Advertisement
ಪ್ರಸ್ತುತ ಒಂದೇ ಪ್ರಕಾರದ ಸ್ಮಾರ್ಟ್‌ಕಾರ್ಡ್ ಇದ್ದು, ಅದರ ಬಳಕೆದಾರರಿಗೆ ಪ್ರಯಾಣ ದರದಲ್ಲಿ ಕೇವಲ ಶೇ. 5 ರಿಯಾಯ್ತಿ ನೀಡಲಾಗುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿವಿಧ ಪ್ರಕಾರದ ಟ್ರಿಪ್ ಕಾರ್ಡ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಉದಾಹರಣೆಗೆ 60 ಟ್ರಿಪ್‌ಗ್ಳ ಅಥವಾ 25 ಟ್ರಿಪ್‌ಗಳುಲ್ಲ ಸ್ಲ್ಯಾಬ್‌ಗಳನ್ನು ನಿಗದಿಪಡಿಸಲಾಗುತ್ತದೆ.
Related Articles
Advertisement
ಗರಿಷ್ಠ ರಿಯಾಯ್ತಿ; ಕೈಗೆಟಕುವ ದರ: “ಟ್ರಿಪ್ ಆಧಾರಿತ ಕಾರ್ಡ್‌ಗಳನ್ನು ಪರಿಚಯಿಸುವ ಉದ್ದೇಶ ಇದೆ. ಈ ಕಾರ್ಡ್‌ಗಳು ಬಸ್ ಪಾಸಿನ ಮಾದರಿಯಲ್ಲೇ ಇರುತ್ತವೆ. ಆದರೆ, ಟ್ರಿಪ್ ಆಧಾರಿತ ಪಾಸುಗಳು ಇವು ಆಗಿರುತ್ತವೆ. 50 ಟ್ರಿಪ್‌ಗ್ಳನ್ನು ನಿಗದಿಪಡಿಸಿ ರಿಯಾಯ್ತಿ ಕಲ್ಪಿಸಿದ ಒಂದು ಕಾರ್ಡ್ ಇದ್ದರೆ, ಮತ್ತೂಂದು 25 ಟ್ರಿಪ್‌ಗ್ಳ ಕಾರ್ಡ್ ಇರುತ್ತದೆ. ಹೀಗೆ ಬೇರೆ ಬೇರೆ ಪ್ರಕಾ ರದ ಕಾರ್ಡ್‌ಗಳಿರುತ್ತವೆ. ಪ್ರಯಾಣಿಕರು ತಮಗೆ ಅನು ಕೂಲವಾದದ್ದನ್ನು ಪಡೆಯಬಹುದು. ಆಯಾ ಟ್ರಿಪ್‌ಗ್ಳ ಸಂಖ್ಯೆಗೆ ಅನುಗುಣವಾಗಿ ರಿಯಾಯ್ತಿ ಇರಲಿದೆ.
ರಿಯಾಯ್ತಿ ಪ್ರಮಾಣ ಇನ್ನೂ ಅಂತಿಮ ವಾಗಿಲ್ಲ. ಆದರೆ, ಸಾಮಾನ್ಯರಿಗೆ ಅತ್ಯಂತ ಕೈಗೆಟಕುವ ದರದಲ್ಲಂತೂ ಇರಲಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸ್ಪಷ್ಟಪಡಿಸಿದರು. ಈ ಸಂಬಂಧ ಸಾಫ್ಟ್ವೇರ್‌ಗಳು ಸೇರಿದಂತೆ ವಿವಿಧ ತಾಂತ್ರಿಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಇದರ ಸಿದ್ಧತೆಗಳು ನಡೆದಿವೆ. ಈ ಸೌಲಭ್ಯದಿಂದ ಮುಂಬ ರುವ ದಿನಗಳಲ್ಲಿ “ನಮ್ಮ ಮೆಟ್ರೋ’ ಜನರಿಗೆ ಮತ್ತಷ್ಟು ಹತ್ತಿರ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟ್ರಿಪ್ ಆಧಾರಿತ ಪಾಸು ಯಾಕೆ? ಬಸ್‌ನಲ್ಲಿ ನೀಡುವ ಮಾಸಿಕ ಪಾಸುಗಳ ಯಥಾವತ್ ಮಾದರಿಯನ್ನು ಮೆಟ್ರೋದಲ್ಲಿ ಅಳವಡಿಸಲು ಆಗದು. ಯಾಕೆಂದರೆ, ಸಾಮಾನ್ಯವಾಗಿ ಬಸ್ಸಿನಲ್ಲಿ ಒಂದು ಪಾಸಿನಲ್ಲಿ ಒಬ್ಬರು ಮಾತ್ರ ಪ್ರಯಾಣಿಸಲು ಸಾಧ್ಯವಿದ್ದು, ಪಾಸು ಹೊಂದಿದ ಪ್ರಯಾಣಿಕರನ್ನು ಖುದ್ದು ನಿರ್ವಾಹಕ ಟಿಕೆಟ್ ನೀಡುವ ವೇಳೆ ಪರಿಶೀಲನೆ ನಡೆಸುತ್ತಾನೆ. ಆದರೆ, ಮೆಟ್ರೋದಲ್ಲಿ ಒಂದು ಕಾರ್ಡ್‌ನಲ್ಲಿ ಹಲವು ವ್ಯಕ್ತಿಗಳು ವಿವಿಧ ಅವಧಿಯಲ್ಲಿ ಪ್ರಯಾಣಿಸುತ್ತಾರೆ. ಇಲ್ಲಿ ಮ್ಯಾನ್ಯುವಲ್ ಆಗಿ ಪರಿಶೀಲಿಸಲು ಅವಕಾಶವೂ ಇರುವುದಿಲ್ಲ. ಅದು ಸಾಧ್ಯವೂ ಇಲ್ಲ. ಈ ಹಿನ್ನೆಲೆಯಲ್ಲಿ ಟ್ರಿಪ್ ಆಧಾರಿತ ಪಾಸುಗಳನ್ನು ಪರಿಚಯಿಸಲಾಗುತ್ತದೆ.
– ವಿಜಯಕುಮಾರ ಚಂದರಗಿ