Advertisement

ವಿಟ್ಲ: ಅಂಗಡಿಯ ಶಟರ್‌ ಮೇಲೆ ಜಿಹಾದ್‌ ಬರಹ

10:38 AM Oct 13, 2022 | Team Udayavani |

ವಿಟ್ಲ: ವಿಟ್ಲದ ಅಂಗಡಿಯೊಂದರ ಶಟರ್ ನಲ್ಲಿ ಯಾರೋ ಕಿಡಿಗೇಡಿಗಳು ‘Name jihad’ ಎಂದು ಬರೆದಿರುವುದು ಕಂಡು ಬಂದಿದೆ. ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್ ನ ಶಟರ್ ನಲ್ಲಿ ಈ ಪದವನ್ನು ಬರೆಯಲಾಗಿದೆ.

Advertisement

ಅ.11 ರಂದು ರಾತ್ರಿ ವೇಳೆ ಘಟನೆ ನಡೆದಿದ್ದು, ಅ.12 ರಂದು ಮುಂಜಾನೆ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಅಂಗಡಿ ಮಾಲೀಕ ಅಬ್ದುಲ್ ವಿಟ್ಲ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next