Advertisement
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಸಾರಶುರು ಮಾಡಿದ್ದ ನಮೋ ಟಿ.ವಿ.ಗೆ ಬ್ರೇಕ್ ಬಿದ್ದಿದೆ. ಟಿ.ವಿ. ವಿರುದ್ಧ ವಿಪಕ್ಷಗಳ ದೂರನ್ನು ಚುನಾವಣ ಆಯೋಗ ಮಾನ್ಯ ಮಾಡಿ, ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾದದ್ದು ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ. ದೇಶದ ಬಹುತೇಕ ಡಿಟಿಎಚ್ ಸೇವಾದಾರರು ಒದಗಿಸುತ್ತಿದ್ದ, ಬಿಜೆಪಿ ಶುರು ಮಾಡಿದ್ದ ನಮೋ ಟೀವಿಯಲ್ಲಿ ಅಂಥದ್ದೇನಿದೆ ? ಕಾನೂನು ವಿಚಾರಗಳೇನು ಎಂಬ ಕುರಿತ ವಿವರಗಳು ಇಲ್ಲಿವೆ.
ಸಾಮಾನ್ಯ ಕೇಬಲ್ ಟಿವಿ, ಡಿಟಿಎಚ್ ಗಳಲ್ಲಿ ಗ್ರಾಹಕರು ಸ್ಯಾಟಲೈಟ್ ಚಾನೆಲ್ ಹೊರತಾಗಿಯೂ ಅನ್ಯ ಮಾರ್ಗಗಳಲ್ಲಿ ಪ್ರಸಾರವಾಗುವ ಚಾನೆಲ್‌ಗಳನ್ನು ವೀಕ್ಷಿಸಬಹುದು. ಕೇಬಲ್ ಟೀವಿ ಮಲ್ಟಿ ಸಿಸ್ಟಂ ಆಪರೇಟರ್ ಮತ್ತು ಕೇಬಲ್ ಟೀವಿ ಆಪರೇಟರ್, ಡಿಟಿಎಚ್ ಸರ್ವೀಸ್, ಇಂಟರ್ನೆಟ್ ಪ್ರೊಟೋಕಾಲ್ ಟೆಲಿವಿಷನ್ ಸರ್ವೀಸ್, ಹೆಡೆಂಡ್ ಇನ್ ದಿ ಸ್ಕೈ, ಟೆರ್ರೆಸ್ಟ್ರಿಯಲ್ ಟಿ.ವಿ. ಸರ್ವೇ ವಿಧಾನದಲ್ಲಿ ಚಾನೆಲ್ ಪ್ರಸಾರ ಸಾಧ್ಯವಿರುತ್ತದೆ. ಈ ಪ್ರಸಾರದ ಮಾದರಿಗಳನ್ನು ಡಿಸ್ಟ್ರಿಬ್ಯೂಷನ್ ಪ್ಲಾಟ್‌ಫಾರಂ ಆಪರೇಟರ್ (ಡಿಪಿಒ)ಗಳು ಎಂದು ಕರೆಯುತ್ತಾರೆ. ಆದರೆ ಇದು ಸಣ್ಣ ಪ್ರದೇಶಕ್ಕೆ ಸೀಮಿತವಾಗಿವೆ. ಟಿ.ವಿ. ಚಾನೆಲ್‌ಗಳಲ್ಲಿ ನಾಲ್ಕು ವಿಧಗಳು ಇವೆ. ಖಾಸಗಿ ಸ್ಯಾಟಲೈಟ್ ಚಾನೆಲ್‌ಗಳು (ಇದಕ್ಕೆ ಸರಕಾರದ ಅನುಮತಿ ಬೇಕು), ಸಾರ್ವಜನಿಕರ ಸ್ವಾಮ್ಯದ ಟಿ.ವಿಗಳು (ಪ್ರಸಾರ ಭಾರತಿ, ದೂರದರ್ಶನ ಇತ್ಯಾದಿ), ಸ್ಥಳೀಯ ಚಾನೆಲ್‌ಗಳು ಮತ್ತು ಡಿಪಿಓಗಳು. ಇವೆರಡು ಕೇಬಲ್ ನೆಟ್‌ವರ್ಕ್ ಸಹಾಯ ಬಳಸಿ ಪ್ರಸಾರವಾಗುತ್ತವೆ. ನಮೋ ಟಿ.ವಿ.ಯನ್ನು ನಿಷೇಧಿಸಿದ್ದೇಕೆ ?
