್ನ ಎಚ್ಚರವಾಗಿ:
ಸಿದ್ದರಾಮಯ್ಯನವರು ನಿದ್ರೆಯಲ್ಲಿ ಇದ್ದಂತಿದೆ. ಜನರ ಸಂಕಷ್ಟ ಅವರಿಗೆ ಕಾಣುತ್ತಿಲ್ಲ. ಜನರು ರೊಚ್ಚಿಗೇಳುವ ಮೊದಲು, ಜನರು ರಸ್ತೆಗೆ ಇಳಿಯುವ ಮುಂಚೆ ದರ ಹೆಚ್ಚಳ ವಾಪಸ್ ಪಡೆಯಬೇಕು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್ ಎಚ್ಚರಿಸಿದ್ದಾರೆ.
“ಹಾಲಿನ ದರ ಎಲ್ಲಿ ಹೆಚ್ಚಳ ಆಗಿದೆ? ಹೆಚ್ಚುವರಿ ಯಾಗಿ 50 ಎಂಎಲ್ ಹಾಲು ಕೊಡುತ್ತಿಲ್ಲವೇ? ಈಗಾಗಲೇ ಸಿಎಂ ಸ್ಪಷ್ಟನೆ ನೀಡಿದ್ದಾರೆ. ರೈತರಿಗೆ ಪ್ರೋತ್ಸಾಹಧನ ಕೊಡದಿದ್ದರೆ ಸರ್ಕಾರ ಖಂಡಿತಾ ಕ್ರಮ ತೆಗೆದುಕೊಳ್ಳುತ್ತದೆ.” – ಕೆ.ಎನ್. ರಾಜಣ್ಣ, ಸಹಕಾರ ಸಚಿವ
“ಬಿಜೆಪಿ ಅವಧಿಯಲ್ಲಿ ಯಾವ ದರ ಎಷ್ಟಿತ್ತು ಎಂಬುದು ಎಲ್ಲ ರಿಗೂ ಗೊತ್ತಿರುವ ಸಂಗತಿ. ರೈತರ ಮತ್ತು ಜನರ ಅನುಕೂಲಕ್ಕಾಗಿ ಹಾಲಿನ ದರ ಪರಿಷ್ಕರಣೆ ಮಾಡಲಾಗಿದೆ. ನಾವು ಬಿಜೆಪಿ ಯವರಂತೆ ಬೇಕಾಬಿಟ್ಟಿ ಏರಿಕೆ ಮಾಡಿಲ್ಲ.” – ಬಸವರಾಜ ಶಿವಗಂಗಾ, ಚನ್ನಗಿರಿ ಶಾಸಕ
“ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಕಳೆದ 10 ತಿಂಗಳಿನಿಂದ 1 ಸಾವಿರ ಕೋಟಿ ರೂ. ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದೆ. ಇನ್ನೊಂದೆಡೆ ಹಾಲಿನ ದರ 2 ರೂ. ಏರಿಸಿ ಜನರ ಜೇಬಿಗೆ ಕೈ ಹಾಕಿದೆ.” – ಎಂ.ಜಿ. ಮಹೇಶ್, ರಾಜ್ಯ ಬಿಜೆಪಿ ವಕ್ತಾರ
“ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಎಲ್ಲ ದರಗಳು ಶೇ.5 ರಿಂದ 10 ಏರಿಕೆ ಆಗುವುದು ಸಹಜ. ಅದರಂತೆ ಹಾಲಿನ ದರವೂ ಏರಿಕೆಯಾಗಿದೆ. ಬೆಲೆ ಏರಿಕೆ ಬಗ್ಗೆ ಮಾತನಾಡುವ ಬಿಜೆಪಿಗರ ಅವ ಧಿಯಲ್ಲಿ ಮಾಡಿಲ್ವಾ?.” –ಚಲುವರಾಯಸ್ವಾಮಿ, ಕೃಷಿ ಸಚಿವ