Advertisement
ನಂದಗಡ ಗ್ರಾಪಂ ಕಚೇರಿ ಮತ್ತು ಆಡಳಿತ ವ್ಯವಸ್ಥೆ ನೋಡಿದರೆ ಗ್ರಾಪಂಗಳ ಬಗ್ಗೆ ಇರುವ ಕಲ್ಪನೆಯೇ ಬದಲಾಗುತ್ತದೆ. ಈ ಪಂಚಾಯಿತಿ ಪ್ರಗತಿಯಜತೆಗೆ ತನ್ನ ಆಡಳಿತ ವೈಖರಿಗೂ ಆಧುನಿಕತೆ ಸ್ಪರ್ಶ ನೀಡಿದೆ. ಪಂಚಾಯತಿ ಆವರಣದಲ್ಲಿ ಮುಖ್ಯ ಕಟ್ಟಡ, ನೀರು ಶುದ್ಧೀಕರಣ ಘಟಕ, ರಾಜೀವ್ ಗಾಂಧಿ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ವಾಹನಗಳ ನಿಲುಗಡೆಗೆಜಾಗವಿದೆ. ಇದಲ್ಲದೆ ಪಂಚಾಯಿತಿಯಿಂದ ದೇವಸ್ಥಾನ, ಸಮುದಾಯ ಭವನ, ಜಿಮ್, ಮಿನಿ ಬಸ್ ನಿಲ್ದಾಣ, ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ, ಅತ್ಯಾಧುನಿಕ ಪೀಠೊಪಕರಣ ಅಳವಡಿಕೆ, ಹವಾನಿಯಂತ್ರಿತ ಸಭಾಂಗಣ ಸೌಲಭ್ಯ ಕಲ್ಪಿಸಲಾಗಿದೆ.
Related Articles
Advertisement
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನದಂತೆ ಸ್ವತ್ಛ ಭಾರತ ಅಭಿಯಾನದಲ್ಲಿಆಯ್ಕೆಯಾಗಿರುವ ನಂದಗಡದ ತ್ಯಾಜ್ಯನಿರ್ವಹಣೆ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.ತ್ಯಾಜ್ಯವು ಇಲ್ಲಿ ಕೆಲಸಕ್ಕೆ ಬಾರದ ಕಸದ ಬದಲಾಗಿ ಸಂಪನ್ಮೂಲವಾಗಿದೆ. ಗ್ರಾಮದ ಪ್ರತಿ ಮನೆಗೆತಲಾ ಎರಡೆರಡು ಬಕೆಟ್‌ಗಳನ್ನು ನೀಡಿ ಅದರಲ್ಲಿ ಹಸಿ ಹಾಗೂ ಒಣ ಕಸ ವಿಂಗಡಿಸಿ ಸಂಗ್ರಹಿಸಲಾಗುತ್ತಿದೆ. ನಂತರ ಹಸ ಕಸದಿಂದಗೊಬ್ಬರ ತಯಾರು ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಗಣೇಶ್.
ಗ್ರಾಮದಲ್ಲಿನ 532 ವಿದ್ಯುತ್ ಕಂಬಗಳಲ್ಲಿಸಾಂಪ್ರದಾಯಿಕ ಬಲ್ಬ್ ಗಳ ಬದಲಿಗೆ ಇಂಧನ ಮಿತವ್ಯಯದ ಎಲ್‌ಇಡಿ ಬಲ್ಬ್ ಅಳವಡಿಸಲಾಗಿದೆ. 13 ವಿದ್ಯುತ್ ಮೀಟರ್‌ಗಳಿಗೆ ಸ್ವಯಂ ಚಾಲಿತ ಟೈಮರ್ ಅಳವಡಿಸಲಾಗಿದೆ. ನರೇಗಾ ಯೋಜನೆಯಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಿಜಿಟಲ್ ಲೈಬ್ರರಿ ನಿರ್ಮಾಣವಾಗಿದೆ. ಅಂತರ್ಜಾಲ ಸಂಪರ್ಕವಿರುವ ಐದು ಕಂಪ್ಯೂಟರ್‌ಗಳಿವೆ. ಅಂತರ್ಜಾಲ ಸೇವೆಉಚಿತ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರುಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲವಾಗಿದೆ. ಪಂಚಾಯತ್‌ನ ಎಲ್ಲ ವ್ಯವಹಾರವೂ ಗಣಕೀಕೃತವಾಗಿದೆ.
ಪಂಚಾಯಿತಿಯಲ್ಲಿ ನಗದು ರಹಿತ ವಹಿವಾಟು ಆರಂಭಿಸಲಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಐಡಿ ಕಾರ್ಡ್ ವಿತರಿಸಲಾಗಿದೆ.ಅಂಗನವಾಡಿಗಳಿಗೆ ಹೊಸ ರೂಪ ನೀಡಲಾಗಿದೆ.63 ಗಲ್ಲಿಗಳಲ್ಲಿ ನಾಮಫಲಕ ಅಳವಡಿಸಲಾಗಿದೆ.ಸರ್ಕಾರದ ಯೋಜನೆಗಳನ್ನು ಯಾವ ರೀತಿ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗುತ್ತದೆ. – ಕೆ.ಎಸ್ ಗಣೇಶ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ನಂದಗಡ
–ಕೇಶವ ಆದಿ