ಬೆಂಗಳೂರು: ಅತ್ತ ಭಾರತ-ಚೀನಾ ನಡುವಿನ ಸಂಘರ್ಷ ತಿಳಿಯಾಗುತ್ತಿದ್ದಂತೆ, ಇತ್ತ ಮತ್ತೆರಡು ಟನೆಲ್ ಬೋರಿಂಗ್ ಮೆಷಿನ್ (ಟಿಬಿಎಂ)ಗಳು ಬೆಂಗಳೂರಿನತ್ತ ಮುಖಮಾಡಿವೆ. ಈ ಮೂಲಕ “ನಮ್ಮ ಮೆಟ್ರೋ’ಸುರಂಗ ಹಾದಿ ಮತ್ತಷ್ಟು ಸುಗಮ ಆಗಲಿದೆ.
ಜುಲೈ-ಆಗಸ್ಟ್‌ನಲ್ಲಿ ಭಾರತದ ಗಡಿಯಲ್ಲಿ ನುಸುಳಲು ಚೀನಾ ಯತ್ನಿಸಿತ್ತು. ಇದರಿಂದಗಡಿಯಲ್ಲಿ ಸಂಘರ್ಷದ ವಾತಾವರಣ ಏರ್ಪಟ್ಟಿತ್ತು. ಹಾಗಾಗಿ, ಚೀನಾದಿಂದ ಬರಬೇಕಾದ ಟಿಬಿಎಂಗಳಿಗೂ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು.
ವಾತಾವರಣ ತುಸು ತಿಳಿಯಾಗುತ್ತಿದ್ದಂತೆ , ಎರಡು ದೈತ್ಯ ಯಂತ್ರಗಳು ಚೀನಾದಿಂದಹಡಗಿನಲ್ಲಿ ಭಾರತದತ್ತ ಪ್ರಯಾಣ ಬೆಳೆಸಿವೆ.ಮತ್ತೂಂದು ಚೆನ್ನೈನಲ್ಲೇ ಸಿದ್ಧಗೊಳ್ಳುತ್ತಿದೆ.ಅಂದುಕೊಂಡಂತೆ ಎಲ್ಲವೂ ನಡೆದರೆ,ತಿಂಗಳಲ್ಲಿ ಈ ಪೈಕಿ ಒಂದು ಯಂತ್ರ ನಗರದ ಡೈರಿ ವೃತ್ತದಿಂದ ಮೈಕೋ ಇಂಡಸ್ಟ್ರೀಸ್ ನಡುವೆ ಸುರಂಗ ಕೊರೆಯುವ ಕಾರ್ಯ ಶುರುವಾಗಲಿದೆ.
ಒಟ್ಟಾರೆ ಮೂರು ಟಿಬಿಎಂಗಳು ತಿಂಗಳಲ್ಲಿ ಸೇರ್ಪಡೆಗೊಳ್ಳಲಿವೆ. ಈ ಪೈಕಿ ಈಗಾಗಲೇ ಒಂದು ಯಂತ್ರ ಚೀನಾದಿಂದ ಚೆನ್ನೈ ಬಂದರಿಗೆ ಬಂದು ಇಳಿದಿದ್ದು, ಮತ್ತೂಂದುಮಾರ್ಗಮಧ್ಯೆ ಇದೆ. ಇವು ಜರ್ಮನ್ ಮೂಲದ ಹೆರೆನ್‌ಕ್ನೆಚ್ ಕಂಪನಿಯು ಪೂರೈಸುತ್ತಿದ್ದು, ಅದರ ಬಹುತೇಕ ಬಿಡಿಭಾಗ ಮಾತ್ರ ಚೀನಾದಲ್ಲಿ ತಯಾರಾಗುತ್ತಿವೆ.ಇದರೊಂದಿಗೆ ಸರಾಸರಿ ಪ್ರತಿ 2 ಕಿ.ಮೀ.