Advertisement

ಎಲ್ಲ ಮಾದರಿಯ ಕ್ರಿಕೆಟಿಗೆ ನಮನ್‌ ಓಜಾ ವಿದಾಯ : ಎರಡು ದಶಕಗಳ ಕ್ರಿಕೆಟ್‌ ಬದುಕಿಗೆ ತೆರೆ

10:52 PM Feb 15, 2021 | Team Udayavani |

ಭೋಪಾಲ್: ಭಾರತದ ಮಾಜಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ ಮನ್‌ ನಮನ್‌ ಓಜಾ ಸೋಮವಾರ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು. ತಮ್ಮ ಎರಡು ದಶಕಗಳ ಕ್ರಿಕೆಟ್‌ ಬದುಕಿಗೆ ತೆರೆ ಎಳೆದರು.

Advertisement

37 ವರ್ಷದ ನಮನ್‌ ಓಜಾ ಭಾರತದ ಪರ ಒಂದು ಟೆಸ್ಟ್‌, ಒಂದು ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದಾರೆ. 2010ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಓಜಾಗೆ ಅಂತಾರಾಷ್ಟ್ರೀಯ ಬಾಗಿಲು ತೆರೆದಿತ್ತು. ಏಕೈಕ ಟೆಸ್ಟ್‌ ಪಂದ್ಯವನ್ನು 2015ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ಆಡಿದ್ದರು. ರಣಜಿಯಲ್ಲಿ ಅತ್ಯಧಿಕ ವಿಕೆಟ್‌ ಪತನಕ್ಕೆ ಕಾರಣರಾದ ಕೀಪರ್‌ ಎಂಬ ದಾಖಲೆ ಓಜಾ ಪಾಲಿನ ಹೆಗ್ಗಳಿಕೆ.

ಉಜ್ಜಯಿನಿಯಲ್ಲಿ ಜನಿಸಿದ ನಮನ್‌ ಓಜಾ ದೇಶಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು. 146 ಪ್ರಥಮ ದರ್ಜೆ ಪಂದ್ಯಗಳಿಂದ 9,753 ರನ್‌, 22 ಶತಕ, 417 ಕ್ಯಾಚ್‌, 54 ಸ್ಟಂಪಿಂಗ್‌ ಮಾಡಿದ ದಾಖಲೆ ಓಜಾ ಹೆಸರಲ್ಲಿದೆ.

ಇದನ್ನೂ ಓದಿ:ಆಸ್ಟ್ರೇಲಿಯನ್‌ ಓಪನ್ : ನಡಾಲ್‌, ಬಾರ್ಟಿ; ಕ್ವಾರ್ಟರ್‌ ಫೈನಲ್‌ ಪಾರ್ಟಿ

Advertisement

Udayavani is now on Telegram. Click here to join our channel and stay updated with the latest news.

Next