Advertisement
ನಿರ್ಮಾಣಕ್ಕೆ ಕಥೆಯೇ ಕಾರಣ“ನನಗೆ ಒಳ್ಳೆಯ ಚಿತ್ರ ನಿರ್ಮಾಣ ಮಾಡಬೇಕು. ಅಂತಹ ಸಿನಿಮಾ ಮೂಲಕವೇ ನನ್ನ ಬ್ಯಾನರ್ ಶುರುಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಒಮ್ಮೆ, ನಿರ್ದೇಶಕ ಪಿ.ಸಿ. ಶೇಖರ್ ಬಂದು ಒಂದು ಕಥೆ ಇದೆ, ನೀವು ನಟಿಸಬೇಕು. ನಾನು ನಿರ್ಮಾಣ ಮಾಡ್ತೀನಿ ಅಂತ ಹೇಳಿದರು. ಕೊನೆಗೆ ಅದ್ಭುತ ಎನಿಸುವಂತಹ ಕಥೆ ಹೇಳಿದರು. ಆ ಕಥೆಯನ್ನು ಅವರು ತಮಿಳು ನಟ ವಿಕ್ರಮ್‌ಗೆ 2002 ರಲ್ಲೇ ಮಾಡಬೇಕು ಅಂತ ನಿರ್ಧರಿಸಿದ್ದರಂತೆ ಶೇಖರ್. ಆದರೆ, ವಿಕ್ರಮ್ ಜತೆ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಇಬ್ಬರೂ ಬಿಜಿಯಾದರು. ಎಲ್ಲೋ ಒಂದು ಕಡೆ ಆ ಕಥೆ ಮಾಡಲೇಬೇಕು ಅನ್ನುವ ಹಠ ಶೇಖರ್‌ಗಿತ್ತು. ಆದರೆ, ಯಾರ ಕೈಯಲ್ಲಿ ಆ ಸಿನಿಮಾ ಮಾಡಿಸಬೇಕು ಅಂತ ಯೋಚಿಸುತ್ತಿದ್ದಾಗಲೇ, ಅವರಿಗೆ ನಾನು ನೆನಪಾಗಿ, ನನ್ನ ಬಳಿ ಬಂದರು. ಅವರು ಮಾಡಿಕೊಂಡ ಕಥೆಗೆ ಹೀರೋ ಮೆಟಿರೀಯಲ್ ಆಗಿರದ. ಡಿಗ್ಲಾಮ್ ಇರುವಂತಹ ನಟ ಬೇಕಿತ್ತು. ಒಮ್ಮೆ ಕಥೆ ಹೇಳಿದರು. ನಾನು ಕೇಳಿದ ಕೂಡಲೇ ಖುಷಿಯಾದೆ. ಅಡ್ವಾನ್ಸ್ ಕೊಡೋಕೆ ಬಂದ್ರು. ಆಗ ನಾನೇ ಅವರಿಗೆ ಅಡ್ವಾನ್ಸ್ ಕೊಟ್ಟು, ನಾನೇ ಈ ಚಿತ್ರ ನಿರ್ಮಾಣ ಮಾಡ್ತೀನಿ ಅಂತ ಹೇಳಿದೆ. ನೀವು ಅಂದುಕೊಂಡಂತೆಯೇ ಚಿತ್ರ ಮಾಡ್ತೀನಿ ಅಂತ ಮಾತು ಕೊಟ್ಟೆ. ನನ್ನ ಹೊಸ ಬ್ಯಾನರ್ ಲಾಂಚ್‌ಗೆ ಇದಕ್ಕಿಂತ ಒಳ್ಳೆಯ ಕಥೆ ಸಿಗಲಿಕ್ಕಿಲ್ಲ ಅಂತ ನಿರ್ಮಾಣ ಮಾಡಿದೆ. ಅದಾದ ಬಳಿಕ ಟೆಕ್ನೀಷಿಯನ್ ಆಯ್ಕೆ ನಡೆಯಿತು. ಅದೂ ಕೂಡ ಕಥೆಯ ಹಾಗೆ ಪವರ್‌ಫುಲ್ ಆಗಿಯೇ ಇತ್ತು.
