Advertisement

Nandi Films Awards: ಕಲರ್‌ಫುಲ್‌ ಕಾರ್ಯಕ್ರಮದಲ್ಲಿ ನಂದಿ ಫಿಲಂಸ್‌ ಪ್ರಶಸ್ತಿ ಪ್ರದಾನ

10:47 AM Dec 11, 2023 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಆರಂಭಿಸಿರುವ “ನಂದಿ ಚಲನಚಿತ್ರ ಪ್ರಶಸ್ತಿ’ ಪ್ರದಾನ ಸಮಾರಂಭ ಇತ್ತೀಚೆಗೆ ನೆರವೇರಿತು.ಒರಿಯನ್‌ ಮಾಲ್‌ನಲ್ಲಿರುವ “ಪಿವಿಆರ್‌ ಸಿನಿ ಮಾಸ್‌’ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2023ನೇ ಸಾಲಿನ ಮೊದಲ ಆವೃತ್ತಿಯ ಪ್ರಶಸ್ತಿಯನ್ನು ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರಿಗೆ ನೀಡಲಾಯಿತು.

Advertisement

ಮುಖ್ಯ ಅತಿಥಿಗಳಾಗಿ ಹಿರಿಯ ನಟ ಮತ್ತು ನಿರ್ದೇಶಕ ವಿ.ರವಿಚಂದ್ರನ್‌, ಶ್ರೀನಾಥ್‌, ಉಮೇಶ್‌, ರಿಷಬ್‌ಶೆಟ್ಟಿ, ಧ್ರುವ ಸರ್ಜಾ, ಶರಣ್‌, ವಸಿಷ್ಠ ಸಿಂಹ, ನಟಿಯರಾದ ಉಮಾಶ್ರೀ, ಭವ್ಯಾ, ಪ್ರೇಮ, ಹರಿಪ್ರಿಯಾ, ಅನು ಪ್ರಭಾಕರ್‌, ವಿಜಯ ಲಕ್ಷ್ಮೀ, ನಟ ರಾದ ವಿನೋದರಾಜ್‌, ಸುನೀಲ್‌, ಹರೀಶ್‌ ರಾಜ್‌, ಅನಿರುದ್ಧ, ಅಜನೀಶ್‌ ಲೋಕ ನಾಥ್‌, ಫಿಲಂ ಚೇಂಬರ್‌ ಅಧ್ಯಕ್ಷ ಎನ್‌.ಎಂ. ಸುರೇಶ್‌, ಮಾಜಿ ಅಧ್ಯಕ್ಷರಾದ ಎಸ್‌.ಎ.ಚಿನ್ನೇಗೌಡ, ಥಾಮಸ್‌ ಡಿಸೋಜಾ, ಕೆ.ವಿ. ಚಂದ್ರಶೇಖರ್‌, ನಿರ್ದೇಶಕ ಸುನೀಲ್‌ಕುಮಾರ್‌ ದೇಸಾಯಿ, ಸಾಯಿ ಪ್ರಕಾಶ್‌, ಭಾರ್ಗವ, ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನಟ ರವಿಚಂದ್ರನ್‌, “ಮೊದಲ ಬಾರಿಗೆ ಕನ್ನಡದಲ್ಲಿ “ನಂದಿ ಪ್ರಶಸ್ತಿ’ ನೀಡುತ್ತಿರುವುದು ಬಹಳ ಖುಷಿ ತಂದಿದೆ. ಸಿನಿಮಾರಂಗದಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ ನೀಡುತ್ತಿರುವ ಈ ಪ್ರಶಸ್ತಿ, ಕೆಲಸ ಮಾಡಲು ಇನ್ನಷ್ಟು ಉತ್ಸಾಹ ನೀಡಲಿ’ ಎಂದು ಹಾರೈಸಿದರು.

