Advertisement

Nandikoor ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಮಾ. 14ರಂದು ಸ್ವರ್ಣ ಪಲ್ಲಕ್ಕಿ ಸಮರ್ಪಣೆ

11:28 PM Feb 06, 2024 | Team Udayavani |

ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ “ನಂದ್ಯೂರಮ್ಮ’ನಿಗೆ ಸ್ವರ್ಣ ಪಾಲಕಿ ಸಮರ್ಪಣೆ ಮಾ. 14ರಂದು ಪಲಿ ಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಂದ ನೆರವೇರಲಿದೆ.

Advertisement

ಸುಮಾರು 2 ಕೆಜಿ ಚಿನ್ನದ ಲೇಪನವಿರುವಪಾಲಕಿಯ ನಿರ್ಮಾಣ ಭರದಿಂದ ಸಾಗುತ್ತಿದ್ದು, 1.5 ಕೋಟಿ ರೂ. ವೆಚ್ಚದಲ್ಲಿ ಭಕ್ತರ ದೇಣಿಗೆಯೊಂದಿಗೆ ಇದನ್ನು ತಮಿಳುನಾಡಿನ ಶಿಲ್ಪಿಗಳು ದೇವಸ್ಥಾನದಲ್ಲಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ತೇಗದ ಮರದಿಂದ ಪಲ್ಲಕ್ಕಿಯನ್ನು ನಿರ್ಮಿಸಿ ಕುಸರಿ ಕೆಲಸದ ಸಹಿತ ತಾಮ್ರದ ತಗಡನ್ನೂ ಹೊದೆಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್‌. ಮಧ್ವರಾಯ ಭಟ್‌ ತಿಳಿಸಿದ್ದಾರೆ.

ಶ್ರೀ ನಂದಿಕೂರು ದುರ್ಗೆಯ ಸನ್ನಿಧಾನವು 1,200 ವರ್ಷಗಳಿಗೂ ಅಧಿಕ ಪ್ರಾಚೀನತೆ ಹೊಂದಿದ್ದು, ಹೆಮ್ಮಕ್ಕಳ ವಿವಾಹ ಭಾಗ್ಯ ಪ್ರಾಪ್ತಿಗಾಗಿ ನಡೆಯುವ ಸ್ವಯಂವರ ಪೂಜೆಯು ಇಲ್ಲಿನ ಅತೀ ವಿಶಿಷ್ಟ ಸೇವೆಗಳಲ್ಲಿ ಒಂದಾಗಿದೆ. ಅವಿಭಜಿತ ದ.ಕ. ಜಿಲೆಯಲ್ಲೇ ಮೊದಲಿಗೆ ಸ್ವರ್ಣ ಧ್ವಜಸ್ತಂಭವನ್ನು ಹೊಂದಿದ ಕ್ಷೇತ್ರವಿದು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next