Advertisement

Puneeth Rajkumar: ಅಸಹಾಯಕರಿಗೆ ಆಹಾರ ವಿತರಿಸಿ ಅಪ್ಪು ಹುಟ್ಟುಹಬ್ಬ ಆಚರಿಸಿಕೊಂಡ ನಮೃತಾ ಗೌಡ

12:29 PM Mar 18, 2024 | Team Udayavani |

ಬೆಂಗಳೂರು: ನಿನ್ನೆ ಅಪ್ಪು ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಮಾಜ ಸೇವೆ ಮಾಡುವ ಆಚರಿಸಿಕೊಂಡಿದ್ದಾರೆ. ರಕ್ತದಾನ, ಅನ್ನದಾನ ಮಾಡಿ ಅಪ್ಪುವನ್ನು ನೆನೆದಿದ್ದಾರೆ.

Advertisement

ʼಪುಟ್ಟ ಗೌರಿ ಮದುವೆʼ, ʼನಾಗಿಣಿ-2ʼ ಕಿರುತೆರೆ ಲೋಕದಲ್ಲಿ ಜನಪ್ರಿಯರಾಗಿ ಬಿಗ್‌ ಬಾಸ್‌ ಕನ್ನಡ -10 ನಲ್ಲಿ ಭಾಗಿಯಾಗಿ ಅಪಾರ ಅಭಿಮಾನಿಗಳ ಪ್ರೀತಿ – ಪ್ರೋತ್ಸಾಹವನ್ನು ಗಳಿಸಿರುವ  ನಟಿ ನಮ್ರತಾ ಗೌಡ ಅವರು ಅಪ್ಪು ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಅಪ್ಪಟ ಅಭಿಮಾನಿಯಾಗಿರುವ ನಮ್ರತಾ ಗೌಡ ಅವರು ರಸ್ತೆ ಬದಿಯಲ್ಲಿರುವ ಹಾಗೂ ಅಸಹಾಯಕರಿಗೆ ಆಹಾರವನ್ನು ವಿತರಿಸಿದ್ದಾರೆ.

“ಹಾಯ್‌ ಎಲ್ಲರಿಗೂ ಇವತ್ತು ನಮಸ್ಕಾರ, ಇವತ್ತು ಮಾರ್ಚ್‌ 17 ನನ್ನ ಬಾಸ್‌ ಪುನೀತ್‌ ರಾಜ್‌ ಕುಮಾರ್‌ ಸರ್‌ ಬರ್ತ್‌ ಡೇ. ಇವತ್ತು ನಾನು ನನ್ನ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡುತ್ತಾ ಇದ್ದೇನೆ. ಇದನ್ನೇ ನಾನು ಪ್ರತಿ ತಿಂಗಳು 17 ರಂದು ಮುಂದುವೆರಸಬೇಕೆಂದ್ದೀನಿ” ಎಂದು ವಿಡಿಯೋ ಹಂಚಿಕೊಂಡು ಹೇಳಿದ್ದಾರೆ.

ಊಟದ ಬಾಕ್ಸ್‌  ಮೇಲೆ “ನಿಮ್ಮ ಜೀವನದಲ್ಲಿ ದೀಪಾವಳಿ ಬಂದೇ ಬರುತ್ತೆ, ಪಟಾಕಿ ಯಾರದ್ದೆ ಆಗಿರಲಿ. ಹಚ್ಚೋರು ನೀವಾಗಿರಬೇಕು ಪಿಆರ್​ಕೆ” ಎಂಬ ಬರಹವನ್ನು ಪುಟ್ಟ ಕಾಗದವೊಂದರಲ್ಲಿ ಬರೆಯಲಾಗಿದೆ.

Advertisement

ನಮ್ರತಾ ಅವರ ಈ ಕಾರ್ಯಕ್ಕೆ ಅಪ್ಪು ಅಭಿಮಾನಿಗಳು ಖುಷ್‌ ಆಗಿದ್ದಾರೆ. ಅವರ ಈ ಸೇವೆಗೆ ಶ್ಲಾಘಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next