ಹೊಸದಿಲ್ಲಿ : ‘ನಿರ್ದೇಶಕ ವಿಪುಲ್ ಶಾ ನನಗೆ ಕಿಸ್ ಕೊಡಲು ಯತ್ನಿಸಿದ್ದಲ್ಲದೆ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ’ ಎಂದು ನೆಟ್ ಫ್ಲಿಕ್ಸ್ ಸರಣಿ ಸೇಕ್ರೆಡ್ ಗೇಮ್ಸ್ ನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಇರಾನಿನ ನಟಿ ಅಲ್‌ನಾಜ್ ನರೋಜಿ ಆರೋಪಿಸಿದ್ದಾರೆ. ಆ ಮೂಲಕ “ಮೀ ಟೂ’ ಲೈಂಗಿಕ ಹಗರಣಕ್ಕೆ ವಿಪುಲ್ ಶಾ ಸೇರ್ಪಡೆಗೊಂಡಂತಾಗಿದೆ.
‘ಈಚೆಗೆ ಬಿಡುಗಡೆಗೊಂಡಿರುವ ನಮಸ್ತೇ ಇಂಗ್ಲಂಡ್ ಚಿತ್ರದ ಆಡಿಶನ್ ವೇಲೆ ವಿಪುಲ್ ಶಾ ನನ್ನಲ್ಲಿ ಲೈಂಗಿಕಾಸಕ್ತಿಯನ್ನು ತೋರುವ ರೀತಿಯಲ್ಲಿ ಮುಂದೊತ್ತಿ ಬಂದು ನನಗೆ ಲೈಂಗಿಕ ಕಿರುಕುಳ ನೀಡಿದರು’ ಎಂದು ಅಲ್‌ನಾಜ್, ಮಿಡ್ ಡೇ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ನನ್ನಿಂದ ಸೆಕ್ಸ್ ಫೇವರ್ ಪಡೆಯುವುದಕ್ಕಾಗಿಯೇ ಆತ (ವಿಪುಲ್ ಶಾ) ಅನೇಕ ಬಾರಿ ನನ್ನಿಂದ ಆಡಿಶನ್ ಮಾಡಿಸಿಕೊಂಡದ್ದಲ್ಲದೆ ಚಿತ್ರಕ್ಕೆ ನಾನು ಸಹಿ ಹಾಕುವುದನ್ನು ಮುಂದೂಡುತ್ತಾ ಬಂದಿದ್ದರು’ ಎಂದು ಅಲ್‌ನಾಜ್ ಹೇಳಿದ್ದಾರೆ.
“ನಾನು ವಿಪುಲ್ ಅವರನ್ನು ಕಂಡಿದ್ದ ಸಂದರ್ಭದಲ್ಲಿ ಚಿತ್ರವಿನ್ನೂ ನಿರ್ಮಾಣ ಪೂರ್ವ ಹಂತದಲ್ಲಿತ್ತು. ನನ್ನನ್ನು ಎರಡನೇ ಮುಖ್ಯ ಪಾತ್ರದಲ್ಲಿ ಹಾಕಲಾಗುತ್ತದೆ ಎಂದು ಚಿತ್ರದ ಮ್ಯಾನೇಜರ್ ನನಗೆ ಹೇಳಿದರು. ಆಗಲೇ ನಾನು ವಿಪುಲ್ ಶಾ ಅವರನ್ನು ಕಂಡೆ. ಅವರು ಬೇಗನೆ ನನ್ನನ್ನು ಚಿತ್ರಕ್ಕೆ ಸೈನ್ ಅಪ್ ಮಾಡ್ತಾರೆ ಎಂದು ನಾನು ಭಾವಿಸಿಕೊಂಡೆ. ಆದರೆ ಅವರದನ್ನು ಬೇಕೆಂದೇ ವಿಳಂಬಿಸುತ್ತಾ ಹೋದರು…’
Related Articles
“……ಆಗ ನಾನು ಒಂದು ಬಾರಿ ವಿಪುಲ್ ಅವರನ್ನು ಅವರ ಕಚೇರಿಗೆ ಹೋಗಿ ಭೇಟಿ ಮಾಡಿದೆ; ಆಗ ಅವರು ಬೇಕೇಂದೇ ನನ್ನ ಅತ್ಯಂತ ಸನಿಹಕ್ಕೆ ಬಂದು ನನ್ನ ಪ್ರಷ್ಟಕ್ಕೆ ಸಣ್ಣದಾಗಿ ಪೆಟ್ಟು ಕೊಟ್ಟರು. ಇನ್ನೆರಡು ದಿನಗಳಲ್ಲಿ ಚಿತ್ರಕ್ಕೆ ನೀನು ಸಹಿ ಮಾಡಲಿರುವೆ ಎಂದು ವಿಪುಲ್ ಹೇಳಿದರು…’
‘ನನಗೆ ಕಿಸ್ ಕೊಡುವ ಯತ್ನದಲ್ಲಿ ನನ್ನ ನಿಕಟಕ್ಕೆ ಬಂದರು; ಆದರೆ ನಾನು ಹಿಂದೆ ಸರಿದೆ. ನಾನು ಕೇಳಿದೆ : ನೀವೇನು ಮಾಡ್ತಾ ಇದ್ದೀರಿ ? ನಾವೀಗ ಆಫೀಸಿನಲ್ಲಿದ್ದೇವೆ’ ಎಂದು ಹೇಳಿ ನಾನು ಆತನನ್ನು ದೂಡಿದೆ. ಆದರೆ ನಾನು ತುಂಬ್ರಾ ಕ್ರೂಡ್ ಆಗಿ ಬಿಹೇವ್ ಮಾಡದಂತೆ ಎಚ್ಚರಿಕೆ ತೋರಿದೆ; ಏಕೆಂದರೆ ನನಗೆ ಚಿತ್ರದಲ್ಲಿ ನಟಿಸುವ ಅವಕಾಶ ಬೇಕಿತ್ತು’ ಎಂದು ಅಲ್‌ನಾಜ್ ತನ್ನ ಅನುಭವವನ್ನು ವಿವರಿಸಿದರು.