Advertisement

ವಿವಾದಕ್ಕೀಡಾದ ಕಲ್ಯಾಣ ಮಂಟಪ ಹೆಸರು

06:28 PM Aug 30, 2021 | Team Udayavani |

ಹುಮನಾಬಾದ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ‌ ಹತ್ತಿರದಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಲ್ಯಾಣ ಮಂಟಪಕ್ಕೆ ಕಳೆದ ಕೆಲ ದಿನಗಳ ಹಿಂದೆ ದಿ| ಬಸವರಾಜ ಎಚ್‌. ಪಾಟೀಲ ಹೆಸರಿನ ನಾಮಫಲಕ ಅಳವಡಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

Advertisement

ಬಿಜೆಪಿ ಮುಖಂಡ ‌ ಹಾಗೂ ಕಲ್ಯಾಣ ಕರ್ನಾಟಕ ‌ ಅಭಿವೃದ್ಧಿ ಮಂಡಳಿ ಸದಸ್ಯ ಸೋಮನಾಥ ‌ ಪಾಟೀಲ, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಸರ್ಕಾರಿ ಭೂಮಿಯಲ್ಲಿ ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡ ಕಲ್ಯಾಣ ಮಂಟಪಕ್ಕೆ ದಿ| ಬಸವರಾಜ ಪಾಟೀಲ ಹೆಸರಿನ ನಾಮಫಲಕ ಅಳವಡಿಸಿರುವ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು. ಅಲ್ಲದೇ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೇ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಭಾರೀ ಸದ್ದು ನಡೆಸಿದೆ. ಅನೇಕರು ಅನೇಕ ರೀತಿಯ ಅಭಿಪ್ರಾಯಗಳು ಹಂಚಿಕೊಳ್ಳುತ್ತಿದ್ದಾರೆ.

ಪೂರ್ಣಗೊಳ್ಳದ ಕಾಮಗಾರಿ: ಪಟ್ಟಣದಲ್ಲಿ ಸುಂದರ ಕಲ್ಯಾಣ ಮಂಟಪ ‌ ನಿರ್ಮಾಣ ಮಾಡಬೇಕು ಎಂಬ ಪರಿಕಲ್ಪನೆ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ದಶಕಗಳ ಹಿಂದೆ ಇಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಬುನಾದಿ ಹಾಕಲಾಗಿತ್ತು. ಶಾಸಕರು, ವಿಧಾನ ‌ ಪರಿಷತ್‌, ಸಂಸದ ಸೇರಿದಂತೆ ವಿವಿಧ ರೀತಿಯ ಸರ್ಕಾರದ ಅನುದಾನಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಸೂಕ್ತ ಸಮಯಕ್ಕೆ ಅನುದಾನ ದೊರೆಯದ ಹಿನ್ನೆಲೆಯಲ್ಲಿ ಆಮೆಗತಿಯಲ್ಲಿ ಕಾಮಗಾರಿ
ನಡೆದಿತ್ತು. ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ.

ಮರು ನಾಮಕರಣ ಸತ್ಯಕ್ಕೆ ದೂರ: ಮೂಲಗಳ ಪ್ರಕಾರ ಸುಮಾರು 1.8 ಕೋಟಿ ವೆಚ್ಚದ ಕಾಮಗಾರಿಯಲ್ಲಿ 1.15 ಕೋಟಿ ಅನುದಾನ ಸರ್ಕಾರದಿಂದ ಲಭ್ಯವಾಗಿದೆ ಎಂದು ತಿಳಿದು ಬಂದಿದ್ದು, ಇನ್ನುಳಿ¨ ‌ ಅನುದಾನ ಶಾಸಕರ ‌ ಮಾರ್ಗಸೂಚಿಯಂತೆ ಅನುದಾನ ಹೊಂದಾಣಿಕೆ ಮಾಡಿ ಮೇಲ್ಮಹಡಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಶುಭ ಸಮಾರಂಭಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಹೆಸರು ಹೇಳಲಿಚ್ಛಿಸದಮುಖಂಡರುಮಾಹಿತಿನೀಡಿದ್ದು,
ಈ ಹಿಂದೆ ಕ ಲ್ಯಾಣ ಮಂಟಪಕ್ಕೆ ಯಾವುದೇ ಹೆಸರಿನ ನಾಮ´ ‌ಲಕ ಅಳವಡಿಸಿಲ್ಲ. ಮರು ನಾಮಕರಣ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದ್ದಾರೆ.

ಕಲ್ಯಾಣ ಮಂಟಪ ‌ ಆರಂಭಗೊಂಡಿರುವ ದಿನದಿಂದ ಈ ಭಾಗದ ಜನರು ವೀರಭದ್ರೇಶ್ವರ ಕಲ್ಯಾಣ ಮಂಟಪ ‌ ಎಂದು ಕರೆಯುವುದು ವಾಡಿಕೆಯಾಗಿ ಬೆಳೆದುಬಂದಿದೆ. ಕಾರಣ ದೇವಸ್ಥಾನದ ಪಕ್ಕದಲ್ಲಿಯೇ ಕಲ್ಯಾಣ ಮಂಟಪ ‌ ಇರುವ ಕಾರಣ ದೇವರ ಹೆಸರಲ್ಲಿ ಕರೆಯಲಾಗುತ್ತಿತ್ತು. ಇದೀಗ ನಾಮಕರಣಗೊಂಡಿರುವ ಹೆಸರಿನಲ್ಲಿ ರಾಜಕೀಯ ಆರಂಭಗೊಂಡಿದ್ದು, ಸಂಬಂಧಿಸಿದವರು ಸೂಕ್ತ ‌ ಉತ್ತರ ನೀಡಬೇಕಿದೆ.

Advertisement

ಕಲ್ಯಾಣಮಂಟದ ಮೇಲೆ ದಿ| ಬಸವರಾಜ ಪಾಟೀಲಹೆಸರು ಹಾಕಿರುವುದು ಅಕ್ಷಮ್ಯ ಅಪರಾಧ. ಜಿಲ್ಲಾ ಧಿಕಾರಿಗಳುಕೂಡಲೇಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ದೇವಸ್ಥಾನದ ಹೆಸರುಕೂಡ ಬದಲಿಸಬಹುದು. ಸದರಿ ಕಲ್ಯಾಣಮಂಟಪವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೆ ದೇವಸ್ಥಾನ ಸುಪರ್ದಿಗೆ ಒಪ್ಪಿಸಬೇಕು. ಸರ್ಕಾರಿ ಜಾಗವಾದರೆ ಬೀದರ ರಂಗಮಂದಿರದಂತೆ ಜಿಲ್ಲಾಧಿಕಾರಿ ಅಧೀನಕ್ಕೆ ಪಡೆಯಬೇಕು.
ಸೋಮನಾಥ ಪಾಟೀಲ, ಬಿಜೆಪಿ
ಮುಖಂಡ ಹಾಗೂ ಕಲ್ಯಾಣ ಕರ್ನಾಟಕ
ಅಭಿವೃದ್ಧಿ ಮಂಡಳಿ ಸದಸ್ಯ

*ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next