Advertisement

ಸ್ಮಶಾನದಲ್ಲಿ ‘ನನಗೂ ಲವ್ವಾಗಿದೆ’!

02:53 PM Sep 06, 2021 | Team Udayavani |

“ನನಗೂ ಲವ್ವಾಗಿದೆ’ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ಶಾಂತಿನಗರದ ರುದ್ರಭೂಮಿಯಲ್ಲಿ ಮೂರು ದಿನಗಳಕಾಲ ನಡೆದಿದೆ. ಚಿತ್ರದಲ್ಲಿ ಖಳನಾಗಿ ಅಭಿನಯಿಸುತ್ತಿರುವ ನಿರ್ಮಾಪಕ ಕೆ.ನೀಲಕಂಠನ್ ಅವರು ಸ್ಮಶಾಣ ರುದ್ರನಂತೆ ಭೀಕರ ರೌದ್ರಾವತಾರವೆತ್ತಿ ಕಥಾ ನಾಯಕನನ್ನು ಹೊಡೆಯುವ ಸದೆಬಡೆಯುವ ರಕ್ಕಸ ರೂಪದ ದೃಶ್ಯವನ್ನು ನಿರ್ದೇಶಕ ವಿಜಯ್‌ ರಾಜಶೇಖರ್‌ ಚಿತ್ರೀಕರಿಸಿಕೊಂಡರು.

Advertisement

ವಿಜಯ್‌ ರಾಜಶೇಖರ್‌ ಈ ಸಿನಿಮಾಕ್ಕೆ ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

“ಶೀರ್ಷಿಕೆ ಕೇಳಿದೊಡನೆ ಇದೊಂದು ಲವ್‌ ಸ್ಟೋರಿ ಇರಬಹುದೆಂಬ ಭಾವನೆ ಬರುತ್ತದೆ. ಬೆಳಗಾಂ ಹುಡುಗ, ಬೆಂಗಳೂರು ಹುಡುಗಿಯ ಪ್ರೇಮಕತೆ ಇರಲಿದೆ. ಆದರೆ ಅದಕ್ಕಿಂತಲೂ ಮೀರಿದಕುತೂಹಲಕಾರಿ ಸನ್ನಿವೇಶಗಳನ್ನು ನೋಡಬಹುದೆಂದು ಚಿತ್ರತಂಡದ ಮಾತು.

ಈ ಚಿತ್ರವನ್ನುಕೆ.ನೀಲಕಂಠನ್‌ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಅವರದ್ದೇಕಥೆ ಇದೆ. ಜೊತೆಗೆ ಖಳನಾಯಕರಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಿರ್ಮಾಪಕರ ಪುತ್ರ ಸೋಮವಿಜಯ್‌ ನಾಯಕನಾಗಿ ನಟಿಸುತ್ತಿದ್ದಾರೆ. ರೋಶಿನಿ ಈ ಚಿತ್ರದ ನಾಯಕಿ.

Advertisement

Udayavani is now on Telegram. Click here to join our channel and stay updated with the latest news.

Next