Advertisement

ಆಧಾರ್‌ ಮಾದರಿಯಲ್ಲೇ ಕೋವಿಡ್ ಲಸಿಕೆ ಹಂಚಿಕೆ ಮಾಡುವುದು ಸೂಕ್ತ : ನಂದನ್‌ ನಿಲೇಕಣಿ ಅಭಿಪ್ರಾಯ

09:31 PM Nov 14, 2020 | sudhir |

ನವದೆಹಲಿ: ಕೊರೊನಾ ಲಸಿಕೆ ಪೂರೈಕೆಗೆ “ಆಧಾರ್‌ ಮಾದರಿ’ಯ ಹಂಚಿಕೆ ವ್ಯವಸ್ಥೆ ಅತ್ಯಂತ ಸೂಕ್ತ ಎಂದು ಇನ್ಫೋಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. “ಡಿಜಿಟಲ್‌ ಸಂಯೋಜನಾ ವೇದಿಕೆ ನೆರವಿಲ್ಲದೆ ಲಸಿಕೆ ಸರಬರಾಜು ಕಷ್ಟಸಾಧ್ಯ’ ಎಂದು “ದಿ ಎಕನಾಮಿಕ್‌ ಟೈಮ್ಸ್‌’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Advertisement

“ದೇಶದ 130 ಕೋಟಿ ಮಂದಿಗೂ ವ್ಯಾಕ್ಸಿನ್‌ ಪೂರೈಸುವ ಅನಿವಾರ್ಯತೆಯಂತೂ ಇದೆ. ಪ್ರತಿಯೊಬ್ಬರಿಗೂ 2 ಡೋಸ್‌ ಲಸಿಕೆಯೆಂದರೆ, ಒಟ್ಟು 260 ಕೋಟಿ ಡೋಸ್‌ಗಳ ಹಂಚಿಕೆಗೆ ನಾವು ಸಿದ್ಧರಾಗಬೇಕು. ಇದು ಅನಿವಾರ್ಯ ಮತ್ತು ಅತ್ಯಾಧುನಿಕ ಟಾಸ್ಕ್ ಆಗಿದ್ದು, ಡಿಜಿಟಲ್‌ ಸಂಯೋಜನಾ ವ್ಯವಸ್ಥೆಯಿಲ್ಲದೆ ನಿರ್ವಹಿಸುವುದು ಕಷ್ಟಸಾಧ್ಯ’ ಎಂದಿದ್ದಾರೆ.

ಟ್ರ್ಯಾಕಿಂಗ್‌ ಸುಲಭ: “ಆಧಾರ್‌ಗೆ 130 ಕೋಟಿ ಮಂದಿಯನ್ನು ಲಿಂಕ್‌ ಮಾಡಲು ನಮಗೆ 6 ವರ್ಷಗಳು ಬೇಕಾದವು. ದೇಶದ ಅಷ್ಟೂ ಮಂದಿಗೆ ಚುಚ್ಚುಮದ್ದು ನೀಡಿದಾಗ, ಯಾವ ಲಸಿಕೆಗೆ ಕೆಲಸ ಮಾಡಿದೆ? ಯಾವುದು ಕೆಲಸ ಮಾಡಿಲ್ಲ? ಯಾವುದು ಅಡ್ಡಪರಿಣಾಮ ಬೀರಿದೆ?- ಇವೆಲ್ಲವನ್ನೂ ತಕ್ಷಣವೇ ಗಮನಿಸಿ, ಪರಿಷ್ಕರಿಸಬೇಕು. ಬೃಹತ್‌ ದತ್ತಾಂಶ ಮತ್ತು ಎಐ ನೆರವಿನಿಂದ ಇದನ್ನು ಸುಲಭವಾಗಿ ಟ್ರ್ಯಾಕ್‌ ಮಾಡಬಹುದು. ಇವುಗಳ ಮಾಪನಕ್ಕೆ ಬೃಹತ್‌ ಡಿಜಿಟಲ್‌ ವ್ಯವಸ್ಥೆಯ ಅನಿವಾರ್ಯತೆ ಇದೆ. ಆಧಾರ್‌ ಮಾದರಿಯ ವ್ಯಾಕ್ಸಿನ್‌ ಸರಬರಾಜಿನಿಂದ ಖಾಸಗಿ ದತ್ತಾಂಶಗಳು ಸೋರಿಕೆ ಆಗುತ್ತವೆ ಎನ್ನುವುದರಲ್ಲಿ ಹುರುಳಿಲ್ಲ’ ಎಂದಿದ್ದಾರೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನಮ್ಮ ಅಣ್ಣ ಉಮೇಶ್ ಕತ್ತಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ : ರಮೇಶ್ ಕತ್ತಿ

3ನೇ ಹಂತದ ಪ್ರಯೋಗದಲ್ಲಿ 2 ಲಸಿಕೆ: ಹರ್ಷವರ್ಧನ್‌
ಕೊರೊನಾ ವಿರುದ್ಧ ಭಾರತ ಒಗ್ಗಟ್ಟಿನ ಹೋರಾಟ ಮುಂದುವರಿಸಿದ್ದು, ಈ ನಡುವೆ ಸ್ವದೇಶಿ ನಿರ್ಮಿತ ಲಸಿಕೆಗಳ ಪ್ರಯೋಗ ಕೂಡ ವಿವಿಧ ಹಂತಗಳನ್ನು ತಲುಪಿವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ. 8ನೇ ಬ್ರಿಕ್ಸ್‌ ಎಸ್‌ಟಿಐ ಮಂತ್ರಿವರ್ಗದ ಸಭೆಯಲ್ಲಿ ಮಾತನಾಡಿದ ಅವರು, “20 ವಿವಿಧ ಲಸಿಕೆಗಳನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 2 ಲಸಿಕೆ ಅತ್ಯಂತ ನಿರ್ಣಾಯಕ ಹಂತದಲ್ಲಿವೆ. ಐಸಿಎಂಆರ್‌- ಭಾರತ್‌ ಬಯೋಟೆಕ್‌ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೊವ್ಯಾಕ್ಸಿನ್‌ ಮತ್ತು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದ ಕೋವಿಶೀಲ್ಡ್‌ 3ನೇ ಹಂತದ ಪ್ರಯೋಗದಲ್ಲಿವೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next