Advertisement

MP’s Kuno Park ; 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ

08:55 PM Jan 03, 2024 | Team Udayavani |

ಭೋಪಾಲ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಚೀತಾವೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಬುಧವಾರ ತಿಳಿಸಿದ್ದಾರೆ.

Advertisement

“ಕುನೋ ರಾಷ್ಟ್ರೀಯ ಉದ್ಯಾನವನವು ಮೂರು ಹೊಸ ಸದಸ್ಯರನ್ನು ಸ್ವಾಗತಿಸಿದೆ ಎಂದು ಹಂಚಿಕೊಳ್ಳಲು ರೋಮಾಂಚನಗೊಂಡಿದ್ದೇನೆ. ನಮೀಬಿಯಾದ ಚೀತಾ ಆಶಾಗೆ ಮರಿಗಳು ಜನಿಸಿವೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಪರಿಸರ ಸಮತೋಲನವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಚೀತಾ ಯೋಜನೆಗೆ ಘರ್ಜಿಸುವ ಯಶಸ್ಸು” ಎಂದು ಬಣ್ಣಿಸಿ, ಯೋಜನೆಯಲ್ಲಿ ತೊಡಗಿರುವ ಎಲ್ಲಾ ತಜ್ಞರು, ಕುನೋ ವನ್ಯಜೀವಿ ಅಧಿಕಾರಿಗಳು ಮತ್ತು ಭಾರತದಾದ್ಯಂತ ವನ್ಯಜೀವಿ ಉತ್ಸಾಹಿಗಳಿಗೆ ನನ್ನ ದೊಡ್ಡ ಅಭಿನಂದನೆಗಳು ಎಂದು ಯಾದವ್ ಪೋಸ್ಟ್‌ನಲ್ಲಿ ಮಾಡಿದ್ದಾರೆ.

ಒಂದು ವಾರದ ಹಿಂದೆ ಆಶಾ ಮೂರು ಮರಿಗಳಿಗೆ ಜನ್ಮ ನೀಡಿರುವ ಸಾಧ್ಯತೆ ಇದೆ ಎಂದು ಕೆಎನ್‌ಪಿ ಮೂಲಗಳು ತಿಳಿಸಿವೆ.

“ಆಶಾ ನಮೀಬಿಯಾದಲ್ಲಿ ಆರು ವರ್ಷಗಳ ಹಿಂದೆ 2017 ರಲ್ಲಿ ವಾಟರ್‌ಬರ್ಗ್ ಪ್ರಸ್ಥಭೂಮಿಯ ರಾಷ್ಟ್ರೀಯ ಉದ್ಯಾನವನದ ಬಳಿ ಜನಿಸಿತ್ತು. ವಿಶ್ವದ ಮೊದಲ ಖಂಡಾಂತರ ಮಾಂಸಾಹಾರಿ ಸ್ಥಳಾಂತರ ಯೋಜನೆಯ ಭಾಗವಾಗಿ ಆಕೆಯನ್ನು 2022,ಸೆಪ್ಟೆಂಬರ್ 17 ರಂದು ಭಾರತಕ್ಕೆ ಸ್ಥಳಾಂತರಿಸಲಾಗಿತ್ತು. ಈಗ ಯಶಸ್ವಿಯಾಗಿ ಮರಿಗಳಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಈಗೆಷ್ಟು ಚೀತಾಗಳಿವೆ?

ಚೀತಾ ಮರುಪರಿಚಯ ಯೋಜನೆಯಡಿಯಲ್ಲಿ,  ನಮೀಬಿಯಾದಿಂದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಆವರಣಗಳಿಗೆ ಬಿಡುಗಡೆ ಮಾಡಲಾಗಿತ್ತು. 2023 ಫೆಬ್ರವರಿಯಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ಉದ್ಯಾನವನಕ್ಕೆ ತರಲಾಗಿತ್ತು.

ಮಾರ್ಚ್ 2023 ರಿಂದ, ಕೆಎನ್‌ಪಿಯಲ್ಲಿ ವಿವಿಧ ಕಾರಣಗಳಿಂದ ಆರು ವಯಸ್ಕ ಚೀತಾಗಳು ಸಾವನ್ನಪ್ಪಿವೆ, ಮೂರು ಮರಿಗಳು ಸೇರಿದಂತೆ ಉದ್ಯಾನದಲ್ಲಿ ಚೀತಾಗಳಗಳ ಒಟ್ಟು ಸಾವಿನ ಸಂಖ್ಯೆ ಒಂಬತ್ತಾಗಿದೆ.

ಕಳೆದ ವರ್ಷ ಆಗಸ್ಟ್‌ನಿಂದ, KNP ಯಲ್ಲಿನ ಎಲ್ಲಾ 15 ಚೀತಾಗಳನ್ನು (ಏಳು ಗಂಡು, ಏಳು ಹೆಣ್ಣು ಮತ್ತು ಒಂದು ಹೆಣ್ಣು ಮರಿ) ಕುನೋ ಪಶುವೈದ್ಯರ ತಂಡವು ಅವುಗಳ ಆರೋಗ್ಯ ನಿಯತಾಂಕಗಳ ಮೇಲ್ವಿಚಾರಣೆಗಾಗಿ ಆವರಣದಲ್ಲಿ ಇರಿಸಲಾಗಿತ್ತು.15 ರಲ್ಲಿ 13 ಪ್ರಸ್ತುತ ಆವರಣದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next