Advertisement

ಜರ್ಮನಿ ಚಾನ್ಸಲರ್‌ಗೆ ನಮಸ್ತೆ ಸ್ವಾಗತ ಕೋರಿದ ಫ್ರಾನ್ಸ್‌ ಅಧ್ಯಕ್ಷ

01:04 AM Aug 22, 2020 | mahesh |

ಪ್ಯಾರಿಸ್‌: “ನಮಸ್ತೆ’ ಈಗ ಜಾಗತಿಕ ಟ್ರೆಂಡ್‌ ಆಗಿದೆ. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಮತ್ತು ಜರ್ಮನಿಯ ಚಾನ್ಸಲರ್‌ ಆ್ಯಂಜೆಲಾ ಮಾರ್ಕೆಲ್‌ ಅವರು ಪರಸ್ಪರ “ನಮಸ್ತೆ’ ಮೂಲಕ ಸ್ವಾಗತಿಸಿಕೊಂಡಿದ್ದು ವಿಶೇಷವಾಗಿತ್ತು.

Advertisement

ಮೆಡಿಟರೇನಿಯನ್‌ ಹಾಲಿಡೇಗೆ ಆಗಮಿಸಿದ್ದ ಏಂಜೆಲಾ ಮಾರ್ಕೆಲ್‌ ಅವರನ್ನು ಭಾರತೀಯ ಸಂಪ್ರದಾಯದಲ್ಲಿ ಮ್ಯಾಕ್ರನ್‌ ಸ್ವಾಗತಿಸಿದ ವೀಡಿಯೋ ಈಗ ಸಾಕಷ್ಟು ವೈರಲ್‌ ಆಗಿದೆ. ಮಾರ್ಚ್‌ ನಲ್ಲಿ ಸ್ಪೇನ್‌ನ ರಾಜ ಮತ್ತು ರಾಣಿಯನ್ನು ಕೂಡ ಮ್ಯಾಕ್ರನ್‌ ನಮಸ್ತೆ ಮೂಲಕವೇ ಸ್ವಾಗತಿಸಿದ್ದರು. ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪ್ರಿನ್ಸ್‌ ಚಾರ್ಲ್ಸ್ ಜಾಗತಿಕ ವೇದಿಕೆಗಳಲ್ಲಿ “ನಮಸ್ತೆ’ ವಿನಿಮಯ ಮಾಡಿಕೊಂಡಿದ್ದರು. ಕೊರೊನಾ ಆತಂಕ ಹೆಚ್ಚುತ್ತಿದ್ದಂತೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು “ಭಾರತೀಯ ಸಂಪ್ರದಾಯದ ನಮಸ್ತೆ ಆಚರಿಸಿ, ಸೋಂಕು ಹರಡುವುದನ್ನು ತಡೆಯೋಣ’ ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, “ನಮಸ್ಕಾರವನ್ನು ಜಾಗತಿಕ ಟ್ರೆಂಡ್‌ ಮಾಡಲು ಇದೇ ಸಕಾಲ’ ಎಂದು ವಿಶ್ವಕ್ಕೆ ಕರೆಕೊಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next