ಬೆಂಗಳೂರು: ಅಮುಲ್ ಹಾಲಿನ ಕುರಿತಾಗಿ ವಿವಾದದ ಬಳಿಕ ಇದೀಗ ನಂದಿನಿ ಹಾಲಿನ ಕುರಿತು ಕರ್ನಾಟಕ ಮತ್ತು ಕೇರಳದ ನಡುವೆ ಸಮರ ಆರಂಭವಾಗಿದೆ.
ಎಡ ಪಕ್ಷಗಳ ಆಡಳಿತವಿರುವ ಕೇರಳದ ಹಾಲು ಒಕ್ಕೂಟವು ಕರ್ನಾಟಕಕ್ಕೆ ಪತ್ರ ಬರೆದಿದ್ದು, ಕೇರಳದಲ್ಲಿ ನಂದಿನಿಯ ಮಾರಾಟವನ್ನು ಹೆಚ್ಚಿಸುವ ಯೋಜನೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ. ಕೇರಳ ತನ್ನ ಹೋಮ್ ಬ್ರಾಂಡ್ ಮಿಲ್ಮಾವನ್ನು ರಕ್ಷಿಸುವ ಪ್ರಯತ್ನದಲ್ಲಿ ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್‌ನ ಮಧ್ಯಸ್ಥಿಕೆಯನ್ನು ಸಹ ಕೋರಿದೆ.
ಕರ್ನಾಟಕದ ನಂದಿನಿ ವಿಸ್ತರಣೆ ಯೋಜನೆಗಳ ಅಡಿ ಮಲಪ್ಪುರಂ ಮತ್ತು ಕೊಚ್ಚಿ ಸೇರಿದಂತೆ ಕೇರಳದಲ್ಲಿ ಹಲವಾರು ಮಳಿಗೆಗಳನ್ನು ತೆರೆದಿದ್ದು, ಕೇರಳದಲ್ಲಿ ಮಿಲ್ಮಾ ಸ್ವಲ್ಪ ಅಗ್ಗವಾಗಿದೆ, ನಂದಿನಿ ಪ್ರತಿ ಲೀಟರ್‌ಗೆ ಒಂದೆರಡು ರೂಪಾಯಿ ಹೆಚ್ಚು ದರವಿದೆ.
ಕೇರಳದಲ್ಲಿ ನಂದಿನಿ ವಿಸ್ತರಣೆ ಯೋಜನೆ ಸಹಕಾರಿ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾನು ಮೊದಲು ಡಿಸೆಂಬರ್‌ನಲ್ಲಿ ಕರ್ನಾಟಕ ಹಾಲು ಒಕ್ಕೂಟಕ್ಕೆ ಪತ್ರ ಬರೆಡಿದ್ದು, ನಮ್ಮಲ್ಲಿ ಕೊರತೆ ಎದುರಾದಾಗಲೆಲ್ಲಾ ನಂದಿನಿ ಹಾಲನ್ನು ಖರೀದಿಸಿದ್ದೇವೆ. ನಾವು ನಿಮ್ಮ ದೊಡ್ಡ ಗ್ರಾಹಕರಲ್ಲಿ ಒಬ್ಬರು, ನೀವು ನಮ್ಮನ್ನು ಅಸಮಾಧಾನಗೊಳಿಸಬಾರದು. ವಿಸ್ತರಣೆ ಯೋಜನೆ ಸರಿಯಲ್ಲ, ಅನೈತಿಕ ಎಂದು ನಾನು ಬರೆದಿದ್ದೇನೆ. ದುರದೃಷ್ಟವಶಾತ್, ಅವರ ಕಡೆಯಿಂದ ಯಾವುದೇ ಉತ್ತರ ಅಥವಾ ಕ್ರಮವಿಲ್ಲ” ಎಂದು ಹೇಳಿದ್ದಾರೆ.