Advertisement
ಅರೇ, ಇದರಲ್ಲೇ ವಿಶೇಷ ಅಂತ ಕೇಳಬೇಡಿ. ನಂದಿ ಬೆಟ್ಟ ಋತುಮಾನಕ್ಕೆ ತಕ್ಕಂತೆ ಬದಲಾಗುತ್ತದೆ. ಹೊಸ, ಹೊಸ ಸೀರೆ ಉಡುವ ತರುಣಿಯಂತೆ ಕಾಣುತ್ತದೆ. ಈಗಂತೂ ನಂದಿ ನೋಡಲು ಇದೇ ಸರಿಯಾದ ಸಮಯ. ಬೆಟ್ಟದ ಮೇಲೆ ನಿಂತು ಒಮ್ಮೆ ಎರಡೂ ಕೈಯನ್ನು ಅಗಲಿಸಿ ನೋಡಿ. ಆಕಾಶದ ಮೋಡಗನ್ನು ನಿಮ್ಮನ್ನು ಮುತ್ತಿಕೊಂಡು ಹೋಗುತ್ತದೆ. ಕಣ್ಣ ದಾಟಿಸಿದಷ್ಟೂ ವಿಶಾಲವಾದ ಮೋಡಸಮುದ್ರ. ಆಗಾಗ ಅಲೆಯಂತೆ ಅಪ್ಪಳಿಸುವ ಗಾಳಿ. ನೀವು ತೀರ ಅದೃಷ್ಟವಂತರಾದರೆ ಮೋಡಗಳನ್ನು ಹಿಡಿದು ಕೆನ್ನೆಗೆ ಮೆತ್ತಿಕೊಳ್ಳಬಹುದು. ಅಷ್ಟೊಂದು ಮೋಡದಾಟ.
Related Articles
Advertisement
ಬೆಟ್ಟದ ಮೇಲೆ ತೋಟಗಾರಿಕೆ ಇಲಾಖೆಯ ಗೆಸ್ಟ್‌ಹೌಸ್ ಇದೆ. ರಾತ್ರಿ ತಂಗುವ ವ್ಯವಸ್ಥೆಯ ಕೂಡ ಇದೆ. ತಿಂಡಿ-ಊಟಕ್ಕೆ ಯಾವುದೇ ಚಿಂತೆ ಇಲ್ಲ. ಬೆಟ್ಟ ಹತ್ತಿದರೆ ಇಲ್ಲೊಂದು ವಿಶಿಷ್ಟವಾದ ಪ್ರಪಂಚವೇ ತೆರೆದುಕೊಳ್ಳುತ್ತದೆ.
ನಂದಿ ಬೆಟ್ಟದ ಮೇಲೆ ಟಿಪ್ಪು ಡ್ರಾಪ್ ಇದೆ. ಈಗಂತೂ ರೂಪ್‌ವೇ ನಿರ್ಮಾಣ ಮಾಡಿರುವುದರಿಂದ ಬೆಟ್ಟದ ಮೇಲಿಂದ ಜಗತ್ತನ್ನು ನೋಡಬಹುದು. ಸಂಜೆ ಮತ್ತು ಬೆಳಗ್ಗೆಯ ಹೊತ್ತು ಇಲ್ಲಿ ಸುರಿಯುವ ಮಂಜನ್ನು ಕಣ್ತುಂಬಿಕೊಳ್ಳುವುದೇ ಸ್ವರ್ಗ ಸುಖ.
ತಲುಪುವ ಮಾರ್ಗಬೆಂಗಳೂರಿನಿಂದ ನಂದಿ ಬೆಟ್ಟ ಕೇವಲ ಒಂದೂವರೆ ಗಂಟೆ ಪ್ರಯಾಣ. ಸುಮಾರು 60ಕಿ.ಮೀ ದೂರದಲ್ಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 30ಕಿ.ಮೀ ಅಂತರ. ಬಸ್ಸುಗಳು ಬೇಕಾದಷ್ಟಿದೆ. ಸ್ವಂತ ವಾಹನವಿದ್ದರೆ ಅನುಕೂಲ. ಇಲ್ಲಿ ವಸತಿ, ಊಟ ಸೌಕರ್ಯವಿದೆಯಾದರೂ ಮೊದಲೇ ಬುಕ್ ಮಾಡಿ ಹೋಗಬೇಕು. ನಂದಿಯ ಹೊರತಾಗಿ ನಂದಿ ಕೆಳಗೆ ಪುರಾತನ ಭೋಗ ನಂದೀಶ್ವರ ದೇವಾಲಯವಿದೆ. ದಾರಿಯ ಮಧ್ಯೆ ದೇವನಹಳ್ಳಿ, ಅಲ್ಲಿರುವ ಟಿಪ್ಪುಸುಲ್ತಾನರ ಕೋಟೆ, ಟಿಪ್ಪು ಹುಟ್ಟಿದ ಸ್ಥಳವನ್ನು ನೋಡಬಹುದು.