“ನಂದಿ ಫಿಲಂಸ್‌ ಅವಾರ್ಡ್ಸ್‌’ನ ಸ್ಥಾಪಕರಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಭಾ.ಮ.ಹರೀಶ್‌, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್‌, ಅನಿತಾ ರೆಡ್ಡಿ ಹಾಗೂ ಪ್ರಶಸ್ತಿ ಸಂಸ್ಥಾಪಕ ನಿರ್ದೇಶಕರಾದ ಭಾ.ಮ.ಗಿರೀಶ್‌, ಹರ್ಷಿತಾ, ನಂದಿತಾ, ಆಶೋಕ್‌ ಮತ್ತಿತರರು ಹಾಜರಿದ್ದರು.

ಬಾರಿ ನಂದಿ ಪ್ರಶಸ್ತಿ ಪಡೆದ ಪ್ರಮುಖರು :

Advertisement

ವಿಜಯಾನಂದ – ಬೆಸ್ಟ್‌ ಬಯೋಪಿಕ್‌ ಅವಾರ್ಡ್‌ ಚಿತ್ರ

ಲೀಲಾವತಿ – ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್‌

ಶ್ರೀನಾಥ್‌ – ಜೀವಮಾನ ಸಾಧನೆ ಪ್ರಶಸ್ತಿ

ಭಾರತಿ ವಿಷ್ಣುವರ್ಧನ್‌ – ಜೀವಮಾನ ಸಾಧನೆ ಪ್ರಶಸ್ತಿ

ಗಂಧದಗುಡಿ – ಅತ್ಯತ್ತಮ ಡಾಕ್ಯುಮೆಂಟರಿ ಪ್ರಶಸ್ತಿ

ರಿಷಬ್‌ ಶೆಟ್ಟಿ – ಅತ್ಯುತ್ತಮ ನಟ ಮತ್ತು ನಿರ್ದೇಶಕ

ಸಪ್ತಮಿ ಗೌಡ – ಅತ್ಯುತ್ತಮ ನಟಿ

ಡಾಲಿ ಧನಂಜಯ್‌ – ಅತ್ಯುತ್ತಮ ಖಳನಟ

777 ಚಾರ್ಲಿ – ಅತ್ಯುತ್ತಮ ಚಿತ್ರ

ವಿಕ್ರಮ್‌ ರವಿಚಂದ್ರನ್‌ – ಬೆಸ್ಟ್‌ ಡೇಬ್ಯುಟ್‌ ಆ್ಯಕ್ಟರ್‌

ರೀಷ್ಮಾ ನಾಣಯ್ಯ – ಬೆಸ್ಟ್‌ ಡೇಬ್ಯುಟ್‌ ಆಕ್ಟ್ರೆಸ್

ರಂಗಾಯಣ ರಘು – ಬೆಸ್ಟ್‌ ಕಮಿಡಿಯನ್‌

ಹೇಮಾದತ್‌ – ಬೆಸ್ಟ್‌ ಕಾಮಿಕ್‌ (ಆಕ್ಟ್ರೆಸ್)

ಲೂಸ್‌ ಮಾದ ಯೋಗಿ – ಬೆಸ್ಟ್‌ ಆಕ್ಟರ್‌ ಸಪೋರ್ಟಿಂಗ್‌ ರೋಲ್‌

ಮಾಸ್ತಿ -ಅತ್ಯುತ್ತಮ ಸಂಭಾಷಣೆಕಾರ

ಹರಿಪ್ರಿಯಾ – ಬೆಸ್ಟ್‌ ಕ್ರಿಟಿಕ್ಸ್‌ ಆಕ್ಟರ್ಸ್‌

ಅನು ಪ್ರಭಾಕರ್‌ – ಬೆಸ್ಟ್‌ ಕ್ರಿಟಿಕ್ಸ್‌ ಆಕ್ಟರ್ಸ್‌

 

Advertisement

Udayavani is now on Telegram. Click here to join our channel and stay updated with the latest news.

Next