(ಜೋಡಿ ಸುರಂಗ)ಗೆ ಒಂದರಂತೆ ಒಟ್ಟಾರೆ 6 ಟಿಬಿಎಂಗಳು ಸುರಂಗಕೊರೆಯಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಒಪ್ಪಂದ ಹಿಂದೆಯೇ ಆಗಿತ್ತು: ಭಾರತ- ಚೀನಾ ನಡುವಿನ ಸಂಘರ್ಷಕ್ಕೂ ಟಿಬಿಎಂಗಳಿಗೂ ಸಂಬಂಧ ಇಲ್ಲ. ಯಂತ್ರ ತರಿಸಿಕೊಳ್ಳುವ ಬಗ್ಗೆ ಹಿಂದೆಯೇ ಒಡಂಬಡಿಕೆ ಆಗಿತ್ತು. ಈ ಮಧ್ಯೆ ಕೋವಿಡ್ ಹಾವಳಿ ಮತ್ತು ಅದರಬೆನ್ನಲ್ಲೇ ಸಂಘರ್ಷ ವಾತಾವರಣದಿಂದ ತಡ ವಾಗಿತ್ತು. ಅಷ್ಟಕ್ಕೂ ಈ ಯಂತ್ರ ಪೂರೈಸುತ್ತಿರುವ ಕಂಪನಿ ಮೂಲತಃ ಜರ್ಮನಿಯದ್ದಾಗಿದೆ ಎಂದೂ ಅಧಿಕಾರಿಗಳು ಸ್ಪಷ್ಟ ಪಡಿಸುತ್ತಾರೆ. ಜಯನಗರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕೇಂದ್ರದಿಂದ ನಾಗವಾರ ನಡುವೆ 10.37 ಕಿ.ಮೀ. ಉದ್ದದ ಜೋಡಿ ಸುರಂಗ ಮಾರ್ಗಕ್ಕೆ 9 ಟಿಬಿಎಂಗಳನ್ನು ಅಣಿಗೊಳಿಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.ಈಪೈಕಿಉಳಿದ 3 ಯಂತ್ರ ಚೆನ್ನೈನಲ್ಲೇ ತಯಾರಾಗಲಿವೆ. ಒಟ್ಟು 4ಪ್ಯಾಕೇಜ್‌ಗಳಲ್ಲಿ ಕಾಮಗಾರಿಕೈಗೆತ್ತಿಕೊಳ್ಳುತ್ತಿದ್ದು,ಇದರಲ್ಲಿ2 ಪ್ಯಾಕೇಜ್‌ಗಳಲ್ಲಿ ಈಗಾಗಲೇ ಸುರಂಗ ಕೊರೆಯುವ ಕೆಲಸ ಪ್ರಗತಿಯಲ್ಲಿದೆ. ಟ್ಯಾನರಿ ರಸ್ತೆಯ ಕಂಟೋನ್ಮೆಂಟ್‌ನಿಂದ ಶಿವಾಜಿನಗರ ಕಡೆಗೆಟಿಬಿಎಂ”ಊರ್ಜಾ’ಹಾಗೂ”ವಿಂದ್ಯಾ’ಮತ್ತು ಶಿವಾಜಿನಗರದಿಂದ ವೆಲ್ಲಾರ ಕಡೆಗೆ “ಅವನಿ’ ಪಯಣ ಶುರು ಮಾಡಿವೆ.
ಅಂದಹಾಗೆ, 2ನೇ ಹಂತದಲ್ಲಿ ನಾಗವಾರದಲ್ಲಿಇಂಟರ್‌ಚೇಂಜ್‌ನಿರ್ಮಾಣಗೊಳ್ಳಲಿದ್ದು, ಅದು ಹೊರವರ್ತುಲ ರಸ್ತೆ- ಕೆಂಪೇಗೌಡಅಂತಾರಾಷ್ಟ್ರೀಯವಿಮಾನ ನಿಲ್ದಾಣ ಮೆಟ್ರೋ ಮಾರ್ಗಕ್ಕೆ ಸೇರ್ಪಡೆಗೊಳ್ಳಲಿದೆ.
