Advertisement

‘ಕೃಷ್ಣೋತ್ಸವ ಶಕ್ತಿ ನೀಡುವ ಕಾರ್ಯ’

12:40 PM Oct 01, 2018 | Team Udayavani |

ಬೆಳ್ತಂಗಡಿ : ಧರ್ಮ ರಕ್ಷಣೆ ಕಾರ್ಯದ ಜತೆಗೆ ಹಿಂದೂ ಬಾಂಧವರಿಗೆ ಶಕ್ತಿ ನೀಡುವ ಉದ್ದೇಶವಾಗಿ ಆರಂಭಗೊಂಡ ಕೃಷ್ಣೋತ್ಸವವು ಪ್ರಸ್ತುತ ಜಿಲ್ಲೆಯ ಪ್ರಮುಖ ಉತ್ಸವವಾಗಿ ಆಕರ್ಷಣೆ ಪಡೆದಿದೆ. ಗೋಸಂರಕ್ಷಣೆ, ದುಶ್ಚಟಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರನ್ನು ಜಾಗೃತಗೊಳಿಸುವ ಉದ್ದೇಶವೂ ಕೃಷ್ಣೋತ್ಸವದ ಹಿಂದಿದೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಅವರು ರವಿವಾರ ಬೆಳ್ತಂಗಡಿ ಶ್ರೀಕೃಷ್ಣೋತ್ಸವ ಸೇವಾ ಸಮಿತಿ ಆಯೋಜಿಸಿದ್ದ ಕೃಷ್ಣೋತ್ಸವ-2018 ಅನ್ನು ಉದ್ಘಾಟಿಸಿ, ನಾವೆಲ್ಲರೂ ಒಂದೇ ಮನಸ್ಸಿನಿಂದ ಕೃಷ್ಣೋತ್ಸವದಲ್ಲಿ ಪಾಲ್ಗೊಂಡು ಈ ಕಾರ್ಯವನ್ನು ಯಶಸ್ಸುಗೊಳಿಸಲು ಯುವಕರ ತಂಡದ ಜತೆ ಕೈಜೋಡಿಸಬೇಕಿದೆ ಎಂದರು.

ಉಜಿರೆಯ ಉದ್ಯಮಿ ರಾಜೇಶ್‌ ಪೈ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಸುನೀಲ್‌ ಶೆಣೈ, ಉದ್ಯಮಿಗಳಾದ ಮೋಹನ್‌, ಸುಧೀರ್‌ ಭಟ್‌, ನ್ಯಾಯವಾದಿ ಮುರಳಿ, ಪ.ಪಂ. ಸದಸ್ಯ ಸಂತೋಷ್‌, ಬಹುಜನ ಸಮಾಜ ಪಾರ್ಟಿ ಅಧ್ಯಕ್ಷ ರಮೇಶ್‌ ರೆಂಕೆದಗುತ್ತು, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್‌ಕುಮಾರ್‌ ಕಾಪಿನಡ್ಕ, ಸಮಿತಿ ಅಧ್ಯಕ್ಷ ಶರತ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಉಮೇಶ್‌ ಕುಲಾಲ್‌ ಮತ್ತಿತರರಿದ್ದರು. ಸಮಿತಿಯ ಪ್ರಧಾನ ಸಂಚಾಲಕ ಪ್ರಕಾಶ್‌ ಆಚಾರ್ಯ ಸ್ವಾಗತಿಸಿ, ಸ್ಮಿತೇಶ್‌ ಬಾರ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next