ಬೆಂಗಳೂರಿನ ಪ್ರಕೃತಿ ರಮ್ಯ ತಾಣ ಈಗ ವಾರಾಂತ್ಯದ ಸೈಕಲ್ ವಿಹಾರ ತಾಣವಾಗಲಿದೆ. ಜುಲೈ 1ರಿಂದ ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರಗಳಂದು, ಬೆಳಿಗ್ಗೆ 5 ರಿಂದ 9 ರವರೆಗೆ ನಂದಿ ಬೆಟ್ಟಕ್ಕೆ ಸೈಕಲ್ ಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಬೇರೆ ಯಾವುದೇ ಪೆಟ್ರೋಲ… ಮತ್ತು ಡೀಸೆಲ… ವಾಹನಗಳಿಗೆ ಸಂಚಾರದ ಅವಕಾಶ ಇರುವುದಿಲ್ಲ. ಇದರಿಂದ ಸೈಕಲ್ ಸವಾರರು ನೆಮ್ಮದಿಯಾಗಿ, ಯಾವುದೇ ಭಯ ಆತಂಕ ಇಲ್ಲದೇ ನಂದಿ ಬೆಟ್ಟಕ್ಕೆ ವಿಹಾರ ಹೋಗಬಹುದಾಗಿದೆ.
ಜುಲೈ 1ರಂದು ನಡೆಯುವ ಸೈಕಲ್ ರೇಸ್‌ನಿಂದ ಈ ಕಾರ್ಯಕ್ರಮ ಜಾರಿಗೆ ಬರಲಿದೆ. ಅಂದು 300ಕ್ಕೂ ಹೆಚ್ಚು ಸೈಕಲ್ ಸವಾರರ ಜೊತೆ ಚಿಕ್ಕಬಳ್ಳಾಪುರದ ಶಾಸಕ ಕೆ. ಸುಧಾಕರ್‌ರವರೂ ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ.
ಇದೇ ಕಾರಣಕ್ಕೆ ಬೆಂಗಳೂರಿನ ಹೊರವಲಯದಲ್ಲಿರುವ ನಂದಿಬೆಟ್ಟಕ್ಕೆ ಸೈಕಲ್ ಸವಾರಿ ಮಾಡುವವರು ಮತ್ತು ಚಾರಣ ಮಾಡುವ ಉತ್ಸಾಹಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದರಿಂದ ವಾಹನಗಳು ಕೆಳಗಿಳಿಯುವಾಗ, ಚಾರಣಿಗರು ಮತ್ತು ಸೈಕಲ್ ಸವಾರರಿಗೆ ಡಿಕ್ಕಿ ಹೊಡೆದು ಅಪಘಾತಗಳಾಗುತ್ತಿರುವ ಸಂಖ್ಯೆಯೂ ಜಾಸ್ತಿಯಾಗಿದೆ. ಸೈಕಲ್ ಸವಾರು ಮತ್ತು ಪರಿಸರ ಪ್ರೇಮಿಗಳು ಆತಂಕಕ್ಕೀಡಾಗದೇ ನಂದಿ ಬೆಟ್ಟಕ್ಕೆ ಸುಲಭವಾಗಿ ಬರುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ.
ವಾಹನ ನಿಷೇಧ ಮಾಡಿರುವುದರಿಂದ ಸೈಕಲ್ ಸವಾರರು ಮತ್ತು ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಂದಿ ಬೆಟ್ಟಕ್ಕೆ ಬರಬಹುದು. ಇಲ್ಲಿ ಚಾರಣ ಮಾಡಿ, ಸೈಕಲ… ಸವಾರಿ ಮಾಡಿ ಪ್ರಕೃತಿ ಸೌಂದರ್ಯವನ್ನು, ಆಹ್ಲಾದಕರ ವಾತಾವರಣವನ್ನು ಸವಿಯಬಹುದು.
ಇನ್ನೇಕೆ ತಡ ಹೊಡೆಯಿರಿ ಸೈಕಲ್!