ಅರ್ಧ ಕಿ.ಮೀ. ಕ್ರಮಿಸಿದ ಯಂತ್ರಗಳು! : ಮೂರೂ ಟಿಬಿಎಂಗಳು ಸೇರಿ ಒಟ್ಟಾರೆ ಹೆಚ್ಚು-ಕಡಿಮೆ ಅರ್ಧ ಕಿ.ಮೀ. ಮೆಟ್ರೋ ಸುರಂಗ ಮಾರ್ಗವನ್ನು ಕ್ರಮಿಸಿವೆ. ಅ.17ರಂದು ಮೊದಲ ಟಿಬಿಎಂ “ಊರ್ಜಾ’ಗೆ ಚಾಲನೆ ದೊರೆತಿತ್ತು. ಇದು ಸುಮಾರು 200 ಮೀಟರ್ ಸುರಂಗ ಕೊರೆದಿದೆ. ನಂತರ ಕಾರ್ಯಾಚರಣೆ ಆರಂಭಿಸಿದ “ಅವನಿ’ ಹಾಗೂ “ವಿಂದ್ಯಾ’ಕ್ರಮವಾಗಿ 150 ಮೀ. ಮತ್ತು 100 ಮೀ.ಮಾರ್ಗ ಕ್ರಮಿಸಿವೆ. ಎಂದಿನಂತೆ ನೆಲದಡಿ ಮಾರ್ಗ ದುರ್ಗಮವಾಗಿದ್ದು,ಗಟ್ಟಿಕಲ್ಲು ಮಿಶ್ರಿತ ಮಣ್ಣು ಇದೆ. ಆದರೆ, ಹೆಚ್ಚಿನಸಾಮರ್ಥ್ಯದ ಈದೈತ್ಯಯಂತ್ರಗಳು ಅಷ್ಟೇ ಸಮರ್ಥವಾಗಿ ನುಗ್ಗುತ್ತಿವೆ. ಇದುವರೆಗೆ ಯಂತ್ರವೇ ಸ್ಥಗಿತಗೊಳ್ಳುವಂತಹ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
15 ದಿನಗಳಲ್ಲಿ ಬೆಂಗಳೂರಿಗೆ ಬರಲಿವೆ : ಚೆನ್ನೈ ಬಂದರಿಗೆ ಬಂದಿಳಿದ ಯಂತ್ರ ಮುಂದಿನ 15 ದಿನಗಳಲ್ಲಿ ಬೆಂಗಳೂರು ತಲುಪುವ ಸಾಧ್ಯತೆ ಇದೆ. ಇದು ಡೈರಿ ವೃತ್ತದಿಂದ ಮೈಕೋ ಇಂಡಸ್ಟ್ರೀಸ್ ಕಡೆಗೆ ಸುರಂಗಕೊರೆಯಲಿದೆ. ಇದರ ಬೆನ್ನಲ್ಲೇ ಅಂದರೆ ತಿಂಗಳ ಅಂತರದಲ್ಲಿ ಮತ್ತೂಂದು ಯಂತ್ರ ಇದೇ ಮಾರ್ಗದಲ್ಲಿಕಾರ್ಯಾಚರಣೆಗೆ ಅಣಿಯಾಗಲಿದೆ. ಮತ್ತೂಂದು ಯಂತ್ರವನ್ನು ವೆಲ್ಲಾರ ಜಂಕ್ಷನ್‌ನಿಂದಮೈಕೋ ಇಂಡಸ್ಟ್ರೀಸ್ ನಡುವೆ ನಿಯೋಜಿಸಲಾಗುವುದು ಎಂದು (ಬಿಎಂಆರ್‌ಸಿಎಲ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
-ವಿಜಯಕುಮಾರ್ ಚಂದರಗಿ