Advertisement

 ನಂದನವಾಯಿತು ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

10:16 PM Jan 26, 2021 | Team Udayavani |

ಉಪ್ಪುಂದ: ಎರಡು ವರ್ಷಗಳ ಹಿಂದೆ ಮಳೆಯಿಂದಾಗಿ ಧರಾಶಾಯಿಯಾಗಿದ್ದ ಕೆರ್ಗಾಲು ಗ್ರಾ.ಪಂ. ವ್ಯಾಪ್ತಿಯ ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೀಗ  ಹೊಸ ಕಟ್ಟಡದ ಭಾಗ್ಯ ದೊರೆತಿದೆ.

Advertisement

ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಬೇಕಾದ ಸ್ಥಿತಿಯ ಬಗ್ಗೆ ಉದಯವಾಣಿ ನಿರಂತರ ವರದಿ ಪ್ರಕಟಿಸಿದ್ದು, ಅದೀಗ ಫ‌ಲಕೊಟ್ಟಿದೆ.   ಶಾಲೆಗೆ ಹಾನಿಯಾಗಿದ್ದರಿಂದ ಭೇಟಿ ನೀಡಿ 1ರಿಂದ 3ನೇ ತರಗತಿಯ ಎಲ್ಲ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಶಿಕ್ಷಣ, 3ಮತ್ತು 4ನೇ ತರಗತಿಯ ವಿದ್ಯಾರ್ಥಿಗಳಿಗೆ ಅಡುಗೆಕೋಣೆಯಲ್ಲಿ ಪಾಠ ಮಾಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ವರದಿಯಿಂದಾಗಿ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಹಾಗೂ ನಾಗರಿಕರು ಎಚ್ಚೆತ್ತು ಶಾಲೆಯನ್ನು ಸುವ್ಯವಸ್ಥೆಗೊಳಿಸುತ್ತ ಗಮನ ಹರಿಸಿದ್ದಾರೆ. ಈಗ ಶಾಲೆಗೆ ಸಾಕಷ್ಟು ಅನುದಾನ ಲಭ್ಯವಾಗಿದ್ದು, ಅಗತ್ಯ ಸೌಕರ್ಯ ಹೊಂದುವಂತಾಗಿದೆ.

ದೊರೆತ ಅನುದಾನಗಳು :

ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರ ಶಿಫಾರಸ್ಸಿನೊಂದಿಗೆ 2 ಕಟ್ಟಡಕ್ಕೆ 21 ಲಕ್ಷ ರೂ. ಅನುದಾನ ದೊರಕಿದೆ. ಪಿಡ್ಲಬ್ಯುಡಿ ಇಲಾಖೆ ವತಿಯಿಂದ 11ಲಕ್ಷ ರೂ., ಮಲೆನಾಡು ಅಭಿವೃದ್ಧಿ ನಿಧಿಯಿಂದ 10 ಲಕ್ಷ ರೂ.ಗಳ ಕೊಠಡಿ, ಸಚಿವ ಕೋಟ ಶೀÅನಿವಾಸ  ಪೂಜಾರಿಯವರ ಪ್ರಕೃತಿ ವಿಕೋಪ ಅನುದಾನದಡಿ 2.5ಲಕ್ಷ ರೂ. ಜಿ.ಪಂ. ಹಾಗೂ ಗ್ರಾ.ಪಂ. ವತಿಯಿಂದ 2.5 ಲಕ್ಷ  ರೂ. ಅನುದಾನದಲ್ಲಿ ಶೌಚಾಲಯ,  ತಾ.ಪಂ.ನ 1 ಲಕ್ಷ ರೂ. ಅನುದಾನದಲ್ಲಿ ಇಂಟರ್‌ಲಾಕ್‌, ನರೇಗಾ ಯೋಜನೆಯಡಿ  3 ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ನಿರ್ಮಾಣಗೊಂಡಿದೆ. ಉಪ್ಪುಂದ ಮೂಕಾಂಬಿಕಾ ಸ.ಸಂಘದಿಂದ ಕಂಪ್ಯೂಟರ್‌, ಕಂಬದಕೋಣೆ ರೈ.ಸೇ.ಸ.ಸಂಘ ಉಪ್ಪುಂದದಿಂದ ಪೀಠೊಪಕರಣಗಳು, ರಮಾನಂದ ಪೈ ಅವರಿಂದ ಕಾಂಪೌಂಡ್‌ ಗೇಟ್‌, ಹಳೆ ವಿದ್ಯಾರ್ಥಿಗಳೂ ಪೂರಕವಾಗಿ ಸ್ಪಂದಿಸಿದ್ದಾರೆ.

1914ರಲ್ಲಿ ಸ್ಥಾಪನೆಯಾದ ಈ ಶಾಲೆ ಶತಮಾನ ಪೂರೈಸಿದ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ಎಲ್‌ಕೆಜಿಯಿಂದ 5ನೇ ತರಗತಿಯ ವರೆಗೆ ಶಿಕ್ಷಣ ನೀಡಲಾಗುತ್ತಿದೆ. 25ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಸುರಿದ ಮಳೆಯಿಂದಾಗಿ ಕಟ್ಟಡ ಕುಸಿದು ಬಿದ್ದು ಮೂರು ಕೊಠಡಿಗಳು ನೆಲಸಮವಾಗಿತ್ತು. ರಾತ್ರಿ ಹೊತ್ತಿನಲ್ಲಿ ಕಟ್ಟಡ ಕುಸಿದಿದ್ದರಿಂದ ಅನಾಹುತ ತಪ್ಪಿತ್ತು.

Advertisement

ಉದಯವಾಣಿಯಲ್ಲಿ ವರದಿ ಪ್ರಕಟಗೊಂಡ ಬಳಿಕ ವಿದ್ಯಾರ್ಥಿಗಳ ಸಮಸ್ಯೆಗಳ ಗಂಭೀರತೆಯನ್ನು ಅರಿತ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಸಮಸ್ಯೆಗೆ ಶೀಘ್ರ ಸ್ಪಂಧಿಸಿ, ಅನುದಾನ ಒದಗಿಸಿದ್ದಾರೆ. ಪತ್ರಿಕೆಯಲ್ಲಿ ವರದಿ ಬಂದ ಮೇಲೆಯೆ  ಶಾಲೆಯು ಎಲ್ಲ ಮೂಲ ಸೌಕರ್ಯಗಳನ್ನು ಪಡೆಯುಂತಾಗಿದೆ ಅಲ್ಲದೆ ಇಷ್ಟು ಬೇಗ ಕಟ್ಟಡ ಉದ್ಘಾಟನೆಗೊಳ್ಳುವಂತಾಗಿದೆ ಉದಯವಾಣಿಗೆ ನಮ್ಮ ಕೃತಜತೆಗಳು ಶಾರದ, ಎಸ್‌ಡಿಎಂಸಿ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next