Advertisement

ಪುತ್ತಿಗೆ ಶ್ರೀಗಳಿಂದ ನಂದಿ ಕೊಡುಗೆ

09:58 AM Sep 07, 2017 | |

ಕಾಪು: ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ
ಸೇವೆಗಾಗಿ ಆಂಧ್ರಪ್ರದೇಶದಿಂದ ತರಿಸಿರುವ ನಂದಿ “ಶಿವೇಂದ್ರ’ನನ್ನು ಬುಧವಾರ ಸಮರ್ಪಿಸಲಾಯಿತು.

Advertisement

ಈ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳು ಮಾತನಾಡಿ, ಎಲ್ಲೂರು ದೇವಸ್ಥಾನದ ನಂದಿಕೇಶ್ವರನಿಗೂ ಉಡುಪಿ ಶ್ರೀಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಸುಮಾರು 500 ವರ್ಷಗಳ ಹಿಂದೆ ಸೋದೆ ವಾದಿರಾಜ ಶ್ರೀಗಳು ದೇವಸ್ಥಾನಕ್ಕೆ ಬಂದಾಗ ದೇಗುಲದ ಬಾಗಿಲು ಮುಚ್ಚಲ್ಪಟ್ಟಿದ್ದು, ಬಳಿಕ ಅವರು ರುದ್ರ ದೇವನನ್ನು ಪ್ರಾರ್ಥಿಸಿದಾಗ ನಂದಿ ಕೇಶ್ವರ ಬಂದು ಬಾಗಿಲು ತೆರೆದು ದೇವರ ದರ್ಶನ ಮಾಡಿಸಿದನೆಂಬ ಐತಿಹ್ಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲೂರು ವಿಶ್ವೇಶ್ವರ ದೇವರ ಸನ್ನಿಧಿಗೆ ನಂದಿ ಸಮರ್ಪಿಸಲು ನಮಗೆ ಅವಕಾಶ ದೊರಕಿರುವುದು ನಮ್ಮ ಪಾಲಿನ ಸುಯೋಗವಾಗಿದೆ ಎಂದರು.

ಶಿವನ ದರ್ಶನವಾಗಲಿ 
ಈ ನಂದಿಗೆ ಹುಟ್ಟಿದಾಗಲೇ ಶಿವ ಎಂದು ನಾಮಕರಣ ಮಾಡಲಾಗಿತ್ತು. ದೈವ ಸಂಕಲ್ಪ ಎಂಬಂತೆ ಶಿವನೇ ವಿಶ್ವನಾಥನ ಸನ್ನಿಧಿಗೆ ಸೇವೆಗಾಗಿ ಬಂದಿದ್ದು, ಶಿಷ್ಯಂದಿರಾದ ಚೆನ್ನೈಯ ರಾಜಭವನ್‌ ಹೊಟೇಲ್‌ ಮಾಲಕ ಬಾಲಕೃಷ್ಣ ರಾವ್‌ ಅವರ ಮೂಲಕ, ಸಂತೋಷ್‌ ಪಿ. ಶೆಟ್ಟಿ ತೆಂಕರಗುತ್ತು ಅವರ ಮುತುವರ್ಜಿಯಲ್ಲಿ ಇಲ್ಲಿಗೆ ತಂದು ಸಮರ್ಪಿಸಲಾಗಿದೆ. ನಂದಿ ಕೇಶ್ವರನ ಮೂಲಕ  ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಶಿವನ ದರ್ಶನ ವಾಗಲಿ ಎಂದು ಹಾರೈಸಿದರು.

ಚಿತ್ರಾಪುರ ಮಠದ ಕಿರಿಯ ಯತಿ ಗಳಾದ ಶ್ರೀ ವಿದ್ಯೆದ್ರತೀರ್ಥ ಸ್ವಾಮೀಜಿ, ಶಾಸಕ ವಿನಯಕುಮಾರ್‌ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ರಾಜ್ಯ  ಧಾರ್ಮಿಕ ಪರಿಷತ್‌ ಸದಸ್ಯ ವೇ| ಮೂ| ಕೇಂಜ ಶ್ರೀಧರ ತಂತ್ರಿ, ಪವಿತ್ರಪಾಣಿ ಕೆ.ಎಲ್‌. ಕುಂಡಂತಾಯ, ಅದಾನಿ- ಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ, ಗಣ್ಯರಾದ ಡಾ| ದೇವಿಪ್ರಸಾದ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಗುರ್ಮೆ, ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಯಶವಂತ್‌ ಶೆಟ್ಟಿ, ಸಂತೋಷ್‌ ಪಿ. ಶೆಟ್ಟಿ ತೆಂಕರಗುತ್ತು, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ಕೇಶವ ಮೊಲಿ, ವಸಂತಿ ಮಧ್ವರಾಜ್‌, ಜಯಂತ ಭಟ್‌, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ತಂತ್ರಿಗಳಾದ ಬೆಟ್ಟಿಗೆ ವೆಂಕಟರಾಜ ತಂತ್ರಿ, ಅರ್ಚಕ ವೆಂಕಟೇಶ್‌ ಭಟ್‌, ಆಡಳಿತ ಮಂಡಳಿ ಸದಸ್ಯರಾದ ಶೇಖರ್‌ ಡಿ. ಶೆಟ್ಟಿ, ನಿರಂಜನ್‌ ಶೆಟ್ಟಿ, ನರಸಿಂಹ ಜೆನ್ನಿ, ಜಯಲಕ್ಷ್ಮೀ ಆಳ್ವ, ಬಾಲಕೃಷ್ಣ ಪಣಿಯೂರು, ಸೋಮನಾಥ ಪೂಜಾರಿ, ವಿಜಯಲಕ್ಷ್ಮೀ ದೇವಾಡಿಗ, ಪ್ರಬಂಧಕ ರಾಘವೇಂದ್ರ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next