Advertisement
ಅಖಂಡ ಕರ್ನಾಟಕದ ಅಭ್ಯುದಯಕ್ಕೆ ಶ್ರಮಿಸಿದ ವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಗಣನೀಯ. ಅವರು ಹಾಕಿಕೊಟ್ಟ ದೂರದೃಷ್ಟಿ ಯೋಜನೆಗಳಿಂದ ಇಂದು ನಾವೆಲ್ಲಾ ನಡೆಯುತ್ತಿದ್ದೇವೆ. ಅವರ ಅಂದಿನ ಅದೆಷ್ಟೋ ಕೊಡುಗೆ ಕೋಟ್ಯಂತರ ಜನರಿಗೆ ಲಾಭವಾಗಿದೆ ಎಂದು ತಿಳಿಸಿದ್ದಾರೆ.
Related Articles
Advertisement
ಹೆಸರಿಡಲು ಶಿಫಾರಸು ಮಾಡಲು ಮನವಿ: ಕನ್ನಂಬಾಡಿ ಅಣೆಕಟ್ಟು ನಿರ್ಮಿಸಲು ನಾಲ್ವಡಿ ಅವರು ತಮ್ಮ ಕುಟುಂಬದ ಸ್ವಂತ ಬಂಗಾರ ಮಾರಾಟ ಮಾಡಿ ಹಣ ಹೊಂದಿಸಿ ಕೊಟ್ಟರು. ಇವರ ಅಭಿವೃದ್ಧಿ ದೃಷ್ಟಿಕೋನ ಮತ್ತು ತ್ಯಾಗವನ್ನು ಬೆಂಗಳೂರಿನಿಂದ ಮೈಸೂರಿನವರೆಗೆ ಲಕ್ಷಾಂತರ ಕುಟುಂಬ ಮರೆಯಲಾಗದು. ಅವರ ಆಳ್ವಿಕೆ ಉಜ್ವಲ ಪುಷ್ಪವಾಗಿ ರೈತಾಪಿ ವರ್ಗದ ಮೇಲೆ ಅಪಾರವಾದ ಗೌರವ, ಪ್ರೀತಿ, ವಿಶ್ವಾಸವಿಟ್ಟು ದುಡಿಯುವ ಕೈಗಳ ಪರ ತೀರ್ಮಾನವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅಂದಿನ ಕಾಲದಲ್ಲೇ ಮಾಡಿರುವುದು ಯುವ ಪೀಳಿಗೆಗೆ ಮಾದರಿ. ದೇಶದ ಇತಿಹಾಸದಲ್ಲೇ ಇವರ ಆಡಳಿತ ಸುವರ್ಣಾಕ್ಷರದಲ್ಲಿ ಬರೆದಿದೆ. ಇಂತಹ ಆದರ್ಶ ಆಡಳಿತಗಾರರ ಹೆಸರು ಮುಂದಿನ ಪೀಳಿಗೆಗೆ ಶಾಶ್ವತವಾಗಿ ಉಳಿಯಲು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275ಕ್ಕೆ ಅವರ ಹೆಸರನ್ನಿಡುವುದು ಈ ಭಾಗದ ಜನರ ಅಭಿಲಾಷೆ. ಆದ್ದರಿಂದ ನಾಲ್ವಡಿ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದ್ದಾರೆ.
ಸಚಿವರಿಗೂ ಮನವಿ: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಕೆ.ಸಿ.ನಾರಾಯಣಗೌಡ ಅವರಿಗೂ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವರಾದ ಕೆ.ಗೋಪಾಲಯ್ಯ ಹಾಗೂ ಕೆ.ಸಿ.ನಾರಾಯಣ ಗೌಡ, ಒಡೆಯರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಕೇಂದ್ರ ಸಚಿವರಿಗೆ ಶಿಫಾರಸು ಮಾಡುವಂತೆ ಸಿಎಂಗೆ ಮನವಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.