Advertisement
4-5 ತಲೆಮಾರುಗಳ ಹಿಂದೆ ವಲಸೆ ಬಂದವರು. ಹಾಗೆ ವಲಸೆ ಬರುವಾಗ ಈ ಜನಾಂಗದ ಹಿರಿಯ ವ್ಯಕ್ತಿಯೋರ್ವ ತಮ್ಮ ಕುಲದೇವರಾದ ನಿಂಬುಜಾದೇವಿಯ ವಿಗ್ರಹವನ್ನು ಇಲ್ಲಿಗೆ ತಂದಿದ್ದರು. ಈಗಿನ ನೂತನ ದೇವಾಲಯದಲ್ಲಿನ ಗರ್ಭಗೃಹದಲ್ಲಿ ದೇವರ ಮೂರ್ತಿಯ ಎದುರು ಕೈಮುಗಿದ ಭಂಗಿಯಲ್ಲಿ ಆ ಜಟ್ಟಿಯ ಚಿಕ್ಕಮೂರ್ತಿ ಇದೆ. ಇದಕ್ಕೆ ನಿತ್ಯವೂ ಪೂಜೆ ನಡೆಯುತ್ತದೆ. ಮೈಸೂರು ಅರಸರ ಕಾಲದಲ್ಲಿ ಇವರಿಗೆ ರಾಜಾಶ್ರಯ ದೊರೆತಿತ್ತು.
Related Articles
Advertisement
ದೇಗುಲದ ಸುತ್ತಮುತ್ತಲಿನ ಪ್ರದೇಶಕ್ಕೆ ಜಟ್ಟಿಗನ ಬೀದಿ ಎಂಬ ಹೆಸರಿದ್ದು, ಸುಮಾರು 50 ಜಟ್ಟಿ ಕುಟುಂಬಗಳು ವಾಸವಾಗಿವೆ. ಜಟ್ಟಿ ಜನಾಂಗದ ಪ್ರಮುಖರಾದ ಸತ್ಯನಾರಾಯಣ ಜಟ್ಟಿ, ಪಿ.ಆರ್.ವೆಂಕಟೇಶ ಜಟ್ಟಿ, ಶ್ರೀನಿವಾಸ ಜಟ್ಟಿ ಇನ್ನಿತರರ ನೇತೃತ್ವದಲ್ಲಿ ಅಭಿವೃದ್ಧಿ ಸಮಿತಿ ನಿರ್ಮಿಸಿಕೊಂಡು ಈಗ ಅತ್ಯಾಧುನಿಕ ದೇವಾಲಯವಾಗಿ ಮಾರ್ಪಟ್ಟಿದೆ. 2015 ರ ಏಪ್ರಿಲ್ ಕೊನೆ ವಾರದಲ್ಲಿ ಕೂಡಲಿಯ ಶಂಕರಾಚಾರ್ಯ ಪೀಠದ ಶ್ರೀವಿದ್ಯಾಭಿನವ ವಿದ್ಯಾರಣ್ಯ ಮಹಾಸ್ವಾಮಿಗಳಿಂದ ದೇವರ ವಿಗ್ರಹದ ಪುನರ್ ಪ್ರತಿಷ್ಠಾಪನೆ ಮತ್ತು ನೂತನ ದೇಗುಲದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಈ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಕಾರ್ತಿಕ ಮಾಸದಲ್ಲಿ ನಿತ್ಯ ಸಂಜೆ ದೀಪೋತ್ಸವ, ಯುಗಾದಿಯಂದು ಪರ್ವ ಉತ್ಸವ ಹಾಗೂ ಎಲ್ಲಾ ಹಬ್ಬಗಳಂದು ವಿಶೇಷ ಅಲಂಕಾರ ನಡೆಯುತ್ತದೆ. ಪ್ರತಿ ಮಂಗಳವಾರ, ಶುಕ್ರವಾರ,ಹುಣ್ಣಿಮೆ, ಅಮಾವಾಸ್ಯೆಗಳಂದು ಸರ್ವಾಲಂಕಾರ ಪೂಜೆ ನಡೆಯುತ್ತದೆ. ವಿದ್ಯೆ, ವಾಹನ,ಸಂತಾನ ಭಾಗ್ಯ, ಉದ್ಯೋಗ ಪ್ರಾಪ್ತಿ, ಮಾನಸಿಕ ಶಾಂತಿ ಇತ್ಯಾದಿ ನಿಮಿತ್ತ ಭಕ್ತರು ಇಲ್ಲಿಗೆ ಬಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ.
* ಎನ್.ಡಿ.ಹೆಗಡೆ ಆನಂದಪುರಂ