ಕಾನೂನು ಇಲ್ಲ !
ಸ್ಥಳೀಯ ಕೇಬಲ್ ಆಪರೇಟರ್‌ಗಳ ಮುಖಾಂತರ ಮತ್ತು ಡಿಟಿಎಚ್ ಸೇವೆ ನೀಡುವವರ ಮುಖಾಂತರ ಇದನ್ನು ಗ್ರಾಹಕರಿಗೆ ಪ್ರಸಾರ ಮಾಡಲಾಗುತ್ತಿತ್ತು. ಇದನ್ನು ಸ್ಯಾಟಲೈಟ್ ಚಾನೆಲ್ ಮುಖಾಂತರ ಪ್ರಸಾರ ಮಾಡುತ್ತಿರಲಿಲ್ಲ. ಸದ್ಯದ ಮಟ್ಟಿಗೆ ಭಾರತದಲ್ಲಿ ಇಂತಹ ಚಾನೆಲ್‌ಗಳ ಬಗ್ಗೆ ಯಾವುದೇ ಕಾನೂನುಗಳು ಇಲ್ಲ. ಡಿಪಿಒಗಳು ಕೇಂದ್ರದ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ದ ವ್ಯಾಪ್ತಿ ಅಡಿಗೆ ಬರುತ್ತವೆ. ತಮ್ಮದೇ ಆದ ಗ್ರಾಹಕರನ್ನು ತಲುಪಲು ಬಳಸುವ ಖಾಸಗಿ ಸೇವೆ ಇದಾಗಿದ್ದು, ಇದು ನೋಂದಾಯಿತ ಚಾನೆಲ್‌ಗಳಲ್ಲ. ಜತೆಗೆ ಈ ಸೇವೆ ಬಳಸಿ ವಿದೇಶಿ ಚಾನೆಲ್ ಪ್ರಸಾರ ಮಾಡುವಂತಿಲ್ಲ ಮತ್ತು ಹಲವು ನೆಟ್‌ವರ್ಕ್‌ಗಳಿಗೆ ಡಿಪಿಒ ಹಂಚುವಂತೆ ಇಲ್ಲ ಎಂದು ಟ್ರಾಯ್ ಹೇಳಿದೆ.
Related Articles
ಮುಂದಿನ ದಿನಗಳಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ಬಗ್ಗೆ ಪ್ರತ್ಯೇಕ ಕಾನೂನು ರೂಪಿಸುವ ಸಾಧ್ಯವಿದೆ. ಡಿಪಿಒಗಳು ಒಂದು ನಿರ್ದಿಷ್ಟ ಸಮಯ, ಪ್ರದೇಶದಲ್ಲಿ ಪ್ರಸಾರವಾಗುವಂಥವು. ಇದು ಯಾವಾ ಗಲೂ ಪ್ರಸಾರವಾಗುವಂಥದ್ದಲ್ಲ. ಇಂಥದ್ದು ಪ್ರಸಾರ ಸಾಧ್ಯವಿಲ್ಲ ಎಂದು ಏಕಾ ಏಕಿ ತಡೆಯಲು ಸಾಧ್ಯವಿಲ್ಲ. ಆದರೆ ಡಿಪಿಒಗಳಲ್ಲಿ ಯಾವುದನ್ನು ಪ್ರಸಾರ ಮಾಡ ಬಹುದು, ಮಾಡಬಾರದು ಎಂಬುದನ್ನು ನಿರ್ದೇಶಿಸಬಹುದು. ಹಾಗೆಯೇ ಪ್ರಸಾರದ ಮಾದರಿಗಳ ಬಗ್ಗೆ, ಜಾಹೀರಾತಿನ ಬಗ್ಗೆ ಪ್ರೋಗ್ರಾಮ್ ಕೋಡ್ ಮತ್ತು ಕೇಬಲ್ ಟಿ.ವಿ. ಆ್ಯಕ್ಟ್ 1994ರ ಅಡಿ ಕಾನೂನು ರೂಪಿಸುವ ಸಾಧ್ಯತೆ ಇದೆ.
Advertisement