ಚಿತ್ರದಲ್ಲಿ ಇನ್ನೊಂದು ಮುಖ್ಯ ಆಕರ್ಷನೆ ಎಂದರೆ, ಅದು ಕ್ಯಾಮೆರಾಮೆನ್ ವೈದಿ ಅವರು. ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದಿದ್ದ ವೈದಿ, ಈ ಚಿತ್ರದ ಕಣ್ಣಾಗಿದ್ದಾರೆ. ಬೇಸಿಕಲಿ ವೈದಿಗೆ ಆರ್ಟ್ ಬಗ್ಗೆ ಗೊತ್ತಿರುವುದರಿಂದ, ಪ್ರತಿಯೊಂದು ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿಸಿದ್ದಾರೆ. ಸಿನಿಮಾ ಕಥೆ ಓಕೆ ಆದಾಗ, ತಂಡದ ಹತ್ತು ಮಂದಿ ಕುಳಿತು ಪ್ಲಾನ್ ಮಾಡಿ ಮೊದಲಿಗೆ ಒಂದು ಸ್ಟೋರಿ ಬೋರ್ಡ್ ಮಾಡಿಕೊಂಡು, ಕೆಲ ವಿಷಯಗಳನ್ನು ರೀಸರ್ಚ್ ಮಾಡಿ,ಆ ಕಾಲದ ವೇಷಭೂಷಣ ಸೇರಿದಂತೆ, ಒಟ್ಟಾರೆಯಾಗಿ ಹೊಸ ಪ್ರಪಂಚ ಕಟ್ಟಬೇಕು. ಅದು ಯಾವ ಊರು ಆಂತಾನೂ ಗೊತ್ತಾಗಬಾರದು. ಒಂದು ಕಾಲ್ಪನಿಕ ಜಗತ್ತು ಸೃಷ್ಟಿ ಮಾಡಿದೆವು. ಎಲ್ಲೂ ಕೂಡ ರೆಫರೆನ್ಸ್ ಇರದ ಒಂದು ಹೊಸ ಲೋಕದಲ್ಲಿ ಇಬ್ಬರು ಅಂಧರ ಪ್ರೇಮ ದೃಶ್ಯಕಾವ್ಯ ಅದ್ಭುತವಾಗಿ ಮೂಡಿಬಂದಿದೆ ಎಂದು ವಿವರ ಕೊಡುತ್ತಾರೆ ಮಿತ್ರ.
Related Articles
Advertisement
ಭಾವನೆಗಳ ತೊಳಲಾಟದ ನಡುವೆ…ಚಿತ್ರದಲ್ಲಿ ಹಲವು ಪ್ರಮುಖಗಳಿವೆ. ಒಂದು ಕ್ಯಾಮೆರಾಮೆನ್ ವೈದಿ. ಇನ್ನೊಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಮಗದೊಂದು ನಿರ್ದೇಶಕ ಶೇಖರ್. ಉಳಿದಂತೆ ನಾನು ಮತ್ತು ನಟಿ ಭಾಮ.ಇದರ ಜತೆಯಲ್ಲಿ ಒಳ್ಳೆಯ ತಾಂತ್ರಿಕತೆಯ ತಂಡ ಜತೆಗಿದೆ. ಇಲ್ಲಿ ಇಬ್ಬರ ಅಂಧರ ಪ್ರೀತಿ, ಭಾವನಾತ್ಮಕ ಸಂಬಂಧ, ತೊಳಲಾಟ ಎಲ್ಲವೂ ಇದೆ. ನಾನಾಗಲಿ, ನಟಿ ಭಾವನವಾಗಲಿ, ನಟಿಸಿಲ್ಲ. ನಾವೇ ಪಾತ್ರಗಲಾಗಿದ್ದೇವೆ. ಆ ಪಾತ್ರಕ್ಕಾಗ, ಹಲವು ವೈದ್ಯರನ್ನು ಭೇಟಿ ಮಾಡಿದ್ದು ಇದೆ. ಅಂಧರ ಜತೆ ಮಾತಾಡಿ, ಅವರ ಹಾವಭಾವ ನೋಡಿಕೊಂಡು ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದೂ ಉಂಟು. ಮೂರು ವರ್ಷದ ಬಾಲ್ಯದಲ್ಲಿರುವಾಗಲೇ ದೃಷ್ಟಿ ಕಳಕೊಂಡವರ ವ್ಯಥೆ, ಕಥೆ ಇಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಅವಿನಾಶ್, ರಮೇಶ್ ಭಟ್, ಜೈ ಜಗದೀಶ್, ತಬಲಾನಾಣಿ, ಕಡ್ಡಿಪುಡಿ, ರೂಪಿಕಾ, ಚಂದನ್ ಶರ್ಮ ಸೇರಿದಂತೆ ಹಲವರು ನಟಿಸಿದ್ದಾರೆ. ಇಲ್ಲಿ ಪ್ರತಿಯೊಂದು ಪಾತ್ರಗಳ ಮಾತುಗಳು ನೇರವಾಗಿವೆ. ಎಲ್ಲೂ ಅದು ನಾಟಕೀಯ ಎನಿಸುವುದಿಲ್ಲ. ಸಚಿನ್ ತಂಬಾ ಚೆನ್ನಾಗಿಯೆ ಸಂಭಾಷಣೆ ಬರೆದಿದ್ದಾರೆ. ಒಟ್ಟು 56 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದು ಮಾಂಟೇಜ್ ಸಾಂಗ್ ಇದೆ. ಹಾಗಂತ ಇಲ್ಲಿ ರೆಗ್ಯುಲರ್ ಪ್ಯಾಟ್ರನ್‌ನಲ್ಲಿ ಹಾಡುಗಳಿಲ್ಲ. ಇಲ್ಲಿ ಹೀರೋ ಹಿಂದೆ ನಾಯಕಿ ಕುಣಿದಾಡುವುದಿಲ್ಲ. ಯಾರೂ ಮರ ಸುತ್ತೋದಿಲ್ಲ. ವಿನಾಕಾರಣ ಬಿಲ್ಡಪ್ಸ್ ಇಲ್ಲವೇ ಇಲ್ಲ. ಟ್ರೆಡಿಷನಲ್ ಮೇಕಿಂಗ್ ಪ್ಯಾಟ್ರನ್ ಸಿನಿಮಾದಲ್ಲಿದೆ. ಶಿವಣ್ಣ ಪೋಸ್ಟರ್ ಲಾಂಚ್ -ಕಿಚ್ಚನ ವಾಯ್ಸ
ಚಿತ್ರಕ್ಕೆ ನಟಿ ಭಾಮಾ ಅವರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ಸಿನಿಮಾ ಮೂಲಕ ಅವರಿಗೆ ಹೊಸ ಇಮೇಜ್ ಸಿಗಲಿದೆ. ನನಗೂ ಕೂಡ ಕಾಮಿಡಿ ಇಮೇಜ್ ಆಚೆ ಹೋಗಿ, ಒಂದು ಪಾತ್ರವಾಗಿ ನಿಲ್ಲುತ್ತೇನೆ ಎಂಬ ವಿಶ್ವಾಸವಿದೆ. ಈಗಾಗಲೇ ಚಿತ್ರದ ಫಸ್ಟ್‌ಲುಕ್ ಅನ್ನು ಶಿವರಾಜ್‌ಕುಮಾರ್ ಬಿಡುಗಡೆ ಮಾಡಿ ಹರಸಿದ್ದರು. ಆಗಲೇ ಚಿತ್ರದ ಪೋಸ್ಟರ್ ನೋಡಿ ಎಲ್ಲರೂ ಮೆಚ್ಚುಗೆ ಪಟ್ಟಿದ್ದರು. ಅದಾದ ಮೇಲೆ, ಚಿತ್ರದ ಟ್ರೇಲರ್‌ಗೆ ಸುದೀಪ್ ಧ್ವನಿ ಕೊಟ್ಟು ಶುಭಾಶಯ ಹೇಳಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅಂಧರ ಪಾತ್ರ ಮಾಡಿರುವ ಚಿತ್ರಕ್ಕೆ ಸುದೀಪ್ ದನಿ ಬೇಕಿತ್ತು. ಅದರಲ್ಲೂ ಅಂಧರ ಬಗ್ಗೆ ಅಭಿಮಾನವಿರುವ ಸುದೀಪ್ ಬಳಿಯೇ ಟ್ರೇಲರ್‌ಗೆ ಧ್ವನಿ ಪಡೆದುಕೊಳ್ಳಬೇಕು ಎಂಬ ಆಸೆ ಇತ್ತು. ಕೇಳಿದ ಕೂಡಲೇ ಸುದೀಪ್ ನೀಡಿದ್ದಾರೆ. ದರ್ಶನ್ ಕೂಡ ಚಿತ್ರದ ಟ್ರೇಲರ್ ಲಾಂಚ್ ಮಾಡಿ ಶುಭಹಾರೈಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್‌ನಲ್ಲಿ ‘ರಾಗ’ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ಹೇಳುತ್ತಾರೆ ಮಿತ್ರ.