Advertisement

ಕೌಶಲಾಭಿವೃದ್ಧಿ ಕೇಂದ‹ ಹೆಸರಿಗಷ್ಟೆ?

03:10 AM Jul 09, 2017 | Team Udayavani |

ಹೊಸದಿಲ್ಲಿ: ದೇಶದ ಯುವ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಆರಂಭಿಸಿರುವ “ಪ್ರಧಾನ ಮಂತ್ರಿ ಕೌಶಲಾಭಿವೃದ್ಧಿ ಯೋಜನೆ’ ಕವಲುದಾರಿಯಲ್ಲಿದೆ. ಯೋಜನೆಯಡಿ ಸ್ಥಾಪಿಸಿರುವ ಸಾಕಷ್ಟು ಕೇಂದ್ರಗಳು ಅಸ್ತಿತ್ವದಲ್ಲೇ ಇಲ್ಲ. ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ ವೃತ್ತಿತರಬೇತಿಗೆ ಅಗತ್ಯವಿರುವ ಯಂತ್ರೋಪ ಕರಣಗಳಿಲ್ಲ. ಅಭ್ಯರ್ಥಿಗಳ ಪೂರೈಕೆ ಮತ್ತು ಹಣಕಾಸು ನೆರವನ್ನು ಕೂಡ ಸರಕಾರ ನಿಲ್ಲಿಸಿದೆ!

Advertisement

ಈ ಮಹತ್ವಾಕಾಂಕ್ಷಿ ಯೋಜನೆಯಡಿ ಅತಿ ಹೆಚ್ಚು ತರಬೇತಿ ಕೇಂದ್ರಗಳು ಸ್ಥಾಪನೆಯಾಗಿರುವುದು ರಾಜಸ್ಥಾನ, ಹರ್ಯಾಣ ಮತ್ತು ಉತ್ತರಪ್ರದೇಶದಲ್ಲಿ. ಯೋಜನೆ ಘೋಷಣೆ ಯಾದಾಗ ಹಲವು ಕನಸುಗಳನ್ನು ಹೊತ್ತು, ತಮ್ಮ ಜೀವಮಾನದ ಉಳಿತಾಯದ ಹಣ ವನ್ನು ಹೂಡಿಕೆ ಮಾಡಿ ಕೇಂದ್ರ ಆರಂಭಿಸಿ ದವರಿಗೆ ಈಗ ಸಚಿವಾಲಯ ಕಿಂಚಿತ್ತೂ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕೇಂದ್ರದ ಈ ವರ್ತನೆಯಿಂದ ಸಾವಿರಾರು ಮಂದಿ ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದಾರೆ.

ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮದ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಗ್ರೇಟರ್‌ ನೋಯ್ಡಾದಲ್ಲಿ ಎಸ್‌ಪಿಇಜೆ ಕೇಂದ್ರವಿದ್ದು, ಅಲ್ಲಿ ವರ್ಷಕ್ಕೆ 480 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಆದರೆ ಅಲ್ಲಿ ತಿಳಿಸಿರುವ ವಿಳಾಸದಲ್ಲಿ ತರಬೇತಿ ಕೇಂದ್ರವೇ ಇಲ್ಲ. ಇನ್ನು ಉತ್ತರ ಪ್ರದೇಶದ ಇಟಾವಾದಲ್ಲಿನ ಕೇಂದ್ರ ಕಲ್ಯಾಣ ಮಂಟಪವಾಗಿ ಬದಲಾಗಿದೆ!

ಈ ಕುರಿತು ಪ್ರತಿಕ್ರಿಯಿಸುವ ಕೌಶಲಾ ಭಿವೃದ್ಧಿ ಸಚಿವಾಲಯದ ಅಧಿಕಾರಿಗಳು, ಅಸ್ತಿತ್ವದಲ್ಲಿಲ್ಲದ ಕೇಂದ್ರಗಳ ಅನುಮತಿ ರದ್ದುಪಡಿಸಿ, ಹೊಸ ಕೇಂದ್ರ ಸ್ಥಾಪಿಸುವುದಾಗಿ ಹೇಳುತ್ತಾರೆ. ಅವ್ಯವಸ್ಥೆಯಿಂದ ಕೂಡಿರುವ ಪ್ರಧಾನಿ ಮೋದಿ ಅವರ ಕನಸಿನ ಯೋಜನೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದೇ ಈಗಿರುವ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next